
ಬೆಂಗಳೂರು(ಏ.15): ಬಿಜೆಪಿಯಲ್ಲಿ ಅಭ್ಯಥಿರ್ಗಳ 2ನೇ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಉದ್ಭವಿಸಿರುವ ಬಂಡಾಯ ಮುಂದುವರೆದಿದೆ. ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ಗೆ ಟಿಕೆಟ್ ನೀಡುವುದಕ್ಕೆ ವಿಳಂಬ ಧೋರಣೆ ಖಂಡಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯ 16 ಸದಸ್ಯರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಶುಕ್ರವಾರ ವಿಧಾನಸಭಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದು, ಅವರು ಜೆಡಿಎಸ್ ಸೇರುವ ಸಾಧ್ಯತೆಯಿದೆ.
ಈ ಮಧ್ಯೆ ಬೆಳಗಾವಿ ಉತ್ತರದಲ್ಲಿ ಬಿಜೆಪಿ ಶಾಸಕ ಅನಿಲ ಬೆನಕೆ, ಬೀದರ್‌ನಲ್ಲಿ ಸೂಯರ್ಕಾಂತ ನಾಗಮಾರಪಳಿ್ಳ, ಬಾಗಲಕೋಟೆಯಲ್ಲಿ ಮಲಿ್ಲಕಾಜುರ್ನ ಚರಂತಿಮಠ, ಬಸವನ ಬಾಗೇವಾಡಿಯಲ್ಲಿ ಸೋಮನಗೌಡ (ಅಪು್ಪಗೌಡ) ಪಾಟೀಲ ಮನಗೂಳಿ, ಚಿತಾ್ತಪುರದಲ್ಲಿ ಅರವಿಂದ ಚವಾ್ಹಣ, ರಾಮದುಗರ್ದಲ್ಲಿ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ, ಪುತೂ್ತರಿನಲ್ಲಿ ಹಿಂದೂ ಸಂಘಟಕ ಅರುಣ್ ಕುಮಾರ್ ಪುತಿ್ತಲ ಬಂಡಾಯ ಘೋಷಿಸಿದು್ದ, ಬಂಡಾಯ ಇಲ್ಲವೇ, ಇತರ ಪಕ್ಷಗಳಿಂದ ಸ್ಪಧೆರ್ಗಿಳಿಯುವ ಮುನೂ್ಸಚನೆ ನೀಡಿದಾ್ದರೆ.
ಶಾಸಕ ಅರವಿಂದ ಲಿಂಬಾವಳಿಗೆ ಬಿಜೆಪಿ ಟಿಕೆಟ್ ನೀಡಿ : ಭೋವಿ ಸಮುದಾಯ
ಬೆಂಬಲಿಗರ ಸಭೆ, ಬಂಡಾಯ ಘೋಷಣೆ:
ಬೆಳಗಾವಿ ಉತ್ತರ ಕೆ್ಷೕತ್ರದಲ್ಲಿ ಟಿಕೆಟ್ ಸಿಗದಿದ್ದಕೆ್ಕ ಆಕೊ್ರೕಶಗೊಂಡಿರುವ ಬಿಜೆಪಿ ಶಾಸಕ ಅನಿಲ ಬೆನಕೆ, ತಮ್ಮ ಮುಂದಿನ ರಾಜಕೀಯ ನಡೆ ಬಗೆ್ಗ ಚಚಿರ್ಸಲು ಭಾನುವಾರ ತಮ್ಮ ಬೆಂಬಲಿಗರ ಸಭೆ ಕರೆದಿದಾ್ದರೆ. ಅವರು ಕಾಂಗೆ್ರಸ್ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬೀದರ್‌ನಲ್ಲಿ ಟಿಕೆಟ್ ಸಿಗದಿದ್ದಕೆ್ಕ ಆಕೊ್ರೕಶಗೊಂಡಿರುವ ಸೂಯರ್ಕಾಂತ ನಾಗಮಾರಪಳಿ್ಳಯವರು ತಮ್ಮ ಬೆಂಬಲಿಗರ ಸಭೆ ನಡೆಸಿದು್ದ, ಸ್ಪಧೆರ್ ಖಚಿತ ಎಂದಿದಾ್ದರೆ. ಅವರು ಪಕೆ್ಷೕತರ ಅಥವಾ ಜೆಡಿಎಸ್‌ನಿಂದ ಕಣಕಿ್ಕಳಿಯುವ ಸಾಧ್ಯತೆಯಿದೆ. ಬಾಗಲಕೋಟೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಸಹೋದರ ಮಲಿ್ಲಕಾಜುರ್ನ ಚರಂತಿಮಠ ಅವರು ಬೆಂಬಲಿಗರ ಸಭೆ ನಡೆಸಿದು್ದ, ಬಿಜೆಪಿ ಬಂಡಾಯ ಅಭ್ಯಥಿರ್ಯಾಗಿ ಕಣಕಿ್ಕಳಿಯಲು ಮುಂದಾಗಿದಾ್ದರೆ. ಅಣ್ಣನ ವಿರುದ್ಧವೇ ಅವರು ತೊಡೆ ತಟ್ಟುತಿ್ತದಾ್ದರೆ.
