ಗುಜರಾತ್‍ನಲ್ಲಿ ರಾಮನ ಮನಸಿನ ಪಕ್ಷವೇ ಗೆಲ್ಲುವುದು ಎಂದು ಅಂದೇ ಹೇಳಿದ್ದೆ. ಹಾಗೆಯೇ ಆಗಿದೆ. ರಾವಣ ಮನಸ್ಸಿನ ಪಕ್ಷಸೋಲಲೇ ಬೇಕಿತ್ತು ಸೋತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.8): ಗುಜರಾತ್‍ನಲ್ಲಿ ರಾಮನ ಮನಸಿನ ಪಕ್ಷವೇ ಗೆಲ್ಲುವುದು ಎಂದು ಅಂದೇಹೇಳಿದ್ದೆ. ಹಾಗೆಯೇ ಆಗಿದೆ. ರಾವಣ ಮನಸ್ಸಿನ ಪಕ್ಷಸೋಲಲೇ ಬೇಕಿತ್ತು ಸೋತಿದೆ ಎಂದು ಬಿಜೆಪಿರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಗುಜರಾತ್ ಮತ್ತು ಹಿಮಾಚಲದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಗುಜರಾತ್ ಫಲಿತಾಂಶನಮ್ಮ ರಾಜ್ಯದ ಮೇಲೆ ಭಾಗಶಃ ಪರಿಣಾಮಬೀರುತ್ತದೆ. ಈಗಿರುವ ವಾತಾವರಣದಲ್ಲಿ ನಾವುರಾಜ್ಯದಲ್ಲೂ ಅಧಿಕಾರಕ್ಕೆ ಬರುತ್ತೇವೆ ಎನ್ನುವವಿಶ್ವಾಸ ಇದೆ. ಮಧ್ಯಂತರ ಚುನಾವಣೆನಡೆಸಬೇಕದ ಅವಶ್ಯಕತೆ ಇಲ್ಲ. ಏಪ್ರಿಲ್,ಮೇತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದರು. ಹಿಮಾಚಲ ಪ್ರದೇಶದಲ್ಲಿ ಒಂದೊಂದು ಬಾರಿಒಂದೊಂದು ಸರ್ಕಾರವನ್ನು ಆರಿಸುವ ಪರಿಪಾಠ ಬೆಳೆದುಬಂದಿದೆ. ಅಲ್ಲದೆ ಕಣದಲ್ಲಿ 26 ಮಂದಿ ಬಂಡಾಯ ಅಭ್ಯರ್ಥಿಗಳಿದ್ದ ಕಾರಣಕ್ಕೆ ಸ್ವಲ್ಪ ಹೊಡೆತ ಬಿದ್ದಿದೆ ಎಂದರು.
ಎಚ್.ಸಿ.ಮಹದೇವಪ್ಪಗೆ ತಿರುಗೇಟು: ಇಸ್ಲಾಮಾಬಾದ್‍ನಲ್ಲಿ ನಮ್ಮ ರಾಷ್ಟ್ರಧ್ವಜ ಹಾರಿಸುತ್ತೇವೆ ಎನ್ನುವುದನ್ನು ಭಯೋತ್ಪಾದನೆ ಎಂದು ಹೇಳಲಾಗುವುದಿಲ್ಲ. ನಮ್ಮ ದೇಶದ ಹುಚ್ಚು ನಾಯಿ ಕಚ್ಚಿದರೂ ಹಾಗೆಹೇಳುವುದಿಲ್ಲ. ಯಾವುದೋ ಪಾಕಿಸ್ಥಾನದಹುಚ್ಚು ನಾಯಿ ಕಚ್ಚಿರಬೇಕು ಅಂತಹವರುಮಾತ್ರ ಹೇಳಲು ಸಾಧ್ಯ ಎಂದು ಸಿ.ಟಿ.ರವಿ ಕಾಂಗ್ರೆಸ್‍ನಎಚ್.ಸಿ.ಮಹದೇವಪ್ಪ ಅವರಿಗೆ ತಿರುಗೇಟು ನೀಡಿದ್ದರು.ಈ ಕುರಿತು ಮಹದೇವಪ್ಪ ಅವರ ಟ್ವೀಟ್‍ಗೆಪ್ರತಿಕ್ರಿಯೆ ನೀಡಿದ ರವಿ, ಭಯೋತ್ಪಾಧಕಮತ್ತು ದೇಶ ಭಕ್ತರಿಗೆ ವ್ಯತ್ಯಾಸ ಗೊತ್ತಿರದಮತಿಭ್ರಮಣ ಮಾನಸಿಕತೆಗೆ ಕಾಂಗ್ರೆಸ್ ಬಂದಿದೆ.ಇಸ್ಲಾಮಾ ಬಾದ್‍ನಲ್ಲಿ ಭಾರತದ ತಿರಂಗ ಹಾರಿಸುತ್ತೇನೆಎಂದು ನಾನು ಹೇಳಿದ್ದೇನಂತೆ, ಅದು ಭಯೋತ್ಪಾದನೆಯಂತೆ. ಅಂದರೆ ರಾಷ್ಟ್ರಧ್ವಜ ಹಾರಿಸುವುದು ಭಯೋತ್ಪಾಧನೆ ಎಂದು ಭಾವಿಸುತ್ತಿರುವುದು ಕಾಂಗ್ರೆಸ್ ಹಿಡಿದಿರುವ ಅಧೋಗತಿಗೆ ಸಾಕ್ಷಿಯಾಗಿದೆ ಎಂದರು.
