ಕಾಂಗ್ರೆಸ್‌ ಮುಕ್ತ ಭಾರತ ಮಾಡಲು ಬಿಜೆಪಿ ಪಣ: ನಳಿನ್‌ ಕುಮಾರ್‌ ಕಟೀಲ್‌

By Kannadaprabha NewsFirst Published Sep 27, 2022, 7:10 PM IST
Highlights

ಕಾಂಗ್ರೆಸ್‌ ಪಕ್ಷಕ್ಕೆ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಗೋಮಾತೆ ಶಾಪದಿಂದ ಕಾಂಗ್ರೆಸ್‌ ದೇಶದಿಂದ ನಿರ್ಮೂಲನೆಯಾಗುತ್ತದೆ: ಕಟೀಲ್‌ 

ಜಮಖಂಡಿ(ಸೆ. 27):  ನವರಾತ್ರಿ ಪರ್ವದಲ್ಲಿ ಚುನಾವಣೆ ಪ್ರಚಾರ ಬಿಜೆಪಿ ಪ್ರವಾಸ ಪ್ರಾರಂಭಿಸಿದ್ದು, ದೇಶದಲ್ಲಿ ಕಾಂಗ್ರೆಸ್‌ ಮುಕ್ತ ಭಾರತ ಮಾಡಲು ಬಿಜೆಪಿ ಪಣತೊಟ್ಟಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ಇಲ್ಲಿನ ಬಸವಭವನ ಸಭಾಭವನದಲ್ಲಿ ಬಿಜೆಪಿ ಕಾರ್ಯಕರ್ತರ ಮತ್ತು ಸಾರ್ವಜನಿಕ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಗೋಮಾತೆ ಶಾಪದಿಂದ ಕಾಂಗ್ರೆಸ್‌ ದೇಶದಿಂದ ನಿರ್ಮೂಲನೆಯಾಗುತ್ತದೆ. ಸ್ವಾತಂತ್ರ ಪೂರ್ವದಲ್ಲಿ ಗಾಂಧೀಜಿ ಕಾಂಗ್ರೆಸ್‌ ವಿಸರ್ಜಿಸಬೇಕೆಂಬ ಆಶೆಗೆ ತಣ್ಣೀರು ಹಾಕಿದರು. ಡಾ.ಅಂಬೇಡ್ಕರನ್ನು ಲೋಕಸಭೆ-ರಾಜ್ಯಸಭೆಗೆ ಕಳಿಸದೇ ಮೋಸ ಮಾಡಿದೆ. ಅಲ್ಲದೆ ಅಂತ್ಯಕ್ರಿಯೆಗೆ ಜಾಗ ನೀಡದ ಶಾಪ ಹಾಗೆಯೇ ಗೋವುಗಳನ್ನು ರಕ್ಷಿಸುವ ಬದಲಾಗಿ ಗೋವು ಹಂತಕರ ರಕ್ಷಣೆ ಮಾಡಿರುವ ಶಾಪ ತಗುಲಿದೆ ಎಂದರು.

ಪಿಎಸೈ ಹಗರಣ, ಶಿಕ್ಷಕರ ನೇಮಕಾತಿ ಹಗರಣ, ಡ್ರಗ್‌ ಮಾಫಿಯಾ, ಸ್ಯಾಂಡ್‌ ಮಾಫಿಯಾ ಕಾಂಗ್ರೆಸ್‌ ಆಡಳಿತದಲ್ಲಿ ನಡೆದಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಕಾಂಗ್ರೆಸ್‌ ಹೈಕಮಾಂಡಗೆ ಕಮೀಷನ್‌ ನೀಡಿದ್ದಾರೆ. ಕಾಂಗ್ರೆಸ್‌ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ, ಆರ್‌.ವಿ.ದೇಶಪಾಂಡೆ ಅವ ರಿಗೆ ಏಕೆ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ ಎಂದು ಲೇವಡಿ ಮಾಡಿದರು.

