ಸವದತ್ತಿಯಿಂದ ಸಿದ್ದರಾಮಯ್ಯ ಸ್ಪರ್ಧೆ: ಸತೀಶ ಜಾರಕಿಹೊಳಿ ಹೇಳಿದ್ದಿಷ್ಟು

By Kannadaprabha News  |  First Published Jul 3, 2022, 9:53 PM IST

*  ನೂಪುರ ಹೇಳಿಕೆ ಬಿಜೆಪಿ ಗಂಭೀರವಾಗಿ ಪರಿಗಣಿಸಲಿ
*  ಕಾಂಗ್ರೆಸ್‌ನಿಂದ ಪೌರ ಕಾರ್ಮಿಕರಿಗೆ ನ್ಯಾಯ
*  ದೇಶದ ವಾತಾವರಣ ಕೆಡುತ್ತದೆ. ಇದಕ್ಕೆ ಬಿಜೆಪಿಯವರು ಕಡಿವಾಣ ಹಾಕಿ
 


ಗೋಕಾಕ(ಜು.03):  ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸವದತ್ತಿಯಿಂದ ಸ್ಪರ್ಧಿಸುವ ಕುರಿತು ಇಲ್ಲಿವರೆಗೂ ಚರ್ಚೆಯಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಪಟ್ಟಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೂಪುರ ಶರ್ಮಾ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿಗರು ಗಂಭೀರವಾಗಿ ಪರಿಗಣಿಸಬೇಕು. ಆಡಳಿತದಲ್ಲಿರುವ ಪಕ್ಷವು ಸಮಾಜದಲ್ಲಿರುವ ಶಾಂತಿ ಕದಡುವ ಯತ್ನಕ್ಕೆ ಮುಂದಾಗಬಾರದು. ಹೇಳಿಕೆ ನೀಡುವ ಮೊದಲು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ಬೇಕಾಬಿಟ್ಟಿ ಹೇಳಿಕೆಯಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗಿದೆ ಎಂದು ಕಿಡಿಕಾರಿದರು. ದೇಶದ ವಾತಾವರಣ ಕೆಡುತ್ತದೆ. ಇದಕ್ಕೆ ಬಿಜೆಪಿಯವರು ಕಡಿವಾಣ ಹಾಕಿ, ಅಂತಹವರನ್ನು ನಿಯಂತ್ರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

Latest Videos

undefined

'ತೈಲ ಬೆಲೆ ಏರಿಳಿಸುವುದರಲ್ಲಿ ಮೋದಿ ಮ್ಯಾಜಿಕ್‌ ಮ್ಯಾನ್‌'

ಶಿವಸೇನೆ ಒಡೆದ ಬಳಿಕ ಬಿಜೆಪಿ ಹಾದಿ ಸುಗಮ:

ಮಹಾರಾಷ್ಟ್ರದಲ್ಲಿ ಆಘಾಡಿ ಸರ್ಕಾರ ಪತನಗೊಳಿಸಲು ಬಿಜೆಪಿ ಎರಡು ಬಾರಿ ಪ್ರಯತ್ನ ಮಾಡಿದೆ. ಆ ಸಂದರ್ಭದಲ್ಲಿ ಶಾಸಕರ ವಿಶ್ವಾಸಗಳಿಸುವಲ್ಲಿ ವಿಫಲವಾಗಿದೆ. ಈ ಬಾರಿ ಎಲ್ಲಾ ಶಾಸಕರಿಗೆ ಇಡಿ, ಐಟಿ ಕೇಸ್‌ಗಳ ಬಗ್ಗೆ ಒತ್ತಡ ಹೇರಿ, ಪಕ್ಷದಿಂದ ಆಫರ್‌ ನೀಡಿ ಶಿವಸೇನೆ ಕೋಟೆ ಒಡೆಯಲು ಯಶಸ್ವಿಯಾಗಿದೆ ಎಂದು ದೂರಿದರು.

ಬೆಳಗಾವಿಯಲ್ಲಿ ಆವಾಜ್ ಆದ್ರೆ ರಾಜ್ಯದಲ್ಲೇ ಹೆಚ್ಚು ಆವಾಜ್ Satish jarkiholi

ರಮೇಶ ಜಾರಕಿಹೊಳಿ ರಣತಂತ್ರದಿಂದ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದೆಯೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಇಲ್ಲಿನ ಸ್ಥಳೀಯ ಸಮಸ್ಯೆಗಳೇ ನಮಗೆ ಹೆಚ್ಚಾಗಿವೆ. ಬಿಜೆಪಿಯವರಿಗೆ ಶಿವಸೇನೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಒತ್ತಡ ಬಹಳ ದಿನಗಳಿಂದ ಇತ್ತು. ಠಾಕ್ರೆ ಬರದೇ ಇರುವ ಹಿನ್ನೆಲೆಯಲ್ಲಿ ಬೇರೆ ಬೇರೆ ನಾಯಕರನ್ನು ಹುಟ್ಟುಹಾಕಿ ಬಿಜೆಪಿ ತನ್ನ ಹಾದಿಯನ್ನು ಸುಗಮ ಮಾಡಿಕೊಂಡಿದೆ ಎಂದರು.

ಕಾಂಗ್ರೆಸ್‌ನಿಂದ ಪೌರ ಕಾರ್ಮಿಕರಿಗೆ ನ್ಯಾಯ:

ಪೌರ ಕಾರ್ಮಿಕರಿಗೆ ಆಗಿರುವ ಅನ್ಯಾಯ, ಕಾನೂನು ಉಲ್ಲಂಘನೆ ವಿಚಾರವನ್ನು ಕಾರ್ಯಕರ್ತರು ನಮ್ಮ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಕಾನೂನಾತ್ಮಕವಾಗಿ ಕಾರ್ಮಿಕ ಇಲಾಖೆಯಲ್ಲಿ ಹೋರಾಟ ಮಾಡಲಾಗಿದೆ. ಹೀಗಾಗಿ ಪೌರಕಾರ್ಮಿಕರಿಗೆ ಸಿಗಬೇಕಾದ ನ್ಯಾಯ ಕೊಡಿಸುವಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಯಶಸ್ವಿಯಾಗಿದ್ದಾರೆ. ಈ ಹೋರಾಟದ ಪ್ರತಿಫಲ ಅವರಿಗೆ ಸಿಕ್ಕಿದೆ. ಕಾಂಗ್ರೆಸ್‌ ಕಾರ್ಯಕರ್ತರ ಬೆನ್ನು ಹತ್ತಿದವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದರ ಕುರಿತು ಅವರಿಗೆ ಯಾವುದೇ ಅಧಿಕಾರ ಇಲ್ಲ. ಹೊಸ ಟೆಂಡರ್‌ ಆಗಬೇಕು. ಈಗ ನ್ಯಾಯ ಸಿಕ್ಕಿದೆ ಮುಂದಿನ ನಡೆ ನೋಡೋಣ ಎಂದರು.
 

click me!