ಸಂಸದರ ಅನುದಾನದಲ್ಲಿ ಸುಮಾರು ₹5 ಲಕ್ಷ ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಜನತೆಯ ಬೇಡಿಕೆಗಳಿಗೆ ಸ್ಪಂದಿಸಿ ಸಮುದಾಯ ಭವನ ಮಂಜೂರ ಮಾಡಿದ್ದು ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದ ಸಂಸದೆ ಮಂಗಲಾ ಅಂಗಡಿ
ಬೈಲಹೊಂಗಲ(ಫೆ.26): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರದ ಅವಧಿಯಲ್ಲಿ ದೇಶದ ಸಮಗ್ರ ಏಳ್ಗೆಯ ಜೊತೆಗೆ ಭಾರತೀಯ ಸಂಸ್ಕ್ರತಿ, ಪರಂಪರೆಗೆ ಉತ್ತೇಜನ ನೀಡುತ್ತಿರುವ ಕಾರ್ಯ ಅನನ್ಯವಾಗಿದೆ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.
ಅವರು ಪಟ್ಟಣದ ಪತ್ರಿ ಬಸವ ನಗರದಲ್ಲಿನ ಪತ್ರಿ ಬಸವನಗರದ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾನುವಾರ ಅನುಭವ ಮಂಟಪದ ಆವರಣದಲ್ಲಿ ನಡೆದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪ್ರಧಾನಿ ಅವರ ಆಡಳಿತ ಕಾರ್ಯ ವೈಖರ್ಯಕ್ಕೆ ಇಡೀ ವಿಶ್ವವೇ ಬೆರಗಾಗಿದೆ ಎಂದರು. ಸಂಸದರ ಅನುದಾನದಲ್ಲಿ ಸುಮಾರು ₹5 ಲಕ್ಷ ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಜನತೆಯ ಬೇಡಿಕೆಗಳಿಗೆ ಸ್ಪಂದಿಸಿ ಸಮುದಾಯ ಭವನ ಮಂಜೂರ ಮಾಡಿದ್ದು ಇದನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಮಾಡುವುದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಮಾಜಿ ಶಾಸಕ ಜಗದೀಶ ಮೆಟಗುಡ್ಡ. ಮಂಡಳ ಅಧ್ಯಕ್ಷ ಗುರುಪಾದ ಕಳ್ಳಿ, ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್ಡ, ಸುಭಾಶ ತುರಮರಿ, ಪತ್ರಿ ಬಸವನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಪ್ರೇಮಾ ಅಂಗಡಿ, ಸಾಗರ ಭಾಂವಿಮನಿ, ಬಸವರಾಜ ದೊಡಮನಿ, ಶಾಂತಾ ಮಡ್ಡಿಕಾರ, ಗಂಗಪ್ಪ ಅಂಗಡಿ, ದುಂಡಯ್ಯ ಕುಲಕರ್ಣಿ, ಪಿ.ಬಿ.ಕಡಕೋಳ, ಎಂ.ಜಿ.ಬೋಳಣ್ಣವರ, ಹಣುಮಂತಪ್ಪ ಮಾಸ್ತಮ್ಮನವರ, ಡಿ.ಐ. ಬಿಜಗುಪ್ಪಿ, ಎಂ.ಎಂ.ಕರಡಿಗುದ್ದಿ ಚಂದ್ರಗೌಡಾ ಪಾಟೀಲ ಮುಂತಾದವರು ಇದ್ದರು. ಅನುರಾಧಾ ಕರಡಿಗುದ್ದಿ ಸ್ವಾಗತಿಸಿ, ನಿರೂಪಿಸಿದರು.