ರಾಜಸ್ಥಾನ ರಾಜಕೀಯದಲ್ಲಿ ಮಹತ್ವದ ತಿರುವು, ಪೈಲೆಟ್ ದೆಹಲಿ ತಲುಪಿದ ಬೆನ್ನಲ್ಲೇ ಗೆಹ್ಲೋಟ್ ಸಭೆ!

By Suvarna NewsFirst Published Sep 27, 2022, 7:13 PM IST
Highlights

ಭಾರತ ಒಗ್ಗೂಡಿಸಲು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ, ಇತ್ತ ರಾಜಸ್ಥಾನ ಕಾಂಗ್ರೆಸ್ ಒಗ್ಗೂಡಿಸುವುದೇ ಕಾಂಗ್ರೆಸ್ ಹೈಕಮಾಂಡ್‌ಗೆ ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ರಾಜಸ್ಥಾನ ಸಿಎಂ ಆಕಾಂಕ್ಷಿ ಸಚಿನ್ ಪೈಲೆಟ್ ದೆಹಲಿ ತಲುಪಿದ್ದಾರೆ. ಇತ್ತ ಸಿಎಂ ಅಶೋಕ್ ಗೆಹ್ಲೋಟ್ ಮನೆಯಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಇದೀಗ ಗೆಹ್ಲೋಟ್ ಬಣದಿಂದ ಮತ್ತೊಂದು ಹೈಡ್ರಾಮ ಸೃಷ್ಟಿಗೆ ವೇದಿಕೆ ರೆಡಿಯಾಗಿದೆ 
 

ಜೈಪುರ(ಸೆ.27): ರಾಜಸ್ಥಾನ ಕಾಂಗ್ರೆಸ್‌ನ ರಾಜಕೀಯದಾಟಕ್ಕೆ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಹೇಳ ಹೆಸರಿಲ್ಲದಂತಾಗಿದೆ. ಇದೀಗ ದೇಶದಲ್ಲಿ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಎದ್ದಿರುವ ಬಿರುಗಾಳಿ ಸದ್ದೇ ಜೋರಾಗುತ್ತಿದೆ. ಸಿಎಂ ಸ್ಥಾನ ಬಿಟ್ಟುಕೊಡಲು ನಿರಾಕರಿಸುತ್ತಿರುವ ಅಶೋಕ್ ಗೆಹ್ಲೋಟ್ ಹಾಗೂ ಬಣ ಮತ್ತೊಂದು ಹೈಡ್ರಾಮ ಸೃಷ್ಟಿಸಲು ಸಜ್ಜಾಗಿದೆ. ಗೆಹ್ಲೋಟ್ ವಿರೋಧಿ ಬಣದ ನಾಯಕ ಸಚಿನ್ ಪೈಲೆಟ್ ದೆಹಲಿ ತಲುಪುತ್ತಿದ್ದಂತೆ ಇತ್ತ ಅಶೋಕ್ ಗೆಹ್ಲೋಟ್ ತಮ್ಮ ನಿವಾಸದಲ್ಲಿ 15 ರಿಂದ 16 ಶಾಸಕರ ಜೊತೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಅಶೋಕ್ ಗೆಹ್ಲೋಟ್ ಅವರನ್ನು ಹೊರಗಿಡಲು ಹೈಕಮಾಂಡ್ ನಿರಾಕರಿಸಿದೆ. ಹೀಗಾಗಿ ಇಷ್ಟು ದಿನ ಗೆಹ್ಲೋಟ್ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿದೆ. ಇದೀಗ ಸಚಿನ್ ಪೈಲೆಟ್ ಬಣಕ್ಕೆ ಸಿಎಂ ಸ್ಥಾನ ನೀಡಿದರೆ ಮತ್ತೊಂದು ರಾಜೀನಾಮೆ ನಾಟಕಕಕ್ಕೆ ಸಜ್ಜಾಗಲು ಶಾಸಕರಿಗೆ ಗೆಹ್ಲೋಟ್ ಕರೆ ನೀಡಿರುವು ಮಾತುಗಳು ಕೇಳಿಬಂದಿದೆ. 

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ(Congress President Election) ಒಲ್ಲದ ಮನಸ್ಸಿನಿಂದ ಸ್ಪರ್ಧಿಸುವ ಅಶೋಕ್ ಗೆಹ್ಲೋಟ್(Ashok Gehlot) ಇದೀಗ ಚುನಾವಣೆಯಿಂದ ಹೊರಬರಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಪರೋಕ್ಷವಾಗಿ ತಮ್ಮ ಬಣದ ಶಾಸಕರನ್ನು ಬಳಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನ ಕೈತಪ್ಪು ಭೀತಿ ಹಾಗೂ ಸಿಎಂ ಸ್ಥಾನ ತನ್ನ ವಿರೋಧಿ ಬಣ ಸಚಿನ್ ಪೈಲೆಟ್(Sahin Pilot) ಪಾಲಾಗುವ ಆತಂಕ. ಇವೆರಡನ್ನು ತಪ್ಪಿಸಲು ತಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ಬಕೆಯನ್ನು ಅಶೋಕ್ ಗೆಹ್ಲೋಟ್ ಹೊಂದಿದ್ದಾರೆ. ಇತ್ತ ಕಾಂಗ್ರೆಸ್(Congress) ರಾಷ್ಟ್ರೀಯ ಅಧ್ಯಕ್ಷನಾದರೂ ಪಕ್ಷದ ಸಂಪೂರ್ಣ ಅಧಿಕಾರ ಹಾಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ(Lok sabha election) ಕಾಂಗ್ರೆಸ್‌ಗೆ ಅಧಿಕಾರ ಸಿಗುವ ಕುರಿತು ಯಾವುದೇ ಖಚಿತತೆ ಇಲ್ಲ. ಹೀಗಾಗಿ ಅಶೋಕ್ ಗೆಹ್ಲೋಟ್ ಸಿಎಂ ಸ್ಥಾನದಲ್ಲೇ ಮುಂದುವರಿಯಲು ಇಚ್ಚಿಸಿದ್ದಾರೆ.