ಈ ಮಾತನ್ನು ಕಾಂಗ್ರೆಸ್ ಹೇಳುವವರೆಗೆ ನಾನು ಅದನ್ನು ಕಾಂಗ್ರೆಸ್ ಹೇಳಿಕೆ ಎಂದು ಭಾವಿಸುವುದಿಲ್ಲ.ರಾಷ್ಟ್ರಧ್ವಜ ಹಾರಿಸುವುದನ್ನು ಭಯೋತ್ಪಾಧನೆಎಂದು ಯಾರು ಹೇಳಲು ಸಾಧ್ಯವಿಲ್ಲ. ರಾಷ್ಟ್ರ ಧ್ವಜಹಾರಿಸುವುದು ದೇಶಭಕ್ತಿಯ ಸಂಕೇತ. ಚಂದ್ರಗ್ರಹಕ್ಕೆ ಹೋದರೂ, ಎವರೆಸ್ಟ್ ಏರಿದರೂ ರಾಷ್ಟ್ರಧ್ವಜ ಹಾರಿಸುತ್ತಾರೆ. ಒಲಂಪಿಕ್‍ನಲ್ಲಿಗೆದ್ದುಪದಕಗಳಿಸಿದರೂ ರಾಷ್ಟ್ರಧ್ವಜಹೊದ್ದುಕೊಳ್ಳುತ್ತಾರೆ. ಇದು ಕಾಂಗ್ರೆಸ್ ಪಾಲಿಗೆ
ಭಯೊತ್ಪಾಧನೆ ರೀತಿ ಕಾಣುತ್ತದೆ ಎನ್ನುವುದಾದರೆಕಾಂಗ್ರೆಸ್‍ಗೂ ಜಿಹಾದಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ದೇಶದಹಿತದೃಷ್ಠಿಯಿಂದ ಇವರೆಲ್ಲರನ್ನೂ ನಿಮ್ಹಾನ್ಸ್‍ಗೆ ಕಳಿಸಿ ಪರೀಕ್ಷೆಗೊಳಪಡಿಸುವುದು ಒಳ್ಳೆಯದುಎಂದರು.
ನರೇಂದ್ರನ ದಾಖಲೆ ಭೂಪೇಂದ್ರ ಮುರಿಯಲಿ ಎಂದಿದ್ದೆ, ಜನರು ಹೊಸ ರೆಕಾರ್ಡ್ ಸೃಷ್ಟಿಸಿದ್ದಾರೆ, ಮೋದಿ ಭಾಷಣ!
