'ಕೋರ್ಟ್‌ಗೆ ಹೋದ 6 ಸಚಿವರನ್ನ ಸಂಪುಟದಿಂದ ವಜಾ ಮಾಡಿ'

By Suvarna NewsFirst Published Mar 6, 2021, 5:08 PM IST
Highlights

ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ರಿಲೀಸ್ ಆದ ಬೆನ್ನಲ್ಲೇ ಕೆಲ ಸಚಿವರು ತಮ್ಮ ವಿರುದ್ಧದ ಸುದ್ದಿ ಬಿತ್ತರಿಸದಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಇದಕ್ಕೆ  ಜೆಡಿಎಸ್ ಶಾಸಕ ಟಾಂಗ್ ಕೊಟ್ಟಿದ್ದಾರೆ.

ಮೈಸೂರು, (ಮಾ.07): ತಮ್ಮ ಆಪ್ತ ರಮೇಶ್​ ಜಾರಕಿಹೊಳಿ ಅವರ ಸಿಡಿ ಪ್ರಕರಣ ಹೊರಬರುತ್ತಿದ್ದಂತೆ, ರಮೇಶ್​ ಆಪ್ತರಿಗೆ ಢವ-ಢವ ಶುರುವಾಗಿದೆ.

 ಆರು  ಸಚಿವರು ತಮ್ಮ ವಿರುದ್ಧ ಯಾವುದೇ ರೀತಿಯ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಏಕೆ ಕೋರ್ಟ್‌ಗೆ ಹೋಗಿದ್ದಾರೆ ಅಂತೆಲ್ಲಾ ಹಲವು ಪ್ರಶ್ನೆಗಳು ಉದ್ಭವಿಸಿವೆ.

ಇದರ ಮಧ್ಯೆ ವಿಜಯಪುರ ಜೆಡಿಎಸ್ ಶಾಸಕ ಸಾ.ರಾ.ಮಹೇಶ್  ಪ್ರತಿಕ್ರಿಯಿಸಿದ್ದು, ಕೋರ್ಟ್‌ಗೆ ಹೋದ ಸಚಿವರನ್ನ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ರಾಸಲೀಲೆ ಸಿ.ಡಿ. ಬೆನ್ನಲ್ಲೇ 6 ಸಚಿವರು ಕೋರ್ಟ್ ಮೊರೆ: ಇದು ಸರಿಯಲ್ಲ ಎಂದ ಕೇಂದ್ರ ಸಚಿವ

ಇದನ್ನ ಸದನಲ್ಲೂ ಒತ್ತಾಯ ಮಾಡ್ತೀವಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ..? ಅರ್ಜಿ ಹಾಕಿರೋದೆ ನಾವೆಲ್ಲಾ ತಲೆ ತಗ್ಗಿಸೋ ವಿಚಾರ. ಇದೆಲ್ಲದರ ಹಿಂದೆ ಒಂದು ಷಡ್ಯಂತ್ರ ಇದೆ. ಅದು ಆಚೆಗೆ ಬರಬೇಕು ಎಂದರು.

ಬಾಂಬೆಯಲ್ಲೂ ಅಷ್ಟು ಟೈಟ್ ಸೆಕ್ಯೂರಿಟಿ ಇಟ್ಟುಕೊಂಡಿದ್ದವರು ಯಾಕೆ ಅರ್ಜಿ ಹಾಕಿದ್ದೀರಿ? ಇವರನ್ನ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುವ ಷಡ್ಯಂತ್ರ ಮೊದಲೇ ಆಗಿತ್ತಾ. ಸಚಿವರನ್ನೆ ಬ್ಲಾಕ್ ಮೇಲ್ ಮಾಡುವುದಾದರೆ ಜನಸಾಮಾನ್ಯರ ಗತಿ ಏನು..? ಎಂದು ಪ್ರಶ್ನಿಸಿದರು.

