ರಾಹುಲ್ ಗಾಂಧಿ ಭಾರತ್ ಜೋಡೋ ಮೂಲಕ ಬರ್ತಿದ್ದಾರೆ, ಇದು ಒಳ್ಳೆಯದು: ಎಚ್.ವಿಶ್ವನಾಥ್

By Girish Goudar  |  First Published Dec 8, 2022, 9:18 PM IST

ಹಿಂದೆಲ್ಲ ಕಾಂಗ್ರೆಸ್ ಎಲ್ಲಾ ಕಡೆ ಅಧಿಕಾರಕ್ಕೆ ಬರುತ್ತಿತ್ತು. ಈಗ ಕಾಲಾಯ ತಸ್ಮೈ ನಮಃ ಕಾಲವೂ ಬದಲಾಗಿದೆ, ನಾಯಕತ್ವವೂ ಬದಲಾಗಿದೆ. ವಿರೋಧ ಪಕ್ಷಗಳು ಭಿನ್ನವಾಗಿ ಹೋಗಬೇಕು. ಸಂಘಟನಾ ಚತುರತೆ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆ, ಅವಶ್ಯಕತೆ ದೇಶದಲ್ಲಿ ಇದೆ: ಎಚ್.ವಿಶ್ವನಾಥ್ 


ರಾಮನಗರ(ಡಿ.08): ಗುಜರಾತ್‌ನಲ್ಲಿ ಮತದಾರ ಬಿಜೆಪಿ ಪರವಾಗಿದ್ದ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪರವಾಗಿ ತೀರ್ಪು ಕೊಟ್ಟಿದ್ದಾನೆ. ಹಿಂದೆಲ್ಲ ಕಾಂಗ್ರೆಸ್ ಎಲ್ಲಾ ಕಡೆ ಅಧಿಕಾರಕ್ಕೆ ಬರುತ್ತಿತ್ತು. ಈಗ ಕಾಲಾಯ ತಸ್ಮೈ ನಮಃ ಕಾಲವೂ ಬದಲಾಗಿದೆ, ನಾಯಕತ್ವವೂ ಬದಲಾಗಿದೆ. ವಿರೋಧ ಪಕ್ಷಗಳು ಭಿನ್ನವಾಗಿ ಹೋಗಬೇಕು. ಸಂಘಟನಾ ಚತುರತೆ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆ, ಅವಶ್ಯಕತೆ ದೇಶದಲ್ಲಿ ಇದೆ. ರಾಹುಲ್ ಗಾಂಧಿಯವರು ಸಹ ಭಾರತ್ ಜೋಡೋ ಮೂಲಕ ಬರ್ತಿದ್ದಾರೆ, ಇದು ಒಳ್ಳೆಯದು ಅಂತ ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಹೇಳಿದ್ದಾರೆ. 

ಗುಜರಾತ್ - ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ಚನ್ನಪಟ್ಟಣದ ಸಿಂಗರಾಜಿಪುರ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲಾ ಪಕ್ಷಗಳ ಸಿದ್ಧಾಂತಗಳನ್ನ ಜನರು ಒಪ್ಪುತ್ತಾರೆ. ಆದರೆ ಪಕ್ಷ ನಡೆಸುವ ನಾವಿಕನ ಎಡವಟ್ಟಿನಿಂದ ವಿರೋಧ ಪಕ್ಷದಲ್ಲಿ ಕೂರಬೇಕಾಗುತ್ತದೆ ಅಂತ ತಿಳಿಸಿದ್ದಾರೆ.

Tap to resize

Latest Videos

ನರೇಂದ್ರನ ದಾಖಲೆ ಭೂಪೇಂದ್ರ ಮುರಿಯಲಿ ಎಂದಿದ್ದೆ, ಜನರು ಹೊಸ ರೆಕಾರ್ಡ್ ಸೃಷ್ಟಿಸಿದ್ದಾರೆ, ಮೋದಿ ಭಾಷಣ!

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಚ್.ವಿಶ್ವನಾಥ್, ಸಿದ್ದರಾಮಯ್ಯ, ಖರ್ಗೆಯವರ ಭೇಟಿ ಸೌಜನ್ಯದ ಭೇಟಿಯಾಗಿದೆ. ಖರ್ಗೆಯವರು ನಮ್ಮ ರಾಜ್ಯದವರು, ಕಾಂಗ್ರೆಸ್‌ನ‌ ಅಧ್ಯಕ್ಷರಾಗಿದ್ದಾರೆ. ಸಿದ್ದರಾಮಯ್ಯನವರಿಗೆ ಆಪರೇಷನ್ ಆಗಿತ್ತು, ಹಾಗಾಗಿ ಮಾತನಾಡಿಸಿಕೊಂಡು ಬಂದಿದ್ದೇನೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ‌. ರಾಜಕೀಯವೇ ಬೇರೆ, ಸ್ನೇಹವೇ ಬೇರೆ, ಅಭಿವೃದ್ಧಿಯಿಂದ ಮೆಚ್ಚುವುದೇ ಬೇರೆ, ಅವರನ್ನ ಭೇಟಿ ಮಾಡಿದ ತಕ್ಷಣ ಕಾಂಗ್ರೆಸ್‌ಗೆ ಹೋಗ್ತಾರೆ ಎಂಬುದಲ್ಲ. ಬೊಮ್ಮಾಯಿಯವರು ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದರು, ಅವರು ಕಾಂಗ್ರೆಸ್‌ಗೆ ಹೋಗ್ತಾರೆ ಎಂಬುದಲ್ಲ. ನಾನು ಇವತ್ತಿಗೂ ಬಿಜೆಪಿಯಲ್ಲೇ ಇದ್ದೀನಿ , ನಾನು ಯಾವುದೇ ಟಿಕೆಟ್ ಆಕಾಂಕ್ಷಿ ಅಲ್ಲ. ನನಗೆ ಈಗ 75 ವರ್ಷ ವಯಸ್ಸಾಗಿದೆ, ಎಂಎಲ್ಎಯಿಂದ ಎಲ್ಲಾ ಮಜಲುಗಳನ್ನು ನೋಡಿದ್ದೇನೆ. ಯುವಕರಿಗೆ ಟಿಕೆಟ್ ನೀಡಲಿ, ನಾವು ಸಂಘಟನೆ ಮಾಡ್ತೇವೆ. ಹೆಚ್ಚು ಕಡಿಮೆಯಾದರೆ ತಿರುಗಿ ಬೀಳುವವರು ನಾವೇ ಅಂತ ಹೇಳಿದ್ದಾರೆ.
 

click me!