ರಾಜಸ್ಥಾನ ಸಿಎಂ-ಸಚಿನ್‌ ಪೈಲಟ್‌ ವೈಷಮ್ಯ ಮತ್ತೆ ಬಯಲು, ಗೆಹ್ಲೋಟ್ ಆಪ್ತ ಸಚಿವನ ಮೇಲೆ ಶೂ ಎಸೆತ!

ಇದೇ ಕಾರಣಕ್ಕೆ ತಮ್ಮ ನಿವಾಸದಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆ. ಇತ್ತ ಸಚಿನ್ ಪೈಲೆಟ್ ದೆಹಲಿಗೆ ತೆರಳಿದ್ದು, ಸೋನಿಯಾ ಗಾಂಧಿಯನ್ನು ಭೇಟಿಯಾಗಲಿದ್ದಾರೆ. ಅಶೋಕ್ ಗೆಹ್ಲೋಟ್ ಬಣದ ಹೈಡ್ರಾಮ(Rajasthan Congress Political Crisis) ಹೆಚ್ಚಾಗುತ್ತಿದ್ದಂತೆ ಇದೀಗ ಕಾಂಗ್ರೆಸ್ ಹೈಕಮಾಂಡ್ ರಾಜಸ್ಥಾನದ ಚುಕ್ಕಾಣಿಯನ್ನು ಸಚಿನ್ ಪೈಲೆಟ್ ಬಣಕ್ಕೆ ನೀಡಲು ಉತ್ಸುಕತೆ ತೋರಿದ್ದಾರೆ. ಆದರೆ ಇದು ಗೆಹ್ಲೋಟ್ ಬಣಕ್ಕೆ ಸುತಾರಾಂ ಇಷ್ಟವಿಲ್ಲ. ಸರ್ಕಾರದ ವಿರುದ್ಧವೇ ಬಂಡಾಯವೆದ್ದ ಬಣಕ್ಕೆ ಸಿಎಂ ಸ್ಥಾನ ನೀಡುವುದು ಎಷ್ಟು ಸರಿ? ಇದರ ಬದಲು ಸಂಕಷ್ಟದಲ್ಲಿ ಸರ್ಕಾರದ ಪರ ನಿಂತ ಅಶೋಕ್ ಗೆಹ್ಲೋಟ್ ಬಣಕ್ಕೆ ಸಿಎಂ ಸ್ಥಾನ ಸಿಗಬೇಕು ಎಂಬುದು ವಾದ. 

ಇತ್ತ ಅಶಿಸ್ತು ತೋರಿದ ಪಕ್ಷದ 82 ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಮಲ್ಲಿಕಾರ್ಜುನ್ ಖರ್ಗೆ, ಅಜಯ್ ಮಾಕೇನ್ ನೇತೃತ್ವದ ಹಿರಿಯ ತಂಡ ಸುದೀರ್ಘ ವರದಿ ತಯಾರಿಸಿದ್ದು, ಇಂದು ಸೋನಿಯಾ ಗಾಂಧಿಗೆ ನೀಡಲಿದ್ದಾರೆ. ಇತ್ತ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ನಾಯಕ ಶಶಿ ತರೂರ್, ಕಾಂಗ್ರೆಸ್ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ರೇಸ್‌ನಲ್ಲಿ ಉಳಿದುಕೊಂಡಿದ್ದಾರೆ. ಇತ್ತ ಅಶೋಕ್ ಗೆಹ್ಲೋಟ್‌ರನ್ನು ಹೈಕಮಾಂಡ್ ಹೊರಗಿಟ್ಟಿಲ್ಲ ಅನ್ನೋ ಸ್ಪಷ್ಟನೆಯೂ ಬಂದಿದೆ. 

ಮಹಿಳೆಗೆ ಗೊತ್ತಿದ್ದ ಸಂಬಂಧಿಗಳೇ ರೇಪ್‌ ಮಾಡ್ತಾರೆ, ಇಂದಿನ ಅರ್ಧಕ್ಕರ್ಧ ರೇಪ್‌ ಕೇಸ್‌ಗಳು ಸುಳ್ಳು: ಅಶೋಕ್‌ ಗೆಹ್ಲೋಟ್

click me!