ಲೋಕಸಭಾ ಚುನಾವಣೆಗೆ ಸ್ಪರ್ಧೆ ಖಚಿತ: ಸತ್ಯಜಿತ್ ಸುರತ್ಕಲ್

By Kannadaprabha NewsFirst Published Feb 26, 2024, 4:23 AM IST
Highlights

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆ ನನಗೆ ಚುನಾವಣೆಯಲ್ಲಿ ನಿಲ್ಲುವ ಭರವಸೆ ನೀಡಿದ್ದರು. ಕಳೆದ ೫ ವರ್ಷದಿಂದ ಅವರಿಂದ ಯಾವುದೇ ಮಾತಿಲ್ಲ. ನನಗೆ ವೈಯಕ್ತಿಕವಾಗಿ ಯಾವುದೂ ಬೇಡ. ಈಗ ನಾನು ರಾಜಕೀಯ ಮತ್ತು ಸಾಮಾಜಿಕ ಬಲಿದಾನಕ್ಕೆ ಸಿದ್ಧನಾಗಿದ್ದೇನೆ ಎಂದು ತಿಳಿಸಿದ ಸತ್ಯಜಿತ್ ಸುರತ್ಕಲ್ 

ಬಂಟ್ವಾಳ(ಫೆ.26):  ೧೫ ವರ್ಷದ ಹಿಂದೆ ನನಗೆ ಬಿಜೆಪಿಯಿಂದ ಸಿಗಬೇಕಾದ ಲೋಕಸಭಾ ಟಿಕೆಟ್‌ ಕಸಿಯಲಾಗಿತ್ತು. ಈಗ ಅದನ್ನು ಮತ್ತೆ ಕೊಡಿ ಎಂದು ಕೇಳುವುದು ನನ್ನ ಹಕ್ಕು. ಈ ಸಲದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಕರ್ತರ ಅಭಿಲಾಷೆಯಂತೆ ಸ್ಪರ್ಧಿಸುವುದು ಖಚಿತ ಎಂದು ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ಟೀಂ ಸತ್ಯಜಿತ್ ಸುರತ್ಕಲ್ ದ.ಕ. ಜಿಲ್ಲೆ ವತಿಯಿಂದ ತುಂಬೆ ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ಭಾನುವಾರ ನಡೆದ ಸತ್ಯಜಿತ್ ಸುರತ್ಕಲ್ ಅವರಿಗೆ ಬಿಜೆಪಿ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಆಗ್ರಹಿಸಿ ನಡೆದ ಜನಾಗ್ರಹ ಸಮಾವೇಶದಲ್ಲಿ ಅವರು ಮಾತನಾಡಿದರು.

ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ವಿಜಯೇಂದ್ರ ಗ್ರೀನ್ ಸಿಗ್ನಲ್: ಸ್ಥಾನಮಾನದ್ದೇ ಗೊಂದಲ..!

ನಾನು ಕಳೆದ ೩೭ ವರ್ಷದಿಂದ ಹಿಂದೂ ಸಂಘಟನೆಯಲ್ಲಿ ದುಡಿದಿದ್ದೇನೆ, ಕಾರ್ಯಕರ್ತರಲ್ಲಿ ಒಬ್ಬನಾಗಿ ದುಡಿದಿದ್ದೇನೆ, ಕಾರ್ಯಕರ್ತರನ್ನು ಬಿಟ್ಟು ಸತ್ಯಜಿತ್ ಇಲ್ಲ. ಸಂಘಟನೆಯ ಹೋರಾಟದಲ್ಲಿ ಕಾರ್ಯಕರ್ತರ ಧ್ವನಿಯಾಗಿ ಕೆಲಸವನ್ನು ಮಾಡಿದ್ದೇನೆ. ಇದರಿಂದ ನಾನು ಈ ಹಂತಕ್ಕೆ ಬಂದಿದ್ದೇನೆ. ಸತ್ಯಜಿತ್ ಭಾವನಾತ್ಮಕ ಜೀವಿಯಾಗಿದ್ದರೂ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆ ನನಗೆ ಚುನಾವಣೆಯಲ್ಲಿ ನಿಲ್ಲುವ ಭರವಸೆ ನೀಡಿದ್ದರು. ಕಳೆದ ೫ ವರ್ಷದಿಂದ ಅವರಿಂದ ಯಾವುದೇ ಮಾತಿಲ್ಲ. ನನಗೆ ವೈಯಕ್ತಿಕವಾಗಿ ಯಾವುದೂ ಬೇಡ. ಈಗ ನಾನು ರಾಜಕೀಯ ಮತ್ತು ಸಾಮಾಜಿಕ ಬಲಿದಾನಕ್ಕೆ ಸಿದ್ಧನಾಗಿದ್ದೇನೆ ಎಂದು ತಿಳಿಸಿದರು.

ರಾಜ್ಯದ ವಿವಿಧ ಸಂಘಟನೆಗಪ್ರಮುಖರಾದ ರವಿರಾಜ್ ಬಿ.ಸಿ.ರೋಡ್, ಅಚ್ಚುತ ಅಮೀನ್ ಕಲ್ಮಾಡಿ, ಸುಬ್ರಹ್ಮಣ್ಯ ಶೃಂಗೇರಿ, ಕೆ.ಟಿ. ಮಂಜುನಾಥ, ಮಂಜುನಾಥ ದಾವಣಗೆರೆ, ಟಿ.ಪಿ. ಗಾಂಧಿ, ಸಂದೀಪ್ ಆಂಬ್ಲಮೊಗರು, ಸಂದೀಪ್ ಪಂಪ್‌ವೆಲ್, ಕೃಷ್ಣಮೂರ್ತಿ ಬೆಂಗಳೂರು, ನಾಗರಾಜ್, ಆದರ್ಶ್‌ ಶಿವಮೊಗ್ಗ, ರುದ್ರೇಶ್ ಬಿ., ಹವ್ದಾರ್ ಸುನಿಲ್ ಕುಮಾರ್, ಭಾಸ್ಕರ ರೈ, ಭಾಸ್ಕರ ರಾವ್, ಪ್ರವೀಣ್ ಮೂಡಿಗೆರೆ, ಮಜುನಾಥ ಚೆಳ್ಳೆಕೆರೆ, ಜಗದೀಶ್ ನೆತ್ರೆಕೆರೆ, ಜನಾರ್ದನ ತೊಪ್ಪತ್ತಾಡಿ, ಕರುಣಾಕರ ಗೌಡ, ಧನಂಜಯ ಪಟ್ಲ, ಕೃತೀ ಮುಳ್ಳಿಕೆರೆ, ಮುನಿರಾಜ್ ದಾವಣಗೆರೆ, ಸುಕೇಶ್ ಶೆಟ್ಟಿ ಕಿನ್ನಿಗೋಳಿ, ಪ್ರದೀಪ್ ಬಜಿಲಗೇರಿ, ನಾಗರಾಜ್ ಇದ್ದರು.

click me!