Karnataka Assembly Elections 2023: ಬಿಜೆಪಿ ತೊರೆದು ಸವದಿ ಕಾಂಗ್ರೆಸ್‌ಗೆ

Published : Apr 15, 2023, 05:22 AM IST
Karnataka Assembly Elections 2023: ಬಿಜೆಪಿ ತೊರೆದು ಸವದಿ ಕಾಂಗ್ರೆಸ್‌ಗೆ

ಸಾರಾಂಶ

ಕಾಂಗ್ರೆಸ್ಸಿಗರ ಜತೆ ಸರಣಿ ಸಭೆ, ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆ, ಅಥಣಿ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟ ಲಕ್ಷ್ಮಣ ಸವದಿ. 

ಬೆಂಗಳೂರು(ಏ.15): ಅಥಣಿ ಕ್ಷೇತ್ರದ ಟಿಕೆಟ್‌ ಸಿಗದೆ ಮುನಿಸಿಕೊಂಡು ಬಂಡಾಯದ ಬಾವುಟ ಹಾರಿಸಿದ್ದ ಬಿಜೆಪಿಯ ಮಾಜಿ ಉಪ ಮುಖ್ಯಮಂತ್ರಿ ಹಾಗೂ ವಿಧಾನಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಅವರು ಶುಕ್ರವಾರ ಕಾಂಗ್ರೆಸ್‌ ನಾಯಕರೊಂದಿಗೆ ನಡೆದ ಸರಣಿ ಸಭೆಗಳ ಬಳಿಕ ಬಿಜೆಪಿ ಸದಸ್ಯತ್ವ ಹಾಗೂ ವಿಧಾನ ಪರಿಷತ್‌ ಸದಸ್ಯ ಸಾ್ಥನಕೆ್ಕ ರಾಜೀನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇಪರ್ಡೆಗೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ಬೆಳಗಾವಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಅವರು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಅವರೊಂದಿಗೆ ಎರಡು ಹಂತದ ಸಭೆ ನಡೆಸಿ, ಬಳಿಕ ಕಾಂಗ್ರೆಸ್‌ ಸೇರ್ಒಡೆ ಘೋಷಿಸಿದರು.

ಪೀಡೆ ತೊಲಗಿತು, ನನಗೆ ಸಂತಸವಾಗಿದೆ: ಸವದಿ ವಿರುದ್ಧ ರಮೇಶ್‌ ಜಾರಕಿಹೊಳಿ ವಾಗ್ದಾಳಿ

ಬೆನ್ನಲ್ಲೆ ವಿಧಾನಪರಿಷತ್‌ ಸದಸ್ಯ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿ, ಶುಕ್ರವಾರ ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಶಿವಕುಮಾರ್‌, ಸುಜೇರ್ವಾಲಾ ಅವರ ಸಮು್ಮಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಬಾವುಟ ಹಿಡಿದರು. ಈ ವೇಳೆ ತಮ್ಮೊಂದಿಗೆ ಮಾಜಿ ಸಚಿವ ಶಶಿಕಾಂತ್‌ ನಾಯ್‌್ಕ ಸೇರಿದಂತೆ ಹಲವು ಬಿಜೆಪಿ ನಾಯಕರನೂ್ನ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಮಾಡಿದರು.

ಈ ವೇಳೆ ಮಾತನಾಡಿದ ಲಕ್ಷ್ಮಣ ಸವದಿ, ‘ನೀರಾವರಿ ಯೋಜನೆಗಳಿಗೆ ನನ್ನ ಕೆ್ಷೕತ್ರಕೆ್ಕ ಅನುದಾನ ನೀಡಬೇಕು, ಅಥಣಿ ಕೆ್ಷೕತ್ರದಿಂದ ನನಗೆ ಟಿಕೆಟ್‌ ಕೊಡಬೇಕು ಎಂಬ ಎರಡೂ ಷರತಿ್ತಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಒಪಿ್ಪದಾ್ದರೆ. ಒಪಿ್ಪದಾ್ದರೆ. ಹೀಗಾಗಿ ವಿಧಾನಪರಿಷತ್‌ ಸದಸ್ಯ ಸಾ್ಥನಕೆ್ಕ ರಾಜೀನಾಮೆ ನೀಡಿ ಕಾಂಗೆ್ರಸ್‌ ಪಕ್ಷ ಸೇರಿದೆ್ದೕನೆ. ಕಾಂಗೆ್ರಸ್‌ ಪಕ್ಷ ಎಲೆ್ಲಲ್ಲಿ ಪ್ರಚಾರಕೆ್ಕ ಅಗತ್ಯವಿದೆಯೋ ಅಲೆ್ಲಲಾ್ಲ ನನ್ನನು್ನ ಬಳಸಿಕೊಳ್ಳಬಹುದು’ ಎಂದು ಹೇಳಿದರು.

