ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಭಾರತದ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಕಾರಣ ಈ ಚುನಾವಣೆಯಲ್ಲಿ ಹಲವು ಹೊಸತನಗಳು ಬದಲಾವಣೆಗಳು ಆಗಿವೆ. ಇದರಲ್ಲಿ ಪ್ರಮುಖವಾಗಿ ಬಿಜೆಪಿಯಿಂದ ದೂರವೇ ಉಳಿಯುತ್ತಿದ್ದ ಮುಸ್ಲಿಮ್ ಮತದಾರರು ಇದೀಗ ಬಿಜೆಪಿಯತ್ತ ಒಲವು ತೋರಿದ್ದಾರೆ. ಇದರ ಪರಿಣಾಮ ಗುಜರಾತ್‌ನ 19 ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ 17ರಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.
ಅಹಮ್ಮದಾಬಾದ್(ಡಿ.08): ಗುಜರಾತ್ ಚುನಾವಣಾ ಫಲಿತಾಂಶ ಬಿಜೆಪಿ ಪಡೆಯಲ್ಲಿ ಹೊಸ ಉತ್ಸಾಹ ತುಂಬಿದೆ. 156 ಸ್ಥಾನಗಳನ್ನು ಗೆದ್ದು ದಾಖಲೆ ಬರೆದ ಕಾರಣಕ್ಕಾಗಿ ಮಾತ್ರವಲ್ಲ, ಇತರ ಹಲವು ಕಾರಣಗಳಿಂದ ಬಿಜೆಪಿ ಭವಿಷ್ಯದಲ್ಲಿ ಎಲ್ಲಾ ರಾಜ್ಯಗಳಲ್ಲಿ ಆಡಳಿತ ನಡೆಸುವ ಸ್ಪಷ್ಟ ಸೂಚನೆಯನ್ನು ಈ ಚುನಾವಣಾ ಫಲಿತಾಂಶ ನೀಡಿದೆ. ಇದೀಗ ಮುಸ್ಲಿಮ್ ಮತದಾರರು ಬಿಜೆಪಿಯತ್ತ ಒಲವು ತೋರಿದ್ದಾರೆ. ಇದರ ಪರಿಣಾಮ ಮುಸ್ಲಿಮ್ ಪ್ರಾಬಲ್ಯದ 19 ಕ್ಷೇತ್ರಗಳಲ್ಲಿ ಬಿಜೆಪಿ 17 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಹೊಸ ಸಂದೇಶ ಸಾರಿದೆ. ಇಲ್ಲಿ ಮತ್ತೊಂದು ಕುತೂಹಲರ ಅಂಶವಿದೆ. ಗುಜರಾತ್‌ನ 188 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿದೆ. ಆದರೆ ಇದರಲ್ಲಿ ಒಂದೇ ಒಂದು ಮುಸ್ಲಿಮ್ ಅಭ್ಯರ್ಥಿ ಇರಲಿಲ್ಲ. ಇದು ಬಿಜೆಪಿಯ ಆತ್ಮವಿಶ್ವಾಸ ಹೆಚ್ಚಿಸಿದೆ. ಜನರು ಅಭಿವೃದ್ಧಿ ನೋಡಿ ಮತಹಾಕಿದ್ದಾರೆ ಅನ್ನೋ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತು ಈ ಫಲಿತಾಂಶದ ಮೂಲಕ ಮತ್ತೆ ಸಾಬೀತಾಗಿದೆ.
ಮುಸ್ಲಿಮ್ ಪ್ರಾಬಲ್ಯದ 19 ಕ್ಷೇತ್ರಗಳ ಪೈಕಿ 17 ಕ್ಷೇತ್ರ ಬಿಜೆಪಿ ಪಾಲಾಗಿದ್ದರೆ, ಇನ್ನುಳಿದ ಎರಡು 2 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಕಾಂಗ್ರೆಸ್ ಗೆದ್ದಿರುವ 17 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳು ಇದೇ ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರಗಳಾಗಿವೆ. ಈ ಮೂಲಕ ಕಾಂಗ್ರೆಸ್ ಪರವಾಗಿದ್ ಮುಸ್ಲಿಮ್ ಮತದಾರರು ಇದೀಗ ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಇದೇ 19 ಮುಸ್ಲಿಮ ಪ್ರಾಬಲ್ಯದ ಕ್ಷೇತ್ರದ ಪೈಕಿ 13 ಕ್ಷೇತ್ರದಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷ ಕೂಡ ಸ್ಪರ್ಧಿಸಿತ್ತು. ಆದರೆ AIMIM ಒಂದೇ ಒಂದು ಸ್ಥಾನ ಗೆಲ್ಲಲು ವಿಫಲವಾಗಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಹಾಕಿದ್ದ ಪರಿವರ್ತನ್ ಕ್ಲಾಕ್ ಬಂದ್!
