Belagavi Session: ಸುವರ್ಣ ಸೌಧದಲ್ಲಿ ಸಾವರ್ಕರ್‌ ಫೋಟೋ: ಕಾಂಗ್ರೆಸ್‌ನಲ್ಲಿ ಮೂಡದ ಒಮ್ಮತ

By Sathish Kumar KHFirst Published Dec 19, 2022, 11:23 AM IST
Highlights

ಬೆಳಗಾವಿಯ ಸುವರ್ಣ ಸೌಧದ ವಿಧಾನಸಭಾ ಅಧಿವೇಶನದ ಸಭಾಂಗಣದಲ್ಲಿ ಸಾವರ್ಕರ್ ಫೋಟೊಗೆ ನಮ್ಮ ವಿರೋಧ ಇಲ್ಲ ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಚ್ಚರಿ ಮೂಡಿಸಿದ್ದಾರೆ.

ಬೆಳಗಾವಿ (ಡಿ.19): ಬೆಳಗಾವಿಯ ಸುವರ್ಣ ಸೌಧದ ವಿಧಾನಸಭಾ ಅಧಿವೇಶನದ ಸಭಾಂಗಣದಲ್ಲಿ ಸಾವರ್ಕರ್ ಫೋಟೊಗೆ ನಮ್ಮ ವಿರೋಧ ಇಲ್ಲ ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಚ್ಚರಿ ಮೂಡಿಸಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಫೋಟೋ ಅಳವಡಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ನಲ್ಲಿ ಪರ -ವಿರೋಧ ವ್ಯಕ್ತವಾಗಿದೆ.

ಈ ಕುರಿತು ಸುವರ್ಣಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು,  ರಾಷ್ಟ್ರೀಯ ನಾಯಕರ ಫೋಟೊ‌ ಇಡಬೇಕು, ದಾರ್ಶನಿಕರ ಫೋಟೊ ಇಡಬೇಕು. ನಾವು ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ಮಾಡುತ್ತೇವೆ. ಆ ಕಾರಣಕ್ಕೆ ಇವರು ವಿಷಯ ಡೈವರ್ಟ್ ಮಾಡುತ್ತಾರೆ. ಸಾವರ್ಕರ್ ಫೋಟೊ ವಿರೋಧ ಮಾಡ್ತಾ ಇಲ್ಲ. ಅದರ ಜೊತೆ ಎಲ್ಲಾ ಮಹನೀಯರ ಫೋಟೊ ಹಾಕಬೇಕು ಅದು ನಮ್ಮ ಡಿಮ್ಯಾಂಡ್‌ ಆಗಿದೆ ಎಂದು ತಿಳಿಸಿದರು. 

Assembly session: ಬೆಳಗಾವಿ ಸುವರ್ಣಸೌಧದಲ್ಲಿ ವೀರ್ ಸಾವರ್ಕರ್‌ ಫೋಟೋ ಅನಾವರಣ

ಇನ್ನು ನಾವು ವಿಧಾನಸೌಧದ ಮುಂದೆ ಧರಣಿ ಮಾಡುತ್ತಿಲ್ಲ. ಇದು ನಮ್ಮ ಬೇಡಿಕೆಯಾಗಿದೆ. ಫೋಟೊ ಇಡುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತಗೋಬೇಕು. ಆಗ ಮಾತ್ರ ಫೋಟೊ ಅಸೆಂಬ್ಲಿ ಸ್ವತ್ತಾಗುತ್ತದೆ. ಕನಿಷ್ಟ ಸಲಹಾ ಸಮಿತಿ ಸಭೆಯಲ್ಲಿ ಆದರೂ ಚರ್ಚೆ ಆಗಬೇಕು. ನಾನು ಬೆಳಗಾವಿ ಬಂದಾಗ ಮಾಧ್ಯಮದವರು ಕೇಳುವವರೆಗೂ ನನಗೆ ಈ ಬಗ್ಗೆ ಗೊತ್ತೇ ಇರಲಿಲ್ಲ. ಯಾರ ಫೋಟೊ ಇಡೋದಕ್ಕೂ ನಮ್ಮ ವಿರೋಧ ಇಲ್ಲ. ಆದರೆ ಫೋಟೊ ಇಡುವಾಗ ಚರ್ಚೆ ಆಗಬೇಕು ಎಂದು ಹೇಳಿದರು.

