Pancharatna Rathayatra: ನಿಮ್ಮ ಮಡಿಲಿಗೆ ನಿಖಿಲ್‌ ಹಾಕಿದ್ದೇನೆ, ಮನೆ ಮಗನಂತೆ ಬೆಳೆಸಿ: ಎಚ್‌.ಡಿ.ಕುಮಾ​ರ​ಸ್ವಾಮಿ

By Govindaraj S  |  First Published Dec 19, 2022, 3:20 AM IST

ನಾನು ರಾಜ​ಕಾ​ರ​ಣ​ದಲ್ಲಿ ಬೇರೆ​ಯ​ವ​ರಂತೆ ಗಣಿ​ಗಾ​ರಿಕೆ ಮಾಡಿ ಸಂಪತ್ತು ಲೂಟಿ ಮಾಡಿಲ್ಲ. ಶಾಪಿಂಗ್‌ ಮಾಲ್‌, ಶಿಕ್ಷಣ ಸಂಸ್ಥೆ​ಗ​ಳನ್ನು ಕಟ್ಟಲು ಹಣ ಮಾಡ​ಲಿಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಹೇಳಿದ್ದಾರೆ.


ಹಾರೋ​ಹಳ್ಳಿ/ರಾಮ​ನ​ಗರ (ಡಿ.19): ನಾನು ರಾಜ​ಕಾ​ರ​ಣ​ದಲ್ಲಿ ಬೇರೆ​ಯ​ವ​ರಂತೆ ಗಣಿ​ಗಾ​ರಿಕೆ ಮಾಡಿ ಸಂಪತ್ತು ಲೂಟಿ ಮಾಡಿಲ್ಲ. ಶಾಪಿಂಗ್‌ ಮಾಲ್‌, ಶಿಕ್ಷಣ ಸಂಸ್ಥೆ​ಗ​ಳನ್ನು ಕಟ್ಟಲು ಹಣ ಮಾಡ​ಲಿಲ್ಲ ಎಂದು ಮಾಜಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ವಿರುದ್ಧ ಕಿಡಿಕಾರಿದ್ದಾರೆ. ರಾಮನಗರದಲ್ಲಿ ನಡೆಯುತ್ತಿರುವ ಪಂಚ​ರತ್ನ ರಥ​ಯಾತ್ರೆ ವೇಳೆ ಹಾರೋ​ಹ​ಳ್ಳಿ-ಮರ​ಳ​ವಾ​ಡಿಯಲ್ಲಿ ಬಹಿ​ರಂಗ ಸಭೆ​ಯಲ್ಲಿ ಮಾತ​ನಾ​ಡಿದ ಅವರು, ರಾಜ​ಕಾ​ರ​ಣಕ್ಕೆ ಬರು​ವು​ದಕ್ಕೂ ಮುಂಚೆ ಬಿಡ​ದಿಯ ಕೇತ​ಗಾ​ನ​ಹ​ಳ್ಳಿ​ಯಲ್ಲಿ ಕೃಷಿ ಮಾಡಿ ಸಂಪಾ​ದನೆ ಮಾಡಿ​ದಷ್ಟೇ ನನ್ನ ಆಸ್ತಿ. 

ಶಾಪಿಂಗ್‌ ಮಾಲ್‌, ಕಟ್ಟಡ ಕಟ್ಟಲು ರಾಜ​ಕಾ​ರ​ಣ​ದಲ್ಲಿ ಹಣ ಮಾಡಿಲ್ಲ. ನಾನು ಯಾವ ರೀತಿ ಬದು​ಕಿ​ದ್ದೇನೆ ಎಂಬು​ದನ್ನು ನೀವೇ ನೊಂಡಿ​ದ್ದೀರಿ. ಇಲ್ಲಿ ಪ್ರತಿ​ಯೊಂದು ಅಭಿ​ವೃದ್ಧಿ ಕಾಮ​ಗಾ​ರಿ​ಗ​ಳಿಗೂ ಅಡ್ಡಿ ಮಾಡು​ತ್ತಾರೆ. ಆದರೂ ನಿಮ್ಮ ಕಷ್ಟ ಮತ್ತು ಸಮ​ಸ್ಯೆ​ಗ​ಳಿಗೆ ನಾವಿ​ದ್ದೇವೆ. ನಿಮ್ಮ ಮಡಿ​ಲಿಗೆ ನಿಖಿಲ್‌ ನನ್ನು ಹಾಕಿ​ದ್ದೇನೆ. ಅವ​ನನ್ನು ಯಾವ ರೀತಿ​ಯಲ್ಲಿ ಬೆಳೆ​ಸು​ತ್ತೀರಾ ಎಂಬುದು ನಿಮಗೆ ಬಿಟ್ಟಿದ್ದು. ನನ್ನ ಹಾಗೂ ನಮ್ಮ ತಂದೆ​ಯ​ವ​ರಂತೆ ಅವ​ನನ್ನು ನಿಮ್ಮ ಮನೆ ಮಗ​ನಾಗಿ ಬೆಳೆ​ಸಿ ಎಂದು ಮನವಿ ಮಾಡಿ​ದ​ರು.