ಇಸ್ಲಾಂ ಹುಟ್ಟುವ ಮುಂಚೆಯೇ ಇಲ್ಲಿ ದತ್ತ ಪೀಠ ಇತ್ತು:
ದತ್ತ ಪೀಠ ಬೇರೆ, ಬಾಬಾಬುಡನ್ ದರ್ಗಾವೇ ಬೇರೆ ಇದ್ದು, ಈ ವಿಚಾರದಲ್ಲಿ ವಾಸ್ತವಿಕಸತ್ಯ ಎತ್ತಿಹಿಡಿಯುವ ಸಲುವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿ ಸಧ್ಯದಲ್ಲೇ ಮುಖ್ಯಮಂತ್ರಿಗಳು ಹಾಗೂ ಸಚಿವರ ಬಳಿ ನಿಯೋಗ ತೆರಳುವುದಾಗಿ ಶಾಸಕ ಸಿ.ಟಿ.ರವಿ ತಿಳಿಸಿದರು. ದತ್ತಾತ್ರೇಯ ಕ್ಷೇತ್ರ ಸಾವರಿರಾರು ವರ್ಷ ಪೂರ್ವದ್ದು, ಇಸ್ಲಾಂ ಹುಟ್ಟುವ ಮುಂಚೆಯೇ ಇಲ್ಲಿದತ್ತ ಪೀಠ ಇತ್ತು. ಬಾಬಾಬುಡನ್ ದರ್ಗಾ ವಾಸ್ತಕವಿಕವಾಗಿ ಬೇರೆ ಇದೆ. ಮುಂದೆ ಸತ್ಯವನ್ನು ಎತ್ತಿ ಹಿಡಿಯಬೇಕು ಇದಕ್ಕಾಗಿ ನಿವೃತ್ತನ್ಯಾಯಾಧೀಶರು ಅಥವಾ ಹಿರಿಯ ಅಧಿಕಾರಿಗಳ ತಂಡ ರಚಿಸಿ ದಾಖಲೆಗಳನ್ನು ಪರಿಶೀಲನೆ ಮಾಡಲಿ ಎಂದು ಒತ್ತಾಯಿಸುತ್ತೇವೆ ಎಂದರು.
Gujarat Election Result ಮುಸ್ಲಿಮ್ ಪ್ರಾಬಲ್ಯದ 19ರ ಪೈಕಿ 17 ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು!
ಬಾಬಾಬುಡನ್ ದರ್ಗಾ ಜಾಗರ ಹೋಬಳಿ ನಾಗೇನಹಳ್ಳಿ ಸರ್ವೇ ನಂ.57 ರಲ್ಲಿದೆ. ದತ್ತಪೀಠ ಕ್ಷೇತ್ರ ಜಾಗರಹೋಬಳಿ ಇನಾಂ ದತ್ತಾತ್ರೇಯ ಪೀಠದ ಸರ್ವೇ ನಂ.195 ರಲ್ಲಿದೆ ಈ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಿ ಸದ್ಯದಲ್ಲೇ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಮುಜರಾಯಿ ಸಚಿವರನ್ನ ಭೇಟಿ ಮಾಡುತ್ತೇವೆ. ಅವರೊಂದು ನಿರ್ಣಯ ತೆಗೆದುಕೊಳ್ಳಲಿ. ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ನೋಡಿ ಮುಂದಿನ ಹೋರಾಟವನ್ನು ನಿರ್ಣಯಿಸುತ್ತೇವೆ. ನ್ಯಾಯಾಲಯದ ಮೂಲಕವೂ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು. ದತ್ತಪೀಠಕ್ಕೆ ಸರ್ಕಾರ ಹಿಂದೂ ಅರ್ಚಕರನ್ನು ನೇಮಿಸಿರುವುದು ಭಕ್ತಾಧಿಗಳಲ್ಲಿ ಆನಂದವನ್ನು ತಂದಿದೆ ಅದನ್ನು ವರ್ಣಿಸಲು ಆಗುವುದಿಲ್ಲ. ಅರ್ಚಕರು ಗುಹೆಯೊಳಗಡೆ ಪೂಜೆ ಮಾಡಿ, ಪ್ರಾಣಪ್ರತಿಷ್ಠೆ ಮಾಡಿ, ಅರ್ಚನೆ, ಗಣಪತಿ ಹೋಮ, ದತ್ತ ಹೋಮಗಳು ನಡೆದಿವೆ. ನಿನ್ನೆ ಶೋಭಾ ಯಾತೆಸಹ ಹಿಂದಿನ ಎಲ್ಲಾ ದಾಖಲೆಗಳನ್ನೂ ಮೀರಿವೈಭವೋಪೇತವಾಗಿ ನಡೆದಿದೆ. ಎಲ್ಲದಕ್ಕೂ ದತ್ತಾತ್ರೇಯನ ಕೃಪೆ ಎಂದರು