ವಿಶ್ವನಾಥ್‌ಗೆ ಟಾಂಗ್
ಸಿಎಂ ಯಡಿಯೂರಪ್ಪ ಬ್ಲಾಕ್‌ಮೇಲ್​​ ಮಾಡುವ ಷಡ್ಯಂತ್ರದ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಸ್ನೇಹಿತರು ಹಿಂದೆ ಹೇಳಿದಾಗ ಸುಳ್ಳು ಅಂದುಕೊಂಡೆ. ಜನಪರ ಸರ್ಕಾರ ತರಲು ಬಾಂಬೆಗೆ ಹೋಗಿದ್ವಿ ಅಂದ್ರು. ಬಾಂಬೆನಲ್ಲಿ ಏನ್ ಮಾಡ್ತಿದ್ರು ಅಂತ ಈಗ ಹೇಳಲಿ. ಹುಣಸೂರಿನಿಂದ ಬಾಂಬೆವರೆಗೆ ಪುಸ್ತಕ ಬರೆಯುತ್ತೇನೆ ಅಂದಿದ್ರು. ಬಹುಶಃ ಅದ್ರಲ್ಲಿ ಇದು ಉಲ್ಲೇಖ ಆಗಬಹುದು ಎಂದು ಎಚ್‌.ವಿಶ್ವನಾಥ್‌ಗೆ ಟಾಂಗ್​ ನೀಡಿದ್ದಾರೆ.

ಬಾಂಬೆಗೆ ಹೋದವರ ಬಗ್ಗೆ ಇನ್ನೂ ಏನೇನು ಇದೇಯೋ..?
ವಿಡಿಯೋ ಪ್ರಸಾರಕ್ಕೆ ತಡೆಕೋರಿ ಅರ್ಜಿ ಹಾಕಿರುವುದು ಶಾಸಕಾಂಗಕ್ಕೆ ಮಾಡಿದ ಅಪಮಾನ‌. ನಿಮಗೆ ಯಾಕೆ ಅನುಮಾನ. ಮೊನ್ನೆಯು ಅನೇಕ ಶಾಸಕರ ವಿಡಿಯೋ ಇದೆ ಅಂತ ಹೇಳಿದ್ದರು. ಆ ಹೇಳಿಕೆ ನೀಡಿದವರನ್ನ ತಕ್ಷಣ ಯಾಕೆ ಅರೆಸ್ಟ್ ಮಾಡಲಿಲ್ಲ. ಅದೇನು ಬ್ಲಾಕ್ ಮೇಲ್ ತಂತ್ರನಾ. ತಪ್ಪು ಮಾಡದೆ ಇದ್ರೆ ನೀವ್ಯಾಕೆ ನ್ಯಾಯಾಲಯಕ್ಕೆ ಹೋದ್ರಿ? ಇದನ್ನ ಮಾತನಾಡಲಿಕ್ಕೆ ಅಸಹ್ಯ. ಮನೆಯಲ್ಲಿ ಕುಟುಂಬಸ್ಥರ ಜೊತೆ ಕುಳಿತು ಟಿವಿ ನೋಡೋಕೆ ಹಿಂಸೆ ಆಗುತ್ತಿದೆ ಹೇಳಿದರು.

 ಇದು ನಾವೆಲ್ಲರೂ ತಲೆ ತಗ್ಗಿಸುವ ವಿಚಾರ. ಬಾಂಬೆಗೆ ಹೋದವರ ಬಗ್ಗೆ ಇನ್ನು ಏನೇನು ಇದೇಯೋ..? ಈ ರೀತಿಯ ಸರ್ಕಾರ ತರೋಕಾ ಬಾಂಬೆಗೆ ಹೋಗಿದ್ದು? ಇದೇನಾ ನಿಮ್ಮ ಘನಕಾರ್ಯ ಎಂದು ವಾಗ್ದಾಳಿ ನಡೆಸಿದರು.

click me!