ಸಾವರ್ಕರ್‌ ವಿವಾದಿತ ಫಿಗರ್: ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು, ಈ ಸರ್ಕಾರ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಮರೆತಿದೆ. ಇಲ್ಲಿ ಅನೇಕ ಘಟನೆಗಳು ನಡೆದಿವೆ. ಇದನ್ನು ದಾರಿ ತಪ್ಪಿಸಲು ಸಾವರ್ಕರ್‌ ಫೋಟೋ ಅಳವಡಿಕೆ ವಿಚಾರ ಮುಂದೆ ಇಟ್ಟಿದ್ದಾರೆ. ಈ ಬಗ್ಗೆ ನನಗೆ ಸ್ಪೀಕರ್ ಕಚೇರಿ ಇಂದ ಕಾಲ್ ಬಂದಿತ್ತು. ಅಂಬೇಡ್ಕರ್ ಗಾಂಧಿಜಿ ಫೋಟೊ‌ ಹಾಕೋದಾಗಿ ಹೇಳಿದ್ದರು. ಆದರೆ, ಮಾಧ್ಯಮದ ಮೂಲಕ ಸಾವರ್ಕರ್ ಫೋಟೊ ಹಾಕೋದು ಗೊತ್ತಾಯ್ತು. ಆದರೆ, ಸಾವರ್ಕರ್ ವಿವಾದದ ಫಿಗರ್ ಆಗಿದ್ದಾರೆ. ಭಾರತಕ್ಕೂ, ಕರ್ನಾಟಕಕ್ಕೂ ಸಾವರ್ಕರ್ ಏನು ಸಂಬಂಧ ಎಂದು ಫೋಟೋ ಅಳವಡಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ

Assembly session: ಬೆಳಗಾವಿ ಸುವರ್ಣಸೌಧದಲ್ಲಿ ವೀರ್ ಸಾವರ್ಕರ್‌ ಫೋಟೋ ಅನಾವರಣ

ಗಲಾಟೆ ನಡುವೆ ಬಿಲ್‌ ಪಾಸ್‌ ಮಾಡುವ ಹುನ್ನಾರ:  ಜೆಡಿಎಸ್ ಉಪನಾಯಕ ಬಂಡೇಪ್ಪ  ಕಾಶಂಪೂರ್ ಮಾತನಾಡಿ, ಸಾವರ್ಕರ್ ಪೋಟೋ ಅನಾವರಣ ಬಿಜೆಪಿಯ ಇಡನ್ ಅಜೆಂಡಾ ಆಗಿದೆ. ಇವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಇಷ್ಟು ದಿನ ಸುಮ್ಮನಿದ್ದು, ಈಗ ತರುವ ಅವಶ್ಯಕತೆ ಏನಿತ್ತು? ಸಮಸ್ಯೆಗಳ ಬಗ್ಗೆ ಚರ್ಚೆ ಬೇಕಾಗಿಲ್ಲ. ಗಲಾಟೆ ನಡುವೆ ಬಿಲ್ ಪಾಸ್ ಮಾಡಿಕೊಳ್ಳಲು ಹೊರಟಿದ್ದಾರೆ‌. ನಾವು ಜನಪರವಾಗಿದ್ದೇವೆ, ಅದಕ್ಕೆ ಹೆಚ್ಡಿಕೆ ಪಂಚರತ್ನ ಮಾಡಿದ್ದಾರೆ. ಅವರು ಪಂಚರತ್ನದಲ್ಲಿ ಭಾಗಿಯಾಗುತ್ತಾರೆ. ನಾಳೆ ಜೆಡಿಎಲ್‌ಪಿ ಸಭೆ ಮಾಡಿ, ಯಾವ ವಿಷಯಗಳು ಪ್ರಸ್ತಾಪ  ಮಾಡಬೇಕು ಎಂದು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

click me!