ನೋಟ್‌ಬ್ಯಾನ್‌ ಬಗ್ಗೆ ಮಾತಾಡಿದ್ರೆ ಮೈಕ್‌ ಆಫ್‌ ಮಾಡ್ತಾರೆ: ರಾಹುಲ್ ಗಾಂಧಿ

Published : Nov 10, 2022, 06:12 PM IST
ನೋಟ್‌ಬ್ಯಾನ್‌ ಬಗ್ಗೆ ಮಾತಾಡಿದ್ರೆ ಮೈಕ್‌ ಆಫ್‌ ಮಾಡ್ತಾರೆ: ರಾಹುಲ್ ಗಾಂಧಿ

ಸಾರಾಂಶ

ತಮ್ಮ ಮೈಕ್ ಅನ್ನು ಆಫ್ ಮತ್ತು ಆನ್ ಮಾಡುತ್ತಾ, ಬಿಜೆಪಿ ಸರ್ಕಾರವು ತಮಗೆ ಮುಜುಗರವಾಗುವ ವಿಷಯಗಳ ಬಗ್ಗೆ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಏನಾಗುತ್ತದೆ ಎಂದು ಆರೋಪಿಸಿ ಅದರ ಪ್ರಾತ್ಯಕ್ಷಿಕೆ ನೀಡುವ ಪ್ರಯತ್ನ ಮಾಡಿದ್ದಾರೆ ರಾಹುಲ್.

ಕಾಂಗ್ರೆಸ್‌ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ (Bharat Jodo Yatra) ಸದ್ಯ, ಮಹಾರಾಷ್ಟ್ರದಲ್ಲಿ (Maharashtra) ನಡೆಯುತ್ತಿದೆ. ಈ ವೇಳೆ, ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿ (Nanded) ಮೈಕ್‌ (Mike) ಆನ್ ಹಾಗೂ ಮೈಕ್‌ ಆಫ್‌ ಮಾಡಿ ಸುದ್ದಿಯಾಗಿದ್ದಾರೆ ರಾಹುಲ್ ಗಾಂಧಿ. ಹೌದು, ತಮ್ಮ ಮೈಕ್ ಅನ್ನು ಆಫ್ ಮತ್ತು ಆನ್ ಮಾಡುತ್ತಾ, ಬಿಜೆಪಿ (BJP) ಸರ್ಕಾರವು ತಮಗೆ ಮುಜುಗರವಾಗುವ ವಿಷಯಗಳ ಬಗ್ಗೆ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಏನಾಗುತ್ತದೆ ಎಂದು ಆರೋಪಿಸಿ ಅದರ ಪ್ರಾತ್ಯಕ್ಷಿಕೆ ನೀಡುವ ಪ್ರಯತ್ನ ಮಾಡಿದ್ದಾರೆ ಕಾಂಗ್ರೆಸ್‌ ನಾಯಕ ರಾಹುಲ್.

"ಅವರು ಏನು ಮಾಡುತ್ತಾರೆ ಎಂಬುದನ್ನು ನೋಡಿ. ನೋಟ್ ಬ್ಯಾನ್ (2016 ರ) ಕುರಿತು ನಾವು ಮಾತನಾಡುವಾಗಲೆಲ್ಲಾ ಈ ರೀತಿಯಾಗಿ ಮೈಕ್ ಆಫ್ ಮಾಡುತ್ತಾರೆ," ಎಂದಿದ್ದಾರೆ. ಈಗ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ತಮ್ಮ 'ಭಾರತ್ ಜೋಡೋ ಯಾತ್ರೆ'ಯ ಭಾಗವಾಗಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಕೆಲ ಕಾಲ ರಾಹುಲ್ ಗಾಂಧಿ ತಮ್ಮ ಮೈಕ್‌ ಆಫ್‌ ಮಾಡಿದ್ದರಿಂದ ಕೆಲ ಕಾಲ ಅವರ ಭಾಷಣ ಯಾರಿಗೂ ಕೇಳಿಸುತ್ತಿರಲಿಲ್ಲ. 