ಮಾಯಕೊಂಡದಲ್ಲಿ ಎಂ.ಬಸವರಾಜ ನಾಯ್ಕಗೆ ಟಿಕೆಟ್ ನೀಡಿದ್ದಕಾ್ಕಗಿ ಆಕೊ್ರೕಶಗೊಂಡಿರುವ 11 ಮಂದಿ ಟಿಕೆಟ್ ಆಕಾಂಕಿ್ಷಗಳು ತಮ್ಮಲ್ಲಿ ಒಬ್ಬರನು್ನ ಬಂಡಾಯ ಅಭ್ಯಥಿರ್ಯನಾ್ನಗಿ ಕಣಕಿ್ಕಳಿಸಲು ನಿಧರ್ರಿಸಿದಾ್ದರೆ. ಬಸವನ ಬಾಗೇವಾಡಿಯಲ್ಲಿ ಸೋಮನಗೌಡ (ಅಪು್ಪಗೌಡ) ಪಾಟೀಲ ಮನಗೂಳಿ ಅವರು ಬೆಂಬಲಿಗರ ಸಭೆ ನಡೆಸಿದು್ದ, ಪಕೆ್ಷೕತರ ಅಭ್ಯಥಿರ್ಯಾಗಿ ಕಣಕಿ್ಕಳಿಯಲು ನಿಧರ್ರಿಸಿದಾ್ದರೆ. ಚಿತಾ್ತಪುರದಲ್ಲಿ ಪಿ್ರಯಾಂಕ್ ಖಗೆರ್ ಸೋಲಿಸಲು ಒಗ್ಗಟಿ್ಟನ ಮಂತ್ರ ಜಪಿಸುತಿ್ತದ್ದ ಬಿಜೆಪಿಯಲ್ಲಿ ಒಡಕು ಉಂಟಾಗಿದು್ದ, ಪಕೆ್ಷೕತರರಾಗಿ ಕಣಕಿ್ಕಳಿಯಲು ಬಿಜೆಪಿಯ ಅರವಿಂದ ಚವಾ್ಹಣ ಸಿದ್ದತೆ ನಡೆಸಿದಾ್ದರೆ.