ಲಿಂಬಾಯತ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 44 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದರಲ್ಲಿ 36 ಅಭ್ಯರ್ಥಿಗಳು ಮುಸ್ಲಿಮ್ಸ್. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಂಗೀತಾಬೆನ್ ರಾಜೇಂದ್ರ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಹಾಗಂತ ಮುಸ್ಲಿಮ್ ಮತ ಹಂಚಿ ಹೋದ ಕಾರಣ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಅನ್ನೋ ಲೆಕ್ಕಾಚಾರದಲ್ಲಿದ್ದರೆ ತಪ್ಪು. ಕಾರಣ ಬಿಜೆಪಿಯ ಸಂಗೀತಾಬೆನ್ ರಾಜೇಂದ್ರ ಪಾಟೀಲ್ ಶೇಕಡಾ 52 ರಷ್ಟು ವೋಟ್ ಶೇರ್ ಪಡೆದಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಶೇಕಡಾ 20 ರಷ್ಟು ವೋಟ್ ಶೇರ್ ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಸೇರಿ ಕಣದಲ್ಲಿದ್ದ 36 ಮುಸ್ಲಿಮ್ ಅಭ್ಯರ್ಥಿಗಳು ಮತಗಳಿಕೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಹಲವು ಮುಸ್ಲಿಮ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ಈ ಬಾರಿ ಗುಜರಾತ್ ವಿಧಾನಸಭೆಗೆ ಒರ್ವ ಮುಸ್ಲಿಮ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಇಮ್ರಾನ್ ಖೆಡವಾಲ ಈ ಬಾರಿ ಆಯ್ಕೆಯಾದ ಮುಸ್ಲಿಮ್ ಅಭ್ಯರ್ಥಿಯಾಗಿದ್ದಾರೆ. ಗುಜರಾತ್‌ನಲ್ಲಿ ಮುಸ್ಲಿಮ್ ಮತದಾರರ ಸಂಖ್ಯೆ ಶೇಕಡಾ 9. ಅಂತಿಮವಾಗಿ ಬಿಜೆಪಿಯಿಂದ ಮುಸ್ಲಿಮ್ ಅಭ್ಯರ್ಥಿ ಸ್ಪರ್ಧೆ ಮಾಡಿರುವುದು 1998ರಲ್ಲಿ. ಬಳಿಕ ಬಿಜೆಪಿಯಿಂದ ಮುಸ್ಲಿಮ್ ಅಭ್ಯರ್ಥಿಗಳು ಕಣಕ್ಕಿಳಿದಿಲ್ಲ.
ನರೇಂದ್ರನ ದಾಖಲೆ ಭೂಪೇಂದ್ರ ಮುರಿಯಲಿ ಎಂದಿದ್ದೆ, ಜನರು ಹೊಸ ರೆಕಾರ್ಡ್ ಸೃಷ್ಟಿಸಿದ್ದಾರೆ, ಮೋದಿ ಭಾಷಣ!
ಮುಸ್ಲಿಮ್ ಪ್ರಾಬಲ್ಯದ ಗೋದ್ರಾ ಕ್ಷೇತ್ರದಲ್ಲಿ ಬಿಜೆಪಿಯ ಚಂದ್ರಸಿನ್ಹ ರಾವುಲ್ಜಿ ಗೆಲುವು ಸಾಧಿಸಿದ್ದಾರೆ. ಬಿಲ್ಕಿಸ್ ಬಾನು ಅತ್ಯಾಚಾರ ಅಪರಾಧಿಗಳನ್ನು ಸಂಸ್ಕಾರಿ ಬ್ರಾಹ್ಮಣರು ಎಂಬ ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಕಾರಣಾಗಿದ್ದ ಚಂದ್ರಸಿನ್ಹ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಇದೇ ಕ್ಷೇತ್ರದಿಂದ ಸತತ 6 ಬಾರಿ ಗೆದ್ದ ಸಾಧನೆ ಮಾಡಿದ್ದಾರೆ.