ಇದನ್ನು ಓದಿ: ಇಲ್ಲಿ ಸಿಎಂ ಅಲ್ಲಿ ಪಿಎಂ : ಮೋದಿ ವಿರುದ್ಧ ರಾಹುಲ್ ಪೇಪಿಎಂ ಆರೋಪ

ಬಳಿಕ ಮುಗುಳ್ನಗುತ್ತಾ, ಹಿಂದಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ,  ಮೈಕ್ ಅನ್ನು ಮತ್ತೆ ಆನ್ ಮಾಡಿದರು: "ಇಲ್ಲಿ, ನನ್ನ ಬಳಿ ನಿಯಂತ್ರಣವಿದೆ. ಆದರೆ ಸಂಸತ್ ಭವನದಲ್ಲಿ ಇದ್ದಕ್ಕಿದ್ದಂತೆ ಮೈಕ್ ಅನ್ನು ಸ್ವಿಚ್ ಆಫ್ ಮಾಡಲಾಗುತ್ತದೆ. ಏನಾಯಿತು ಎಂದು ನಾವು ಆಶ್ಚರ್ಯ ಪಡುತ್ತೇವೆ." ಎಂದು ಹೇಳಿದ್ದಾರೆ.

"ಚೀನಾದ ಸೈನ್ಯವು 2,000 ಚದರ ಕಿಲೋಮೀಟರ್‌ಗಳನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಿದರೂ ಮೈಕ್ ಆಫ್" ಎಂದು ಅವರು ಆರೋಪಿಸಿದರು. "ನಾವು ಏನು ಹೇಳುತ್ತಿದ್ದರೂ, ಯಾರೂ ಅದನ್ನು ಕೇಳಲು ಸಾಧ್ಯವಾಗುವುದಿಲ್ಲ, ನೋಡಿ - ಮೈಕ್ ಆಫ್" ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ತಿಳಿಸಿದ್ದಾರೆ. ಈ ವಿಡಿಯೋವನ್ನು ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಟೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್‌ ನಟಿ ಆಲಿಯಾ ಭಟ್‌ ಅಕ್ಕನ ಜತೆಗೆ ರಾಹುಲ್‌ ಗಾಂಧಿ ಭಾರತ್ ಜೋಡೋ ಯಾತ್ರೆ..!

ಅಲ್ಲದೆ, ಕಾಂಗ್ರೆಸ್‌ನ ಉಪಕ್ರಮಗಳನ್ನು ಮುಖ್ಯವಾಹಿನಿಯ ಮಾಧ್ಯಮಗಳು ಕವರ್‌ ಮಾಡದ ಕಾರಣ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಯಾತ್ರೆ ಅಗತ್ಯವಾಗಿದೆ ಎಂದೂ ರಾಹುಲ್ ಗಾಂಧಿ ಹೇಳಿದರು. ಹಾಗೂ, ಪ್ರತಿಪಕ್ಷ ನಾಯಕರ ವಿರುದ್ಧ ಕೇಂದ್ರೀಯ ಸಂಸ್ಥೆ ಇಡಿಯನ್ನು  ದುರುಪಯೋಗ ಪಡಿಸಿಕೊಂಡಿರುವುದನ್ನು ಜನರು ಪ್ರಸ್ತಾಪಿಸುತ್ತಿದ್ದಂತೆ, "ಈ ಇಡಿ, ಶೀ-ಡೀಗೆ ನಾವು ಹೆದರುವುದಿಲ್ಲ" ಎಂದು ರಾಹುಲ್ ಗಾಂಧಿ  ಹೇಳಿದರು.