ಇನ್ನೂ ಹಲವರ ಸೇರ್ಪಡೆ:

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಇದೊಂದು ಐತಿಹಾಸಿಕ ದಿನ. ರಾಷ್ಟ್ರ ಮತು್ತ ರಾಜ್ಯ ರಾಜಕಾರಣದಲ್ಲಿ ಈ ದಿನವನು್ನ ತುಂಬಾ ಸೂಕ್ಷ್ಮವಾಗಿ ನೋಡಲಾಗುತಿ್ತದೆ. ಲಕ್ಷ್ಮಣ ಸವದಿ ನಮ್ಮ ಕುಟುಂಬದ ಸದಸ್ಯರಾಗಲು ಒಪಿ್ಪದಾ್ದರೆ. ಅವರಿಗೆ ಪಕ್ಷದ ಎಲಾ್ಲ ನಾಯಕರೂ ಹೃತೂ್ಪವರ್ಕವಾಗಿ ಸಾ್ವಗತಿಸುತಿ್ತದೆ್ದೕವೆ. ಇಡೀ ರಾಜ್ಯದಲ್ಲಿ 63 ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ವಲಸೆ ಹೋಗುತಿ್ತದು್ದ, ಶೇ.90ರಷು್ಟನಾಯಕರು ಕಾಂಗೆ್ರಸ್‌ಗೆ ಬರುತಿ್ತದಾ್ದರೆ. ಲಕ್ಷ್ಮಣ ಸವದಿ ಬೆನ್ನಲೆ್ಲೕ ಇನೂ್ನ ಹಲವರು ಸೇಪರ್ಡೆಯಾಗಲಿದಾ್ದರೆ ಎಂದು ಹೇಳಿದರು.

ಲಕ್ಷ್ಮಣ ಸವದಿ ಉತ್ತರ ಕನಾರ್ಟಕ ಭಾಗದಲ್ಲಿ ಪ್ರಭಾವಿ ನಾಯಕರು. ಸಿದ್ದರಾಮಯ್ಯ ಅವರೊಂದಿಗೆ ಚಚಿರ್ಸಿಯೇ ಅವರನು್ನ ಪಕ್ಷಕೆ್ಕ ಸೇಪರ್ಡೆ ಮಾಡಿಕೊಳ್ಳಲಾಗುತಿ್ತದೆ. ಬೆಳಗಾವಿಯಲ್ಲಿ ಕಾಯರ್ಕ್ರಮ ಇರುವುದರಿಂದ ಸಿದ್ದರಾಮಯ್ಯ, ಸತೀಶ್‌ ಜಾರಕಿಹೊಳಿ ಹಾಗೂ ಲಕ್ಷಿ್ಮ ಹೆಬಾ್ಬಳ್ಕರ್‌ ಅವರು ಈ ಕಾಯರ್ಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತಿ್ತಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಕುಸಿಯುತಿ್ತದೆ:

ಸುಜೇರ್ವಾಲಾ ಮಾತನಾಡಿ, ಬಿಜೆಪಿ ಪಕ್ಷ ಕುಸಿಯುತಿ್ತದು್ದ ಅದನು್ನ ಕಟಿ್ಟದವರನೆ್ನೕ ಮೂಲೆಗುಂಪು ಮಾಡಲಾಗುತಿ್ತದೆ. ಯಾವ ಕುಟುಂಬ ತಮ್ಮ ಮನೆಯ ಹಿರಿಯರನು್ನ ಗೌರವಿಸುವುದಿಲ್ಲವೋ ಆ ಕುಟುಂಬ ಹೆಚು್ಚ ದಿನ ಉಳಿಯಲ್ಲ. ಅದಕೆ್ಕ ಬಿಜೆಪಿಯೇ ಸಾಕಿ್ಷ. ಲಕ್ಷ್ಮಣ ಸವದಿ ಅವರ ಸೇಪರ್ಡೆಯಿಂದ ಕನಾರ್ಟಕ ಬಾ್ರ್ಯಂಡ್‌ ಪುನರ್‌ ಸಾ್ಥಪನೆಗೆ ನೆರವಾಗಲಿದಾ್ದರೆ ಎಂದು ಹೇಳಿದರು.

