ಕಳ್ಳಭಟ್ಟಿ ದಂಧೆಗಾಗಿ ಅಬಕಾರಿ ಅಧಿಕಾರಿ ಕೊಲೆ ಮಾಡಿದ್ದ ರಮೇಶ್ ಜಾರಕಿಹೊಳಿ: ಎಂ.ಲಕ್ಷ್ಮಣ್‌ ಆರೋಪ

By Sathish Kumar KHFirst Published Jan 31, 2023, 1:53 PM IST
Highlights

ರಮೇಶ್ ಜಾರಕಿ ಹೊಳಿ ಕಳ್ಳಭಟ್ಟಿ ಮಾರಾಟ ದಂಧೆ ನಡೆಸುತ್ತಿದ್ದ ವೇಳೆ ಅಬಕಾರಿ ಅಧಿಕಾರಿಯಾಗಿದ್ದ ಇಂಗಳೆ ಎಂಬುವರನ್ನು ಇದೇ ರಮೇಶ್ ಜಾರಕಿಹೊಳಿ ಹಾಗು ಸಹಚರರು 1988ರಲ್ಲಿ ಕೊಲೆ ಮಾಡಿದ್ದಾರೆ.

ಮೈಸೂರು (ಜ.31): ರಮೇಶ್ ಜಾರಕಿ ಹೊಳಿ ಕಳ್ಳಭಟ್ಟಿ ಮಾರಾಟ ದಂಧೆ ನಡೆಸುತ್ತಿದ್ದನು. ಕಳ್ಳಭಟಟ್ಟಿ ದಂಧೆ ನಡೆಸುತ್ತಿದ್ದ ವೇಳೆ ಅಬಕಾರಿ ಅಧಿಕಾರಿಯಾಗಿದ್ದ ಇಂಗಳೆ ಎಂಬುವರನ್ನು ಇದೇ ರಮೇಶ್ ಜಾರಕಿಹೊಳಿ ಹಾಗು ಸಹಚರರು 1988ರಲ್ಲಿ ಕೊಲೆ ಮಾಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಜಕಾರಣಕ್ಕೂ ಬರುವ ಮೊದಲು ರಾಮಪ್ಪ ಲಕ್ಕಪ್ಪ ಜಾರಕಿಹೊಳಿ (ರಮೇಶ್‌ ಜಾರಕಿಹೊಳಿ) ಕಳ್ಳಭಟ್ಟಿ ದಂಧೆ ನಡೆಸುತ್ತಿದ್ದನು. ಈ ದಂಧೆಯನ್ನು ತಡೆಯಲು ಮುಂದಾಗಿದ್ದ ಅಬಕಾರಿ ಅಧಿಕಾರಿಯನ್ನು ಕೊಲೆ ಮಾಡಿದ್ದಾರೆ. ಇದರ ಪರಿಣಾಮ ಒಂದು ವರ್ಷಕ್ಕೂ ಹೆಚ್ಚು ಸಮಯ ರಮೇಶ್ ಜಾರಕಿಹೊಳಿ ತಲೆ ಮರೆಸಿಕೊಂಡಿದ್ದನು. ರಮೇಶ್ ಜಾರಕಿಹೊಳಿ ಮುನ್ನೂರಕ್ಕೂ ಹೆಚ್ಚು ಜನರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸುಮಾರು 30 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಹೊಂದಿದ್ದಾರೆ ಎಂದು ದೂರಿದ್ದಾರೆ.

10 ಸಾವಿರ ಕೋಟಿ ರೂ. ಹಗರಣಕ್ಕೆ ಸಹಕರಿಸದ ಹಿನ್ನೆಲೆ ಸಿಡಿ ಬಿಡುಗಡೆ: ಡಿಕೆಶಿ ವಿರುದ್ಧ ರಮೇಶ್‌ ಜಾರಕಿಹೊಳಿ ಆರೋಪ

ಹೆಸರು ಬದಲಾವಣೆ ಮಾಡಿ ಮೋಸ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಿಟ್ ಅಂಡ್ ರನ್ ಮಾಡಿದ್ದಾರೆ. ರಮೇಶ್ ಜಾರಕಿ ಹೊಳಿಯ ನಿಜವಾದ ಹೆಸರು ರಾಮಪ್ಪ ಲಕ್ಕಪ್ಪ ಜಾರಕಿಹೊಳಿ ಆಗಿದೆ. ಶಾಲಾ ದಾಖಲಾತಿಯ ಪ್ರಕಾರ ರಾಮಪ್ಪ ಲಕ್ಕಪ್ಪ ಜಾರಕಿಹೊಳಿ ಎಂದಿದೆ. ಆದರೆ ಹೆಸರು ಬದಲಾವಣೆ ಬಗ್ಗೆ ರಮೇಶ್ ಜಾರಕಿಹೊಳಿ ಎಲ್ಲಿಯೂ ಉಲ್ಲೇಖಿಸಿಲ್ಲ. ಹೆಸರು ಬದಲಾವಣೆ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿಲ್ಲ. ಇದು ಇವರು ಮಾಡಿರುವ ಬಹುದೊಡ್ಡ ಮೋಸವಾಗಿದೆ ಎಂದು ಆರೋಪಿಸಿದ್ದಾರೆ.