ಇದೇ ವೇಳೆ, ರಾಮದುಗರ್ದಿಂದ ಪಕೆ್ಷೕತರ ಅಭ್ಯಥಿರ್ಯಾಗಿ ಸ್ಪಧಿರ್ಸಲು ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ನಿಧರ್ರಿಸಿದಾ್ದರೆ. ಸ್ಥಳೀಯರಿಗೆ ಟಿಕೆಟ್ ನೀಡಿದ್ದರೆ ಸುಮ್ಮನಿರುತಿ್ತದೆ್ದ. ಆದರೆ, ಬೆಂಗಳೂರು ಮೂಲದ ವ್ಯಕಿ್ತಗೆ ಟಿಕೆಟ್ ನೀಡಿ, ಪಕ್ಷ ನನಗೆ ಅನಾ್ಯಯ ಮಾಡಿದೆ ಎಂದು ಕಿಡಿ ಕಾರಿದಾ್ದರೆ. ಪುತೂ್ತರಿನಲ್ಲಿ ಹಿಂದೂ ಸಂಘಟಕ ಅರುಣ್ ಕುಮಾರ್ ಪುತಿ್ತಲ ಅವರು ಪಕೆ್ಷೕತರರಾಗಿ ಸ್ಪಧಿರ್ಸುವುದಾಗಿ ಘೋಷಿಸಿದು್ದ, ಏ.17 ಅಥವಾ 18ರಂದು ನಾಮಪತ್ರ ಸಲಿ್ಲಸುವ ಸಾಧ್ಯತೆಯಿದೆ.
ರಾಜೀನಾಮೆ ಸಲ್ಲಿಕೆ:
ಧಾರವಾಡ ಸೆಂಟ್ರಲ್ ಕೆ್ಷೕತ್ರದಿಂದ ಮಾಜಿ ಸಿಎಂ ಜಗದೀಶ ಶೆಟ್ಟರ್‌ಗೆ ಟಿಕೆಟ್ ನೀಡುವುದಕೆ್ಕ ವಿಳಂಬ ಧೋರಣೆ ಖಂಡಿಸಿ, ಹುಬ್ಬಳಿ್ಳ-ಧಾರವಾಡ ಮಹಾನಗರಪಾಲಿಕೆಯ 16 ಸದಸ್ಯರು, ಸ್ಥಳೀಯ ಸಂಸೆ್ಥಗಳ ಕೆಲ ಪದಾಧಿಕಾರಿಗಳು ಬಿಜೆಪಿಗೆ ರಾಜೀನಾಮೆ ನೀಡಿದು್ದ, ರಾಜಾ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್‌ಗೆ ರಾಜೀನಾಮೆ ಪತ್ರ ರವಾನಿಸಿದಾ್ದರೆ. ಇದೇ ವೇಳೆ, ಟಿಕೆಟ್ ಸಿಗದಿದ್ದಕಾ್ಕಗಿ ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಅವರು ಬಿಜೆಪಿಗೆ ರಾಜೀನಾಮೆ ನೀಡಿದಾ್ದರೆ. ಕಳೆದ ಬಾರಿ ಅವರು ವರುಣದಿಂದ ಬಿಜೆಪಿ ಅಭ್ಯಥಿರ್ಯಾಗಿ ಕಣಕಿ್ಕಳಿದಿದ್ದರು. ಈ ಮಧೆ್ಯ, ಮೂಡಿಗೆರೆಯಲ್ಲಿ ಟಿಕೆಟ್ ತಪಿ್ಪದ್ದಕೆ್ಕ ಆಕೊ್ರೕಶಗೊಂಡಿದ್ದ ಬಿಜೆಪಿ ಶಾಸಕ ಎಂ.ಪಿ.ಕುಮಾರಸಾ್ವಮಿ ಶುಕ್ರವಾರ ಶಿರಸಿಗೆ ತೆರಳಿ ವಿಧಾನಸಭಾಧ್ಯಕ್ಷ ಕಾಗೇರಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲಿ್ಲಸಿದಾ್ದರೆ. ಅವರು ಜೆಡಿಎಸ್ ಸೇರುವ ಸಾಧ್ಯತೆಯಿದೆ.