Tap to resize

Latest Videos

ರಾಮ​ನ​ಗರ ಕ್ಷೇತ್ರ​ದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಶಕ್ತಿ ಪ್ರದ​ರ್ಶನ

ತಾಲೂ​ಕು​ ಘೋಷ​ಣೆ​ಯಲ್ಲಿ ಅನಿತಾ ಪಾತ್ರ: ಹಾರೋಹಳ್ಳಿಯ ಪೇಟೆ ಬೀದಿ ನೋಡಿ ನೋವಾ​ಯಿತು. ಅಲ್ಲಿ ರಸ್ತೆ, ಚರಂಡಿ ವ್ಯವಸ್ಥೆಗಳು ಹಾಳಾಗಿವೆ. ಇದಕ್ಕೆ ಬಿಜೆಪಿ ಸರ್ಕಾರದ ಕುತಂತ್ರ ಕಾರಣವೇ ಹೊರತು ನಾನಾಗಲಿ ಅಥವಾ ಶಾಸಕಿ ಅನಿತಾ ಕುಮಾರಸ್ವಾಮಿ ಅಲ್ಲ. ನನ್ನ ಸರ್ಕಾರ ಬಂದ ಕೂಡಲೇ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿ​ಸು​ತ್ತೇನೆ ಎಂದ​ರು. ಹಾರೋಹಳ್ಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ್ದೇವೆ. ಇದ​ರಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಪ್ರಯತ್ನವೂ ಇದೆ. ಈಗಾಗಲೇ 12ಕ್ಕೂ ಹೆಚ್ಚು ಅಧಿಕಾರಗಳನ್ನು ನೇಮಕ ಮಾಡಲಾಗಿದೆ. ಆದರೆ, ಪಕ್ಕದ ಕ್ಷೇತ್ರದ ಮಹಾನುಭಾವರು ಆಡಳಿತ ವ್ಯವಸ್ಥೆ ಹಾಳುಗೆಡುವಿದ್ದಾರೆ ಎಂದು ಡಿಕೆ ಸಹೋ​ದ​ರರ ವಿರುದ್ಧ ಕುಮಾ​ರ​ಸ್ವಾಮಿ ಕಿಡಿ​ಕಾ​ರಿ​ದರು.

ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಮಾತ​ನಾಡಿ, ಯಾರು ಎಷ್ಟೇ ಪಿತೂರಿ ಮಾಡಿ​ದರು ಹಾರೋ​ಹ​ಳ್ಳಿ​ಯನ್ನು ತಾಲೂಕು ಅನ್ನಾಗಿ ಮಾಡಿ​ದ್ದೇವೆ. ನಾನು ಸಹ ಕುಮಾ​ರ​ಸ್ವಾಮಿ ಅವ​ರಂತೆಯೇ ಶ್ರಮ ಹಾಕಿ ಪ್ರಾಮಾ​ಣಿ​ಕ​ವಾಗಿ ಕೆಲಸ ಮಾಡಿ​ದ್ದೇನೆ ಎಂದು ಹೇಳಿ​ದ​ರು. ಸಾಗುವಳಿ ಚೀಟಿ ಸೇರಿದಂತೆ ಈ ಭಾಗದ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದೇನೆ. ಹಲವು ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದೇನೆ. ನಾಳೆಯೇ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಿದ್ದೇನೆ. ನನಗೆ ಕೊಟ್ಟ ಪ್ರೀತಿ ವಿಶ್ವಾಸವನ್ನು ನನ್ನ ಮಗನಿಗೂ ನೀಡಿ ಎಂದು ಮನವಿ ಮಾಡಿ​ದ​ರು.

ಎಚ್‌ಡಿಕೆ ಮೇಲಿನ ವಿಶ್ವಾಸಕ್ಕೆ ರಥಯಾತ್ರೆಯೇ ಸಾಕ್ಷಿ: ನಿಖಿಲ್‌ ಕುಮಾ​ರ​ಸ್ವಾ​ಮಿ

ನನ್ನ ಅಧಿ​ಕಾರ ದುರ್ಬಳಸಿ​ಕೊಂಡಿಲ್ಲ: ಈ ರಾಜ್ಯದಲ್ಲಿ ಮುಖ್ಯ​ಮಂತ್ರಿ​ಯಾ​ಗಿ​ದ್ದ​ವರ ಹಲವರ ಮಕ್ಕಳು ಅಧಿ​ಕಾ​ರ​ವನ್ನು ಯಾವರೀತಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬು​ದನ್ನು ನೋಡಿ​ದ್ದೀರಿ. ಆದರೆ ನಿಖಿಲ ಕುಮಾರಸ್ವಾಮಿ ಯಾವತ್ತೂ ಸಹ ನಾನು ಮುಖ್ಯ​ಮಂತ್ರಿ ಆಗಿ​ದ್ದಾಗ ಬರಲಿಲ್ಲ. ಆ ರೀತಿಯಲ್ಲಿ ನನ್ನ ಮಗ​ನನ್ನು ಬೆಳೆ​ಸಿ​ದ್ದೇನೆ. ಅವ​ನನ್ನು ಬೆಳೆ​ಸುವುದು ನಿಮ್ಮ ಜವಾ​ಬ್ದಾರಿ ಎಂದು ಹೇಳಿ​ದ​ರು. ಮತ್ತೊಂದು ಪಕ್ಷದ ಜೊತೆಗೆ ಸೇರಿ ಕೆಲಸ ಮಾಡಲು ಆಗುವು​ದಿಲ್ಲ. ಈಗಾ​ಗಲೇ ಬಿಜೆ​ಪಿ​ಯ​ವರು ತೆರಿಗೆ ಹಣವನ್ನು ಲೂಟಿ ಮಾಡಿದ್ದಾರೆ. ನೀವು ಕಟ್ಟುವ ತೆರಿಗೆ ಹಣ ಲೂಟಿ ಆಗದಂತೆ ಕಾಪಾಡುತ್ತೇನೆ. ಈ ಬಾರಿ ಸ್ವತಂತ್ರವಾಗಿ ಕೆಲಸ ಮಾಡಲು ಸ್ಪಷ್ಟಬಹುಮತ ನೀಡು​ವಂತೆ ಕುಮಾ​ರ​ಸ್ವಾಮಿ ಜನ​ರಲ್ಲಿ ಕೋರಿ​ದರು.

click me!