ಶಿವ ಸೇನೆ ಯಾರ ಪಕ್ಷ? ಸುಪ್ರೀಂ ವಿಚಾರಣೆಯಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ!

By Suvarna NewsFirst Published Sep 27, 2022, 5:44 PM IST
Highlights

ಶಿವಸೇನೆಯ ಚಿಹ್ನೆಯಾದ ‘ಬಿಲ್ಲು ಮತ್ತು ಬಾಣ’ ತಮ್ಮದು ಎಂದು ಕೋರ್ಟ್ ಮೆಟ್ಟಿಲೇರಿದ್ದ ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆಯಾಗಿದೆ. ಏಕನಾಥ್ ಶಿಂಧೆ ಬಣದ ವಾದದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ.

ನವದೆಹಲಿ(ಸೆ.27):  ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ನಡುವಿನ ಹೋರಾಟದಲ್ಲಿ ಮತ್ತೆ ಠಾಕ್ರೆ ಬಣಕ್ಕೆ ಹಿನ್ನಡೆಯಾಗಿದೆ. ಶಿವಸೇನೆ ಯಾರ ಪಕ್ಷ? ಯಾವ ಬಣ ಶಿವ ಸೇನೆ ಪಕ್ಷ ಚಿಹ್ನೆ ಅಡಿ ಸ್ಪರ್ಧಿಸಬೇಕು? ಅನ್ನೋ ವಿವಾದ ಸುಪ್ರೀಂ ಮೆಟ್ಟೇಲಿರಿತ್ತು. ಹಲವು ದಿನಗಳ ವಿಚಾರಣೆ ಬಳಿಕ ಇದೀಗ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಶಿವ ಸೇನೆ ಯಾರ ಪಕ್ಷ ಅನ್ನೋ ನಿರ್ಧಾರವನ್ನು ಚುನಾವಣಾ ಆಯೋಗ ಮಾಡಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದೇ ವಿಚಾರವನ್ನು ಏಕನಾಥ್ ಶಿಂಧೆ ಬಣ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿತ್ತು. ಶಿವ ಸೇನೆಯಿಂದ ಪಕ್ಷಾಂತರ ಮಾಡಿದ ಶಾಸಕರ ಅನರ್ಹತೆ ವಿಚಾರಣೆ ಮೊದಲು ನಡೆಯಬೇಕು. ಇಷ್ಟೇ ಅಲ್ಲ ಪಕ್ಷ ಚಿಹ್ನೆ ನಿರ್ಧಾರವನ್ನು ಚುನಾವಣಾ ಆಯೋಗ ಮಾಡಬಾರದು ಎಂದು ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತ್ತು. ಆದರೆ ಪಕ್ಷದ ಚಿಹ್ನೆ ನಿರ್ಧಾರವನ್ನು ಚುನಾವಣಾ ಆಯೋಗ ನಿರ್ಧರಿಸಲಿ ಎಂದು ಶಿಂಧೆ ಬಣ ವಾದಿಸಿತ್ತು. ಈ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಠಾಕ್ರೆ ಬಣಕ್ಕೆ ಆಘಾತ ನೀಡಿದೆ.

ಶಿವಸೇನೆ ಪಕ್ಷದಿಂದ 39 ಶಾಸಕರ ಜೊತೆ ಬಂಡೆದ್ದು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಬಣವು ಶಿವಸೇನೆಯ ಚಿಹ್ನೆಯಾದ ‘ಬಿಲ್ಲು ಮತ್ತು ಬಾಣ’ ತಮ್ಮದು ಎಂದು ಚುನಾವಣಾ ಆಯೋಗಕ್ಕೆ ಪತ್ರ ನೀಡಿತ್ತು. ಅದಕ್ಕೆ ಉದ್ಧವ್‌ ಬಣ ಆಕ್ಷೇಪ ವ್ಯಕ್ತಪಡಿಸಿತ್ತು. ಎರಡೂ ಬಣದ ನಾಯಕರು ದಾಖಲೆ ಸಲ್ಲಿಸಿದ್ದರು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 