ಕೆಳಮಟ್ಟದ ರಾಜಕಾರಣದಿಂದ ನನಗೆ ಬೇಜಾರಾಗಿದೆ: ರಮೇಶ್ ಜಾರಕಿಹೊಳಿ
ಅಸಮಾಧಾನದ ಹೊಗೆ:
ಕೊರಟಗೆರೆಯಲ್ಲಿ ಟಿಕೆಟ್ ಸಿಗದಿದ್ದಕೆ್ಕ ಕೆ.ಎಂ.ಮುನಿಯಪ್ಪ, ಕೆಜಿಎಫ್‌ನಲ್ಲಿ ಬಿಜೆಪಿಯ ಮೋಹನ್ ಕೃಷಾ್ಣ, ಗುರುಮಠಕಲ್‌ನಲ್ಲಿ ಬಿಜೆಪಿ ನಾಯಕ ಮಟ್ಟಣ್ಣನವರ್ ತಮ್ಮ ಅಸಮಾಧಾನ ಹೊರಹಾಕಿದಾ್ದರೆ. ಕೋಲಾರದಲ್ಲಿ ಟಿಕೆಟ್ ಸಿಗದಿದ್ದಕೆ್ಕ ಅಸಮಾಧಾನಗೊಂಡಿರುವ ಓಂಶಕಿ್ತ ಚಲಪತಿ ಶುಕ್ರವಾರ ಬೆಂಬಲಿಗರ ಸಭೆ ನಡೆಸಿದು್ದ, ಅಸಮಾಧಾನ ಹೊರಹಾಕಿದಾ್ದರೆ. ಕಳೆದ ಬಾರಿ ಅವರು ಬಿಜೆಪಿಯಿಂದ ಸ್ಪಧಿರ್ಸಿದ್ದರು.
ಎಲ್ಲೆಲ್ಲಿ ಬಂಡಾಯ?
- ಶಾಸಕ ಅನಿಲ ಬೆನಕೆ - ಬೆಳಗಾವಿ ಉತ್ತರ
- ಶಾಸಕ ಮಹಾದೇವಪ್ಪ ಯಾದವಾಡ - ರಾಮದುರ್ಗ
- ಸೂಯರ್ಕಾಂತ ನಾಗಮಾರಪಳ್ಳಿ - ಬೀದರ್
- ಮಲ್ಲಿಕಾರ್ಜುನ ಚರಂತಿಮಠ - ಬಾಗಲಕೋಟೆ
- ಸೋಮನಗೌಡ ಪಾಟೀಲ - ಬಸವನಬಾಗೇವಾಡಿ
- ಅರವಿಂದ ಚವಾಣ - ಚಿತ್ತಾಪುರ
- ಅರುಣ್‌ಕುಮಾರ ಪುತ್ತಿಲ - ಪುತೂ್ತರು
ಸಚವ ಅಂಗಾರ ಬಂಡಾಯ ಶಮನ
ಸುಳ್ಯ: ದಕ್ಷಿಣ ಕನ್ನಡದ ಸುಳ್ಯದಲ್ಲಿ ಟಿಕೆಟ್ ಸಿಗದ ಕಾರಣ ರಾಜಕೀಯ ನಿವೃತ್ತಿ ಘೋಷಿಸಿದ್ದ ಹಾಲಿ ಸಚಿವ ಎಸ್.ಅಂಗಾರ ತಮ್ಮ ನಿಧಾರ್ರ ಹಿಂಪಡೆದಿದ್ದಾರೆ. ಅಲ್ಲದೆ, ಇನ್ನು ಮುಂದೆ ರಾಜಕೀಯದಲ್ಲಿ ಸಕ್ರಿವಾಗಿರುವುದಾಗಿಯೂ, ಪಕ್ಷವು ಸುಳ್ಯದಲ್ಲಿ ಟಿಕೆಟ್ ನೀಡಿದ ಭಾಗೀರಥಿ ಮರುಳ್ಯ ಅವರ ಗೆಲುವಿನ ಜವಾಬಾ್ದರಿ ತಾವೇ ವಹಿಸಿಕೊಳು್ಳವುದಾಗಿಯೂ ತಿಳಿಸಿದ್ದಾರೆ. ತತ್‌ಕ್ಷಣದ ನೋವಿನಿಂದ ಮಾತನಾಡಿದೆ್ದ ಅಷೆ್ಟ, ಬಳಿಕ ಯೋಚಿಸಿದಾಗ ನನ್ನ ತಪ್ಪಿನ ಅರಿವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.