ಮೋದಿ ಜತೆ ದೇಶ ಸೇವೆ ಸಲ್ಲಿಸುವ ಬಯಕೆ ಇದೆ: ಭಾಸ್ಕರ್‌ ರಾವ್

By Kannadaprabha News  |  First Published Feb 26, 2024, 3:00 AM IST

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ ಮೇಲೆ ನಾನು ರಾಜಕಾರಣಕ್ಕೆ ಬಂದಿರುವೆ. ಅವಕಾಶ ಸಿಕ್ಕರೆ ನೀವು ನಮ್ಮ ಮೇಲಿಟ್ಟಿರುವ ಭರವಸೆಯನ್ನು ಖಂಡಿತಾ ಉಳಿಸಿಕೊಳ್ಳುವೆ: ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್ 


ಮೈಸೂರು(ಫೆ.26):  ಪ್ರಧಾನಿ ಮೋದಿ ಅವರು ವಿಶ್ವಮಾನ್ಯ ನಾಯಕರಾಗಿದ್ದಾರೆ. ಅವರ ಅಧೀನದಲ್ಲಿ ದೇಶ ಸೇವೆ ಮಾಡಬೇಕೆಂಬ ಅದಮ್ಯ ಬಯಕೆ ಇದೆ. ನೀವೆಲ್ಲರೂ ಮೈಸೂರು- ಕೊಡಗು ಲೋಕಸಭೆಯಲ್ಲಿ ಸ್ಪರ್ಧೆ ಮಾಡಲು ಸಮುದಾಯದ ಬೆಂಬಲ ನನಗೆ ಬಹಳ ಮುಖ್ಯ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್ ತಿಳಿಸಿದರು.

ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾದಲ್ಲಿ ಮೈಸೂರು ವಿಪ್ರ ಬಳಗವು ಶನಿವಾರ ಆಯೋಜಿಸಿದ್ದ ವಿಪ್ರ ಸಂಗಮ- 2024 ಮೈಸೂರು- ಕೊಡಗು ಲೋಕಸಭಾ ಚುನಾವಣೆ ಬಗ್ಗೆ ಸಂವಾದದಲ್ಲಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ ಮೇಲೆ ನಾನು ರಾಜಕಾರಣಕ್ಕೆ ಬಂದಿರುವೆ. ಅವಕಾಶ ಸಿಕ್ಕರೆ ನೀವು ನಮ್ಮ ಮೇಲಿಟ್ಟಿರುವ ಭರವಸೆಯನ್ನು ಖಂಡಿತಾ ಉಳಿಸಿಕೊಳ್ಳುವೆ ಎಂದು ಹೇಳಿದರು.

Latest Videos

undefined

ವ್ಯಂಗ್ಯಚಿತ್ರಕಾರರಿಗೆ ಪತ್ರಿಕೋದ್ಯಮದಲ್ಲಿ ಹೆಚ್ಚಿನ ಮನ್ನಣೆ ದೊರೆಯಬೇಕು: ಸಂಸದ ಪ್ರತಾಪ್ ಸಿಂಹ

ನಾನು ಪೊಲೀಸ್ ಇಲಾಖೆಯಲ್ಲಿ ಸತತ 34 ವರ್ಷ ಕೆಲಸ ಮಾಡಿದ್ದೇನೆ. ಇಡೀ ಸೇವೆಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಕೆಲಸ ಮಾಡಿದ ತೃಪ್ತಿ ನನಗಿದೆ. ನಾನೂ ಮೂಲತಃ ಮೈಸೂರು ಜಿಲ್ಲೆಯವನೇ, ನಂಜನಗೂಡು ತಾಲೂಕಿನ ಕಳಲೆ ನಮ್ಮ ಹುಟ್ಟೂರು. ನಮ್ಮ ಪೂರ್ವಿಕರೆಲ್ಲರೂ ಮೈಸೂರಿನಲ್ಲೇ ನೆಲೆಸಿದ್ದರು. ನಮ್ಮ ತಾತ ಮೊದಲ ಮಹಾ ಯುದ್ಧದಲ್ಲಿ ಮೈಸೂರ್‌ಲ್ಯಾನ್ಸರ್ ಸೇನೆಯಲ್ಲಿ ಅಶ್ವಪಡೆ ಸೈನಿಕರಾಗಿ ಇಸ್ರೇಲ್ ಗೆ ಹೋಗಿ ಹೋರಾಡಿ ಬಂದಿದ್ದರು ಎಂದು ಅವರು ಸ್ಮರಿಸಿದರು.

