ನಿಮ್ಮ ಮನೆಯ ನಾಯಿಯಾದ್ರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ಯಾ ಎಂದ ಖರ್ಗೆ: ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ

By BK Ashwin  |  First Published Dec 20, 2022, 3:36 PM IST

ರಾಜಸ್ಥಾನದ (Rajasthan) ಅಲ್ವಾರ್‌ನಲ್ಲಿ (Alwar) ನಡೆದ ರ್‍ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್‌ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದೆ ಎಂದು ಹೇಳಿದರು ಮತ್ತು ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರಂತಹ ನಾಯಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂದು ಹೇಳಿದ್ದರು.


ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಕ್ಷಮೆಯಾಚಿಸುವಂತೆ ಆಡಳಿತಾರೂಢ ಪಕ್ಷ ಬಿಜೆಪಿ (BJP) ಒತ್ತಾಯಿಸಿದ ಕಾರಣ ಇಂದು ರಾಷ್ಟ್ರ ರಾಜಧಾನಿಯ ಸಂಸತ್‌ ಭವನದಲ್ಲಿ ಭಾರಿ ಗದ್ದಲವೆದ್ದಿದೆ.  ರಾಹುಲ್ ಗಾಂಧಿಯವರ (Rahul Gandhi) ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra)"ಭಾರತ್ ತೋಡೋ (ಭಾರತವನ್ನು ವಿಭಜಿಸಿ)" ಎಂದು ಲೇವಡಿ ಮಾಡಿದ್ದಕ್ಕಾಗಿ ಬಿಜೆಪಿಗೆ ತಿರುಗೇಟು ನೀಡುವ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ತಿರುಗೇಟು ನೀಡಲು ಹೋಗಿ ವಿವಾದಾತ್ಮಕ ಪದ ಬಳಸಿದ್ದಾರೆ. ನಿಮ್ಮ ಮನೆಯ ನಾಯಿಯಾದರೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ಯಾ ಎಂದು ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದಾರೆ. 

ರಾಜಸ್ಥಾನದ (Rajasthan) ಅಲ್ವಾರ್‌ನಲ್ಲಿ (Alwar) ನಡೆದ ರ್‍ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್‌ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದೆ ಎಂದು ಹೇಳಿದರು ಮತ್ತು ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರಂತಹ ನಾಯಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂದು ಹೇಳಿದ್ದರು. ಬಳಿಕ, ಬಿಜೆಪಿ ವಿರುದ್ಧ ಟೀಕೆ ಮಾಡಿದ ಮಲ್ಲಿಕಾರ್ಜುನ ಖರ್ಗೆ, “ನಿಮ್ಮ ಮನೆಯ ನಾಯಿಯಾದರೂ ದೇಶಕ್ಕಾಗಿ ಸತ್ತಿದೆಯೇ..? ಆದರೂ, ಅವರು (ಬಿಜೆಪಿ) ದೇಶಭಕ್ತರೆಂದು ಹೇಳಿಕೊಳ್ಳುತ್ತಾರೆ ಮತ್ತು ನಾವು ಏನನ್ನಾದರೂ ಹೇಳಿದರೆ ನಮ್ಮನ್ನು ದೇಶದ್ರೋಹಿ (ರಾಷ್ಟ್ರ ವಿರೋಧಿಗಳು) ಎಂದು ಕರೆಯಲಾಗುತ್ತದೆ ಎಂದು ಟೀಕೆ ಮಾಡಿದರು. 

Tap to resize

Latest Videos

ಇದನ್ನು ಓದಿ: 2023ರ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌ಗೆ ಮೊದಲ ಹೊಡೆತ, ಪ್ರಮುಖ ನಾಯಕಿ ರಾಜೀನಾಮೆ!

ಅಲ್ಲದೆ, ಚೀನಾದೊಂದಿಗಿನ ಗಡಿ ಘರ್ಷಣೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಮಲ್ಲಿಕಾರ್ಜುನ ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ:  "ಅವರು (ಬಿಜೆಪಿ ಸರ್ಕಾರ) ಹೊರನೋಟಕ್ಕೆ ಸಿಂಹದಂತೆ ಮಾತನಾಡುತ್ತಾರೆ, ಆದರೆ ನೀವು ಸರಿಯಾಗಿ ನೋಡಿದರೆ ಅವರು ಇಲಿಯಂತೆ ವರ್ತಿಸುತ್ತಾರೆ" ಎಂದೂ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಮಲ್ಲಿಕಾರ್ಜುನ ಖರ್ಗೆಯವರ ಈ ಹೇಳಿಕೆಗಳಿಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿದ್ದಲ್ಲದೆ, ಸಂಸತ್ತಿನಲ್ಲಿ ಅಧಿವೇಶನ ಪ್ರಾರಂಭವಾದ ತಕ್ಷಣ ಕ್ಷಮೆಯಾಚನೆಗೆ ಒತ್ತಾಯಿಸಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ, ಅವರು ಆಕ್ಷೇಪಾರ್ಹ ಭಾಷೆಯನ್ನು ಬಳಸಿದರು ಮತ್ತು ಸುಳ್ಳನ್ನು ಹರಡಲು ಪ್ರಯತ್ನಿಸಿದರು ಎಂದೂ ಬಿಜೆಪಿ ಟೀಕಿಸಿದೆ. ರಾಜಸ್ಥಾನದ ಅಲ್ವಾರ್‌ನಲ್ಲಿ ಆಕ್ಷೇಪಾರ್ಹ ಭಾಷೆ ಬಳಸಿದ್ದಕ್ಕಾಗಿ ಅವರು ಕ್ಷಮೆಯಾಚಿಸಬೇಕು ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದಾರೆ.