ನಳಿನ್ ಕುಮಾರ್ ಕಟೀಲ್ ಒಬ್ಬ ವಿಧೂಷಕ ಇದ್ದಂಗೆ, ಪಾಪ ಮೆಚುರಿಟಿ ಇಲ್ಲ: ಸಿದ್ದು ವ್ಯಂಗ್ಯ

ಕಾಂಗ್ರೆಸ್‌ ಆಡಳಿತದಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದು, ಹಂತಕರನ್ನು ಜೈಲಿಗೆ ಕಳಹಿಸುವ ಬದಲಾಗಿ ರಕ್ಷಣೆ ನೀಡಲಾಗಿತ್ತು. ವಿಶ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬೆಳವಣಿಗೆ ಸಹಿಸದ ಕಾಂಗ್ರೆಸ್‌ ಪಕ್ಷದವರು ಬಿಜೆಪಿ ಪಕ್ಷ ಮತ್ತು ಆಡಳಿತ ಯಂತ್ರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಲ್ಲಿ 65 ವರ್ಷ ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಆಡಳಿತ ನಡೆಸಿದೆ. ಭ್ರಷ್ಟಾಚಾರ ಹುಟ್ಟಿದ್ದೆ ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ಬಡವರ ಉದ್ಧಾರ ಮಾಡುವ ವೇಷ ಧರಿಸಿದ ಕಾಂಗ್ರೆಸ್‌ ಯಾವ ರೀತಿ ಆಡಳಿತ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತ ಅವಧಿಯಲ್ಲಿ ಪಾರದರ್ಶಕ ವ್ಯವಸ್ಥೆಯಿಂದ ಕಟ್ಟಕಡೆ ಫಲಾನುಭವಿಗಳ ಸೌಲಭ್ಯಗಳು ಲಭಿಸುತ್ತಿವೆ ಎಂದರು.

ಕರ್ನಾಟಕ ಕಾಂಗ್ರೆಸ್‌ದಲ್ಲಿ ಎರಡು ಗುಂಪುಗಳಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಹಿರಂಗವಾಗಿ ಸಮರ ಆರಂಭವಾಗಿದೆ. ಶೀಘ್ರದಲ್ಲೇ ಕಾಂಗ್ರೆಸ್‌ ಪಕ್ಷ ಇಬ್ಭಾಗವಾಗಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನರಹಂತಕ ರೂಪದಲ್ಲಿದ್ದಾರೆ. ಬರತಕ್ಕ 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲವು ಸಾಧಿಸಲಿದ್ದು, ಅದರಲ್ಲಿ ಜಮಖಂಡಿ ಮತಕ್ಷೇತ್ರದ ಅಭ್ಯರ್ಥಿಯ ಗೆಲವಿಗಾಗಿ ಕಾರ್ಯಕರ್ತರು ಶ್ರಮ ವಹಿಸಬೇಕು ಎಂದು ಕೋರಿದರು.

ಲೋಕಾಯುಕ್ತ ಇದ್ದಿದ್ದರೆ ಅಂದೇ ಸಿದ್ದರಾಮಯ್ಯ ಜೈಲಿಗೆ ಹೋಗಿರುತ್ತಿದ್ದರು: ಕಟೀಲ್

ನೀರಾವರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಶೇ.40 ಪರ್ಸೆಂಟ್‌ ಕಮಿಷನ್‌ ಕಾಂಗ್ರೆಸ್‌ ಮಾಡಿರುವ ಆರೋಪ ಶುದ್ಧ ಸುಳ್ಳು, ತಾಕತ್ತಿದ್ದರೆ ಪ್ರಕರಣ ದಾಖಲಿ ಸಲಿ ಎಂದು ಕಾಂಗ್ರೆಸ್‌ ಪಕ್ಷಕ್ಕೆ ಸವಾಲು ಹಾಕಿದರು.

ಮಹೇಶ ಟೆಂಗಿನಕಾಯಿ, ಶಾಂತಗೌಡ ಪಾಟೀಲ, ಶಾಸಕ ಸಿದ್ದು ಸವದಿ, ವಿಧಾನ ಪರಿಷ ತ್‌ ಸದಸ್ಯ ಹನಮಂತ ನಿರಾಣಿ, ಬಸವರಾಜ ಯಂಕಂಚಿ, ಜಿ.ಎಸ್‌.ನ್ಯಾಮಗೌಡ, ಚಂದ್ರಶೇಖರ ಪಾಟೀಲ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಗದೀಶ ಗುಡಗುಂಟಿ, ಚಂದ್ರಶೇಖರ ಕವಟಗಿ, ಅಜಯ ಕಡಪಟ್ಟಿ, ಮಹಾದೇವ ನ್ಯಾಮಗೌಡ, ಡಾ.ವಿಜಯಲಕ್ಷ್ಮೀ ತುಂಗಳ, ಪ್ರಕಾಶ ಕಾಳೆ, ಬಸವರಾಜ ಕಲೂತಿ, ಮಹಾದೇವಿ ಮೂಲಿಮನಿ, ಗೀತಾ ಸೂರ್ಯವಂಶಿ, ಸಿ.ಟಿ.ಉಪಾಧ್ಯಾಯ ಇದ್ದರು.
 

click me!