ಬಿಲ್ಕಿಸ್ ಬಾನೋ ಅತ್ಯಾಚಾರಿಗಳನ್ನು ಸನ್ಮಾನಿಸುವುದು ಹಿಂದೂ ಸಂಸ್ಕೃತಿಯೇ..?: ಶಿವಸೇನೆ

ಚುನಾವಣಾ ಆಯೋಗದ ನಿಯಮದ ಪ್ರಕಾರ ಶಿಂಧೆ ಬಣಕ್ಕೆ ವರವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಉದ್ಧವ್ ಠಾಕ್ರೆ ಬಣಕ್ಕೆ ಆಯೋಗದಲ್ಲೂ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಏಕನಾಥ್ ಶಿಂಧೆ ಬಣದ ಮುಂದಿದ್ದ ಬಹುದೊಡ್ಡ ಸವಾಲು ನಿವಾರಣೆಯಾಗುವತ್ತ ಸಾಗಿದೆ.

ಏಕನಾಥ್ ಶಿಂಧೆ ಬಣದ ವಿರುದ್ಧದ ಬಹುತೇಕ ಎಲ್ಲಾ ಹೋರಾಟದಲ್ಲಿ ಉದ್ಧವ್ ಠಾಕ್ರೆ ಬಣಕ್ಕೆ ಹಿನ್ನಡೆಯಾಗಿದೆ.  ಆದರೆ ಶಿವಾಜಿ ಪಾರ್ಕ್‌ನಲ್ಲಿ ದಸರಾ ಆಚರಣೆ ವಿಚಾರದಲ್ಲಿ ಠಾಕ್ರೆ ಬಣ ಮೇಲುಗೈ ಸಾಧಿಸಿತ್ತು.  

 

ಇಡಿ ನನ್ನನ್ನು ಗಾಳಿ - ಬೆಳಕು, ಕಿಟಕಿ ಇಲ್ಲದ ಕೋಣೆಯಲ್ಲಿಟ್ಟಿದೆ: ಸಂಜಯ್ ರಾವುತ್‌

ಶಿವಾಜಿ ಪಾರ್ಕಲ್ಲಿ ದಸರಾ ಆಚರಣೆ: ಉದ್ಧವ್‌ ಬಣಕ್ಕೆ ಹೈಕೋರ್ಟ್ ಅನುಮತಿ
ಶಿವಾಜಿ ಪಾರ್ಕ್ನಲ್ಲಿ ಅ.5ರಂದು ದಸರಾ ಆಚರಣೆ ನಡೆಸಲು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಣಕ್ಕೆ ಬಾಂಬೆ ಹೈಕೋರ್ಚ್‌ ಶುಕ್ರವಾರ ಅನುಮತಿ ನೀಡಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ದಸರಾ ಆಚರಣೆಗೆ ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಉದ್ಧವ್‌ ನೇತೃತ್ವ ಶಿವಸೇನೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ವಿಚಾರಿಸಿ ಈ ತೀರ್ಪು ನೀಡಿದೆ. ‘ಬಿಎಂಸಿ ಆದೇಶವು ಕಾನೂನು ಪ್ರಕ್ರಿಯೆ ಹಾಗೂ ವಿಶ್ವಾಸಾರ್ಹತೆಯ ಸ್ಪಷ್ಟಉಲ್ಲಂಘನೆಯಾಗಿದೆ’ ಎಂದು ಕೋರ್ಚ್‌ ಕಿಡಿಕಾರಿದ್ದು, ಅ.2ರಿಂದ ಅ.6ರವರೆಗೆ ಶಿವಾಜಿ ಪಾರ್ಕಿನ ಜಾಗವನ್ನು ಬಳಸಿಕೊಳ್ಳಲು ಉದ್ಧವ್‌ ಬಣಕ್ಕೆ ಅನುಮತಿ ನೀಡಿದೆ. ಅಲ್ಲದೇ ಆಚರಣೆ ವೇಳೆ ಕಾನೂನು ಹಾಗೂ ಸುವ್ಯವಸ್ಥೆ ಪಾಲನೆ ಮಾಡುವಂತೆ ಸೂಚಿಸಿದೆ.
 

click me!