JDS ಶಾಸಕಾಂಗ ಸಭೆ ಅಂತ್ಯ: ಕೈಗೊಂಡ ನಿರ್ಧಾರಗಳೇನು..?

By Web DeskFirst Published Jan 8, 2019, 6:28 PM IST
Highlights

ಇಂದು [ಮಂಗಳವಾರ] ನಡೆದ ಜೆಡಿಎಸ್ ಶಾಸಕಾಂಗ್ ಸಭೆ ಅಂತ್ಯವಾಗಿದ್ದು, ಹಲವು ವಿಷಯಗಳ ಬಗ್ಗೆ ಚರ್ಚೆಗಳು ನಡೆದಿವೆ. ಸಭೆಯಲ್ಲಿ ಏನೇನಾಯ್ತು ಇಲ್ಲಿದೆ ಡಿಟೇಲ್ಸ್ 

ಬೆಂಗಳೂರು, [ಜ. 08]: ಇಂದು [ಮಂಗಳವಾರ] ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಶಾಸಕಾಂಗ್ ಸಭೆ ಅಂತ್ಯವಾಗಿದ್ದು, ನಿಗಮ ಮಂಡಳಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಗಳು ನಡೆದಿವೆ. 

ಅದರಲ್ಲಿ ಪ್ರಮುಖವಾಗಿ ನಿಗಮ ಮಂಡಳಿ ಬಗ್ಗೆ ಭರ್ಜರಿ ಚರ್ಚೆಗಳು ನಡೆದಿದ್ದು, ಜೆಡಿಎಸ್ ಪಾಲಿನ ನಿಗಮ ಮಂಡಳಿಗೆ ಬೇಗ ನೇಮಕ ಾಗಲಿ ಎಂದು ಕೆಲ ಶಾಸಕರು ದೇವೇಗೌಡರಿಗೆ ಮನವಿ ಮಾಡದರು.

ಕಾಂಗ್ರೆಸ್ ಜತೆಗಿನ ಮೈತ್ರಿ ಮುರಿದುಕೊಳ್ಳುವ ಮಾತುಗಳನ್ನಾಡಿದ ಸಚಿವ ರೇವಣ್ಣ

ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಮ್ಮ ಪಕ್ಷದ ಪಾಲಿನ ಒಂದು ರಾಜಕೀಯ ಕಾರ್ಯದರ್ಶಿ, 4 ಸಂಸದೀಯ ಕಾರ್ಯದರ್ಶಿ ಹಾಗೂ 10 ನಿಗಮ ಮಂಡಳಿ ಸ್ಥಾನಗಳ ಭರ್ತಿಗೆ ನಿರ್ಧಾರ

ಇನ್ನೆರಡು ದಿನಗಳಲ್ಲಿ ನಿಗಮ ಮಂಡಳಿ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಬಿಡುಗಡೆ ಮಾಡುವ ಭರವಸೆ ನೀಡಿದ್ದು, ಇದ್ರಿಂದ ನಿಗಮ ಮಂಡಳಿಗೆ ಕಾದು ಕುಳಿತ್ತಿದ್ದ ಶಾಸಕರು ಸಂತಸಗೊಂಡಿದ್ದಾರೆ.

ಇನ್ನು ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನ ಕೆಲವರು ಮಾತನಾಡುತ್ತಿರುವ ಬಗ್ಗೆ ಜೆಡಿಎಸ್ ಶಾಸಕರು ಆಕ್ರೋಶ ವ್ಯಕ್ತಡಿಸಿದ್ದಾರೆ.

ಶಾಸಕ ಡಾ. ಸುಧಾಕರ್ ಸಿಎಂ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ನಾವೂ ಮಾತನಾಡಬೇಕಾಗತ್ತೆ. ಇದನ್ನೆಲ್ಲ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಶಾಸಕರು ಕಿಡಿಕಾರಿದ್ದಾರೆ.

ಅಷ್ಟಕ್ಕೆ ಸುಮ್ಮನಾಗದೇ ಈ ಬಗ್ಗೆ ನೀವು ಸಿದ್ದರಾಮಯ್ಯ ಜೊತೆ ಮಾತನಾಡಿ ಎಂದು ದೇವೇಗೌಡರಿಗೆ ಆಗ್ರಹಿಸಿದರು. 

click me!