ಒಂದೊಂದು ಕಾಲಿಗೆ ಒಂದು ಚಪ್ಪಲಿ: ನಿನ್ನೆ ರಮೇಶ್‌ ಜಾರಕಿಹೊಳಿ ಅವರು ಮಾತನಾಡುವಾಗ, ಡಿ.ಕೆ. ಶಿವಕುಮಾರ್ ಅವರು ರಾಜಕಾರಣಕ್ಕೆ ಬರುವಾಗ ಕಾಲಿಗೆ ಕಿತ್ತೋದ ಚಪ್ಪಲಿ ಹಾಕಿಕೊಂಡು ಬಂದಿದ್ದನು ಎಂದು ಹೇಳಿದ್ದಾರೆ. ಆದರೆ, ಯಾರು ಒಂದೊಂದು ಕಾಲಿಗೆ ಒಂದೊಂದು ಬಣ್ಣದ ಚಪ್ಪಲಿ ಧರಿಸಿಕೊಂಡಿದ್ದರು ಎಂಬುದರ ಬಗ್ಗೆ ನಮ್ಮ ಬಳಿ ದಾಖಲೆಗಳು ಇದೆ. ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಈಶ್ವರಪ್ಪ, ಸಿ ಟಿ ರವಿ ಬಿಗ್ ಜೋಕರ್ಸ್‌: ಮಾಜಿ ಸಿಎಂ ಸಿದ್ದರಾಮಯ್ಯ ಅವರು ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದ್ದ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ಕೆ.ಎಸ್. ಈಶ್ವರಪ್ಪ ಅವರು ಸಿದ್ದರಾಮಯ್ಯ ಬದುಕಿರುವಾಗಲೂ ಬಿಜೆಪಿಗೆ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಇನ್ನು ಅವರ ಹೆಣವನ್ನು ನಾಯಿ ಕೂಡ ಮೂಸಿ ನೋಡುವುದಿಲ್ಲ ಎಂದು ಟೀಕಿಸಿದ್ದಾರೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಈಶ್ವರಪ್ಪ ಹಾಗೂ ಸಿ ಟಿ ರವಿ ಬಿಗ್ ಜೋಕರ್ಸ್‌ ಆಗಿದ್ದಾರೆ. ಈಶ್ವರಪ್ಪ ತೀವ್ರ ಹತಾಶರಾಗಿದ್ದಾರೆ. ಈಶ್ವರಪ್ಪನವರ ಮಂತ್ರಿ ಸ್ಥಾನ ಏಕೆ ಹೋಯಿತು ಎಂದು ತಿಳಿಸಲಿ. ಈಶ್ವರಪ್ಪನವರನ್ನು ಬಿಜೆಪಿಯ ಯಾವುದೇ ಕಾರ್ಯಕ್ರಮಗಳಿಗೂ ಕರೆಯುತ್ತಿಲ್ಲ‌. ಈಶ್ವರಪ್ಪ ಅವರನ್ನು ಮಾರ್ಗದರ್ಶಕ ಮಂಡಳಿಗೆ ಸೇರಿಸಿ ತುಂಬಾ ದಿನಗಳಾಗಿವೆ. ಈಶ್ವರಪ್ಪ ಚಲಾವಣೆಯಲ್ಲಿಲ್ಲದ ನಾಣ್ಯ ಎಂದು ಹೇಳಿದರು.

ರಮೇಶ್‌ ಜಾರಕಿಹೊಳಿಗೆ ಸುಳ್ಳು ಹೇಳುವ ಚಟವಿದೆ: ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ 

ನಾಳೆ ಮೈಸೂರಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ: ಗುಜಾರಾತ್ ಗಲಭೆಗೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಬಿಜೆಪಿ ವಿರೋಧಿಸುತ್ತಿದೆ. ಆದರೆ, ಬಿಬಿಸಿ ನಿರ್ಮಿಸಿರುವ ಸಾಕ್ಷ್ಯ ಚಿತ್ರವನ್ನು ನಾಳೆ ಮೈಸೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪ್ರದರ್ಶಿಸುತ್ತೇವೆ. ನಮ್ಮನ್ನು ಬಂಧಿಸುತ್ತೀರಾ.? ಸಾಕ್ಷ್ಯ ಚಿತ್ರ ಪ್ರದರ್ಶನವನ್ನು ಅದೇಗೆ ತಡೆಯುತ್ತೀರಿ ತಡೆಯಿರಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸವಾಲು ಹಾಕಿದರು.

click me!