ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಶಾಸಕ ಗರಂ ಆಗಿದ್ದು, ಯಡಿಯೂರಪ್ಪ ಇದೆಲ್ಲಾ ನಡೆಯಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರು/ಶಿವಮೊಗ್ಗ, (ಮಾ.07): ಭದ್ರಾವತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ಅವರ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಈ ಬಗ್ಗೆ ಇಂದು (ಶನಿವಾರ) ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಂಗಮೇಶ್, ಬಿಜೆಪಿಯವರು ನನ್ನನ್ನು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದಾರೆ. ಆದ್ರೇ ಸಿಎಂ ಯಡಿಯೂರಪ್ಪನವರೇ ಇದೆಲ್ಲಾ ನಡೆಯೋದಿಲ್ಲ. ದೇವರ ಹೆಸರಿನಲ್ಲಿ ಧರ್ಮವನ್ನು ಒಡೆದು ಆಳೋದಕ್ಕೆ ಹೊರಡಿದ್ದೀರಿ. ಇದೆಲ್ಲಾ ಹೆಚ್ಚು ದಿನ ನಡೆಯೋದಿಲ್ಲ ಎಂದು ಗುಡುಗಿದರು.
ಚಿತ್ರದುರ್ಗ: ಶಾಸಕ ಸಂಗಮೇಶ್ ಪುತ್ರನ ಬಂಧನ
ಯಡಿಯೂರಪ್ಪ, ಈಶ್ವರಪ್ಪ, ರಾಘವೇಂದ್ರ. ನೀವು ದೇವರ ಹೆಸರಲ್ಲಿ ಧರ್ಮವನ್ನು ಒಡೆದು ಆಳೋದಕ್ಕೆ ಹೊರಟಿದ್ದೀರಿ. ಇದೆಲ್ಲ ನಡೆಯಲ್ಲ. ಅಧಿಕಾರ ಇದೆ ಅಂತಾ ಹೇಳಿ ಪೊಲೀಸರನ್ನ ಉಪಯೋಗಿಸಕೊಂಡು ದೌರ್ಜನ್ಯ ಮಾಡ್ತೀರಾ? ನಿಮ್ಮ ಹಣೆ ಬರಹ ಏನು ಅಂತಾ ನಂಗೆ ಗೊತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರ ನನ್ನ ಮೇಲೆ, ಕುಟುಂಬದ ಮೇಲೆ, ನನ್ನ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹೂಡಿ ಸಣ್ಣತನದ ರಾಜಕಾರಣ ಮಾಡಲು ಹೊರಟಿದೆ. ನನ್ನ ಪುತ್ರ ಬಸವೇಶ್ ಸೇರಿದಂತೆ ಒಟ್ಟು ನಮ್ಮ 15 ಕಾರ್ಯಕರ್ತರ ಬಂಧನ ಮಾಡಲಾಗಿದೆ. ಆದರೆ ನಾವು ಕೊಟ್ಟ ದೂರಿನ ಪ್ರಕಾರ ಒಬ್ಬರನ್ನೂ ಬಂಧಿಸಿಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡು ಎಷ್ಟು ದೌರ್ಜನ್ಯ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.