ಕಾಂಗ್ರೆಸ್‌ನಿಂದ ಬಂದಿದ್ದಾರೆ ಅಂತ ನಮ್ಮನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ಸಚಿವ

Suvarna News   | Asianet News
Published : Mar 06, 2021, 03:48 PM IST
ಕಾಂಗ್ರೆಸ್‌ನಿಂದ ಬಂದಿದ್ದಾರೆ ಅಂತ ನಮ್ಮನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ಸಚಿವ

ಸಾರಾಂಶ

ನಮ್ಮ ಅವಶ್ಯಕತೆಗೆ ನ್ಯಾಯಾಲಯಕ್ಕೆ ಹೋಗಿದ್ದೇವೆ, ಹೋಗಬಾರದು ಅಂತ ಕಾನೂನಿನಲ್ಲಿ‌ ಇದ್ಯಾ?|ಏನೂ ತೊಂದರೆ ಆಗಬಾರದು ಅಂತ ನ್ಯಾಯಾಲಯಕ್ಕೆ ಹೋಗಿದ್ದೇವೆ| ಆಪಾದನೆ ಮಾಡೋರು ಏನಾದರೂ ಇದ್ದರೆ ತೋರಿಸಲಿ: ಸಚಿವ ಬೈರತಿ ಬಸವರಾಜ್| 

ಮಂಗಳೂರು(ಮಾ.06): ನಮ್ಮ ಕೈ ಬಾಯಿ ಎಲ್ಲವೂ ಶುದ್ಧವಾಗಿವೆ, ಮುಂಬೈನಲ್ಲಿ ಏನೂ ನಡೆದಿಲ್ಲ. ಏನಾದರೂ ನಡೆದಿದ್ದರೆ ದಾಖಲೆ ಏನಾದರೂ ಇದ್ದರೆ ಬಿಡುಗಡೆ ಮಾಡಲಿ. ನಾವೆಲ್ಲರೂ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇವೆ. ವಿರೋಧ ಪಕ್ಷದವರು ನಮ್ಮನ್ನ ಗುರಿಯಾಗಿಸಿದ್ದಾರೆ ಎಂದು ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ. 

6 ಸಚಿವರು ತಮ್ಮ ವಿರುದ್ಧ ಮಾಧ್ಯಮಗಳು ಯಾವುದೇ ಸುದ್ದಿಯನ್ನು ಪ್ರಸಾರ ಮಾಡಬಾರದು ಎಂದು ಕೋರ್ಟ್ ಮೊರೆ ಹೋದ ವಿಚಾರದ ಬಗ್ಗೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಅವಶ್ಯಕತೆಗೆ ನ್ಯಾಯಾಲಯಕ್ಕೆ ಹೋಗಿದ್ದೇವೆ, ಹೋಗಬಾರದು ಅಂತ ಕಾನೂನಿನಲ್ಲಿ‌ ಇದ್ಯಾ? ಎಂದು ಪ್ರಶ್ನಿಸಿದ್ದಾರೆ. 

'ನಾವು ರಾಜೀನಾಮೆ ಕೊಟ್ಟು ಬಂದವರು, ನಮ್ಮ ಮೇಲೆ ಬಹಳಷ್ಟು ಜನ ಹಗೆ ಸಾಧಿಸ್ತಿದ್ದಾರೆ'

ಕಾಂಗ್ರೆಸ್ ಪಕ್ಷದಿಂದ ಬಂದಿದ್ದಾರೆ ಅಂತ ನಮ್ಮನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ನಾಳೆ ಏನೂ ತೊಂದರೆ ಆಗಬಾರದು ಅಂತ ನ್ಯಾಯಾಲಯಕ್ಕೆ ಹೋಗಿದ್ದೇವೆ. ಆಪಾದನೆ ಮಾಡೋರು ಏನಾದರೂ ಇದ್ದರೆ ತೋರಿಸಲಿ ಎಂದು ಬಹಿರಂಗವಾಗಿಯೇ ಸವಾಲ್‌ ಹಾಕಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

US-Iran peace talks in Pakistan: ಕದನ ನಿಲ್ಲಿಸುವ ದಲ್ಲಾಳಿತನಕ್ಕೆ ಪಾಕ್‌ ಇಳಿದಿದ್ದೇಕೆ!?
ಮತದಾನ ಮುಗಿದಿದೆ, ರಿಲ್ಯಾಕ್ಸ್ ಮೂಡ್‌ನಲ್ಲಿ ಕದನ ಕಲಿಗಳು, ಏನು ಮಾಡುತ್ತಿದ್ದಾರೀಗ?