ವಿಶೇಷ ವಿಮಾನದಲ್ಲಿ ಆಗಮನ:

ಬಿಜೆಪಿ ಟಿಕೆಟ್‌ ಸಿಗದೆ ಅಸಮಾಧಾನಗೊಂಡಿದ್ದ ಅವರು ಶುಕ್ರವಾರ ಬೆಳಗೆ್ಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಕಳುಹಿಸಿದಾ್ದರೆನ್ನಲಾದ ವಿಶೇಷ ವಿಮಾನದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದರು. ಈ ವೇಳೆ ಲಕ್ಷ್ಮೇ ಹೆಬಾ್ಬಳ್ಕರ್‌ ಸಹೋದರ, ಪರಿಷತ್‌ ಸದಸ್ಯ ಚೆನ್ನರಾಜ ಹಟಿ್ಟಹೊಳಿ ಸಾಥ್‌ ನೀಡಿದ್ದರು. ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲಾ್ದಣಕೆ್ಕ ಆಗಮಿಸಿದ ಲಕ್ಷ್ಮಣ ಸವದಿ ಅವರು ನೇರವಾಗಿ ಡಿ.ಕೆ.ಶಿವಕುಮಾರ್‌ ನಿವಾಸಕೆ್ಕ ತೆರಳಿ ಶಿವಕುಮಾರ್‌ ಹಾಗೂ ರಣದೀಪ್‌ಸಿಂಗ್‌ ಸುಜೆರ್ವಾಲಾ ಅವರೊಂದಿಗೆ ಸುದೀಘರ್ ಚಚೆರ್ ನಡೆಸಿದರು. ಬಳಿಕ ಸಿದ್ದರಾಮಯ್ಯ ನಿವಾಸದಲ್ಲಿ ಮೂವರೂ ನಾಯಕರೊಂದಿಗೆ ಪ್ರತೆ್ಯೕಕ ಸಭೆ ನಡೆಸಿ ಮಾತುಕತೆ ನಡೆಸಿದರು.
ಬಳಿಕ ಸಂಜೆ 4 ಗಂಟೆಗೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ ಲಕ್ಷ್ಮಣ ಸವದಿ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಿಜೆಪಿ ಬಾಗಿಲು ಬಂದ್‌

ಬಿಜೆಪಿ ಬಿಟ್ಟು ಹೋಗುವವರಿಗೆ ಮತ್ತೆ ಪಕ್ಷದ ಬಾಗಿಲು ತೆರೆಯುವುದಿಲ್ಲ. ಐದಾರು ಮಂದಿ ಪಕ್ಷ ತೊರೆದರೆ ನಷ್ಟವೇನಿಲ್ಲ. ಚುನಾವಣೆಯಲ್ಲಿ ಸೋತರೂ ಸವದಿಗೆ ಸ್ಥಾನಮಾನ ನೀಡಿದ್ದೆವು ಅಂತ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ತಿಳಿಸಿದ್ದಾರೆ. 

ಲಕ್ಷ್ಮಣ ಸವದಿ ಜತೆ ಇನ್ನು ಅನೇಕರು ಕಾಂಗ್ರೆಸ್ ಸೇರಲಿದ್ದಾರೆ; ಡಿ.ಕೆ. ಶಿವಕುಮಾರ್

ಶವವೂ ಬಿಜೆಪಿಗೆ ಹೋಗಲ್ಲ

ನನ್ನ ಶವ ಕೂಡ ಬಿಜೆಪಿ ಕಚೇರಿ ಎದುರು ಹೋಗುವುದಿಲ್ಲ. ಇಂದೇ ನನ್ನ ಕುಟುಂಬದವರಿಗೆ ತಿಳಿಸುತ್ತೇನೆ. ನಾನು ಸತ್ತಾಗ ಶವಯಾತ್ರೆ ವೇಳೆ ಬಿಜೆಪಿ ಕಚೇರಿ ಬಳಿ ಕೂಡ ಹೋಗಬೇಡಿ ಎನ್ನುತ್ತೇನೆ ಅಂತ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳೀದ್ದಾರೆ. 

ಇನ್ನೂ ಹಲವರು ಬರ್ತಾರೆ

ರಾಜ್ಯದ 63 ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ವಲಸೆ ಹೋಗುತ್ತಿದ್ದಾರೆ. ಅದರಲ್ಲಿ 90% ನಾಯಕರು ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಸವದಿ ಬೆನ್ನಲ್ಲೇ ಇನ್ನೂ ಹಲವರು ನಮ್ಮ ಪಕ್ಷಕ್ಕೆ ಬರಲಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಾ। ಯತೀಂದ್ರ ವಿರುದ್ಧ ಡಿಕೆಶಿ ಬಣ ಮತ್ತೆ ಬಾಣ
ಮತ್ತೆ ಟಿಪ್ಪು ಜಯಂತಿ ವಿವಾದ ಭುಗಿಲು