ಬ್ರಾಹ್ಮಣ ಸಮುದಾಯ ಸ್ವಾಭಿಮಾನದ

ಬದುಕು ಕಟ್ಟಿಕೊಳ್ಳಬೇಕು. ಬ್ರಾಹ್ಮಣ ಸಮುದಾಯದ ಬಡವರನ್ನು ಉದ್ಧಾರ ಮಾಡುವ ಕೆಲಸ ಮಾಡಬೇಕು. ಜೈನ್ ಮತ್ತು ಸಿಖ್ ಧರ್ಮದಲ್ಲಿ ಬಡವರನ್ನು ಮೇಲೆತ್ತಲು ಇಡೀ ಸಮುದಾಯದವರೇ ಟೊಂಕ ಕಟ್ಟಿ ನಿಲ್ಲುತ್ತಾರೆ. ಅಂತಹದ್ದೇ ಮನೋಭಾವ ಸಮುದಾಯದಲ್ಲೂ ಬ್ರಾಹ್ಮಣ ಬರಬೇಕು. ಬ್ರಾಹ್ಮಣರಲ್ಲಿ ಸಂಸ್ಕಾರ ಮತ್ತು ಬುದ್ಧಿವಂತಿಕೆ ಇದೆ. ಆದರೆ, ಆರ್ಥಿಕವಾಗಿ ದುರ್ಬಲರಾದವರೂ ಇದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಿತಿವಂತ ಬ್ರಾಹ್ಮಣರು ಬಡವರ ಬಗ್ಗೆ ಪ್ರೀತಿ ಮತ್ತು ಬರಬೇಕು ಎಂದು ಅವರು ತಿಳಿಸಿದರು.

ನೀವೇನು ಸತ್ಯವಂತರಾ, ನಿಮ್ಮಪ್ಪನನ್ನು ಜೈಲಿಗೆ ಹಾಕಿಸಿದ್ದೇ ನೀವು ಅಲ್ಲವೇ?: ವಿಜಯೇಂದ್ರ ವಿರುದ್ಧ ವಿಶ್ವನಾಥ್ ವಾಗ್ದಾಳಿ

ಭಾಸ್ಕರ್‌ರಾವ್ ಗೆ ಟಿಕೆಟ್ ಕೊಡಲು ಆಗ್ರಹ ಸಂವಾದದಲ್ಲಿ ವಿಪ್ರ ಮುಖಂಡರು, ಈ ಬಾರಿ ಮೈಸೂರು ಲೋಕಸಭೆಯಿಂದ ಭಾಸ್ಕರ್‌ರಾವ್ ಅವರಿಗೆ 6363 ನೀಡುವಂತೆ ಒತ್ತಾಯಿಸಿದರು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬ್ರಾಹ್ಮಣರ 2.60. ಲಕ್ಷ ಮತಗಳಿವೆ. ಒಂದು ಬಾರಿಯೂ ಬ್ರಾಹ್ಮಣರಿಗೆ ಲೋಕಸಭೆ ಟಿಕೆಟ್ ನೀಡಿಲ್ಲ, ಈ ಬಾರಿ ಮೈಸೂರಿಗರೇ ಆಗಿರುವ ಭಾಸ್ತರ್‌ರಾವ್ ಅವರಿಗೆ ಟಿಕೆಟ್ ಕೊಡಲಿ ಎಂದು ಆಗ್ರಹಿಸಿದರು.

ಇದೇ ವೇಳೆ ವಿಪ್ರ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು. ಅಲ್ಲದೆ, ನಿಮ್ಮ ಭಾಸ್ಕರ್‌ರಾವ್ ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.  ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಕೇಶವಮೂರ್ತಿ, ಬ್ರಾಹ್ಮಣ ಸಭಾದ ಮುಖಂಡರಾದ ಪಾರ್ಥಸಾರಥಿ, ರವೀಂದ್ರ ಮೊದಲಾದವರು ಇದ್ದರು.

click me!