ಈ ಬೇಡಿಕೆಯು ಸದನದಲ್ಲಿ ಗೊಂದಲಕ್ಕೆ ಕಾರಣವಾದ ಬಳಿಕ, ಸಂಸತ್ತಿನ ಹೊರಗೆ ಈ ಹೇಳಿಕೆ ನೀಡಲಾಗಿದೆ ಎಂದು ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರು ಹೇಳಿದರು. ಅಲ್ಲದೆ, ದೇಶದ 135 ಕೋಟಿ ಜನರು ನಮ್ಮನ್ನು ಗಮನಿಸುತ್ತಿದ್ದಾರೆ. ಯಾರೋ ಹೊರಗೆ ಏನೋ ಹೇಳಿರಬಹುದು... ನೀವು ಮಕ್ಕಳಲ್ಲ” ಎಂದೂ ಹೇಳಿದ್ದಾರೆ. 

ಇದನ್ನೂ ಓದಿ: ಸಿದ್ದು, ಡಿಕೆಶಿ ಪ್ರತ್ಯೇಕ ಎಲೆಕ್ಷನ್‌ ಬಸ್‌ ಯಾತ್ರೆಗೆ ಖರ್ಗೆ ಬ್ರೇಕ್‌!

ಈ ಮಧ್ಯೆ, ಕ್ಷಮೆಯಾಚನೆಯ ಬೇಡಿಕೆಯನ್ನು ವ್ಯಂಗ್ಯವಾಡಿದ ಮಲ್ಲಿಕಾರ್ಜುನ ಖರ್ಗೆ, ನಾನು ಇಲ್ಲಿ ಪುನರಾವರ್ತಿಸಿದರೆ, ಈ ಜನರಿಗೆ (ಬಿಜೆಪಿ) ತುಂಬಾ ಕಷ್ಟವಾಗುತ್ತದೆ. ಏಕೆಂದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕ್ಷಮೆಯಾಚಿಸಿದವರು, ಈಗ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕ್ಷಮೆಯಾಚಿಸಲು ಕೇಳುತ್ತಿದ್ದಾರೆ. ಕಾಂಗ್ರೆಸ್ ‘ಭಾರತ್ ತೋಡೊ (ವಿಭಜಿತ ಭಾರತ) ಯಾತ್ರೆ’ ನಡೆಸುತ್ತಿದೆ ಎಂದು ಹೇಳಿದರು. ಆಗ ನಾನು ಹೇಳಿದ್ದು ಕಾಂಗ್ರೆಸ್ ಯಾವಾಗಲೂ ಭಾರತ್ ಜೋಡೋ (ಭಾರತವನ್ನು ಒಂದುಗೂಡಿಸುವ) ಕೆಲಸ ಮಾಡಿದೆ. ಇದಕ್ಕಾಗಿ ಇಂದಿರಾಗಾಂಧಿ, ರಾಜೀವ್ ಗಾಂಧಿ ಪ್ರಾಣ ಕೊಟ್ಟರು. ನೀವು ಏನು ಮಾಡಿದ್ದೀರಿ? ದೇಶಕ್ಕಾಗಿ ಯಾರು ತ್ಯಾಗ ಮಾಡಿದ್ದಾರೆಂದು ನಿಮಗೆ ತಿಳಿದಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಟೀಕೆ ಮಾಡಿದ್ದಾರೆ.

ಖರ್ಗೆಯ ಹೇಳಿಕೆಗೆ ತಿರುಗೇಟು ನೀಡಿದ ಪಿಯೂಷ್‌ ಗೋಯಲ್, “ಅವರಿಗೆ (ಕಾಂಗ್ರೆಸ್) ನಿಮ್ಮ ಇತಿಹಾಸ ನೆನಪಿಲ್ಲ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್‌ನಿಂದಾಗಿ ಜಮ್ಮು ಮತ್ತು ಕಾಶ್ಮೀರ ಯಾವ ಸ್ಥಿತಿಯಲ್ಲಿತ್ತು, ಪಾಕಿಸ್ತಾನದ ಬೆದರಿಕೆ, ಚೀನಾದ ಆಕ್ರಮಣ, ಬಿ.ಆರ್ ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗಾದ ಅವಮಾನ ಅವರಿಗೆ ನೆನಪಿಲ್ಲ ಎಂದೂ ಪಿಯೂಷ್ ಗೋಯಲ್ ತಿರುಗೇಟು ನೀಡಿದರು.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸಿಗರಿಗೆ ಖರ್ಗೆ ದೆಹಲಿಗೆ ಕರೆ

click me!