2014ರಲ್ಲಿ ಬಿಜೆಪಿ ಗೆದ್ದು ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ಪಡೆದುಕೊಂಡ ನಂತರ ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಪಕ್ಷಗಳ ಧ್ವನಿ ಉಸಿರುಗಟ್ಟಿದಂತೆ ಆಗಿದೆ ಎಂದು ಕಾಂಗ್ರೆಸ್ ಹಲವು ವರ್ಷಗಳಿಂದ ಆರೋಪಿಸುತ್ತಲೇ ಬಂದಿದೆ. ಆದರೆ, ಪ್ರತಿಪಕ್ಷಗಳನ್ನು ಜನರು "ತಿರಸ್ಕರಿಸಿದ್ದಾರೆ ಮತ್ತು ಹೇಳಲು ಏನೂ ಇಲ್ಲ" ಎಂದು ಬಿಜೆಪಿ ಇಂತಹ ಆರೋಪಗಳನ್ನು ತಳ್ಳಿ ಹಾಕುತ್ತಿದೆ.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆಯುತ್ತಿರುವ ಯಾತ್ರೆಯ 4ನೇ ದಿನದಂದು ರಾಹುಲ್ ಗಾಂಧಿ ಈ ರೀತಿ ಮೈಕ್‌ ಆನ್ - ಮೈಕ್‌ ಆಫ್‌ ಪ್ರಾತ್ಯಕ್ಷಿಕೆ ನೀಡಿ ಈ ಆರೋಪಗಳನ್ನು ಮಾಡಿದ್ದಾರೆ. 

ಇದನ್ನೂ ಓದಿ: Rahul Gandhi ಶಿರಡಿ ಸಾಯಿಬಾಬಾ ಇದ್ದಂತೆ: ರಾಬರ್ಟ್‌ ವಾದ್ರಾ

2 ತಿಂಗಳ ಹಿಂದೆ ಪ್ರಾರಂಭವಾದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು 2023 ರ ಆರಂಭದಲ್ಲಿ ಶ್ರೀನಗರದಲ್ಲಿ ಮುಕ್ತಾಯಗೊಳ್ಳುವ ಮೊದಲು 3,750 ಕಿ.ಮೀ. ಗಳಷ್ಟು ದೂರ ಕ್ರಮಿಸಲಿದೆ. ಈ ಮಧ್ಯೆ, ಬುಧವಾರ ರಾತ್ರಿ ನಾಂದೇಡ್‌ನಲ್ಲಿ ನಡೆದ ಸಭೆಯಲ್ಲಿ, ಟಾಟಾ-ಏರ್‌ಬಸ್ ಮಿಲಿಟರಿ ವಿಮಾನ ಸಾಹಸೋದ್ಯಮ ಮತ್ತು ವೇದಾಂತ - ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಸ್ಥಾವರದಂತಹ ಯೋಜನೆಗಳನ್ನು "ಮಹಾರಾಷ್ಟ್ರದಿಂದ ತೆಗೆದುಕೊಂಡು ಗುಜರಾತ್‌ಗೆ ಆ ರಾಜ್ಯದ ವಿಧಾನಸಭಾ ಚುನಾವಣೆಯ ಕಾರಣ ನೀಡಲಾಯಿತು" ಎಂದೂ ರಾಹುಲ್‌ ಗಾಂಧಿ ಹೇಳಿದರು.
 
‘ಪ್ರಧಾನಿ ಸ್ನೇಹಿತರಾಗಿರುವ ಇಬ್ಬರು-ಮೂರು ಕೈಗಾರಿಕೋದ್ಯಮಿಗಳಿಗೆ ಈ ಯೋಜನೆಗಳನ್ನು ನೀಡಲಾಗುವುದು ಮತ್ತು ಅವರ ಕೈಯಲ್ಲಿ ದೇಶದ ಸಂಪತ್ತು ಸಂಗ್ರಹವಾಗುತ್ತಿದೆ. ಬಂದರು, ಮೂಲಸೌಕರ್ಯ, ಟೆಲಿಕಾಂ, ಕೃಷಿ ಕ್ಷೇತ್ರಗಳನ್ನು ಈ ಜನರಿಗೆ ನೀಡಲಾಗಿದೆ,’’ ಎಂದೂ ಕಾಂಗ್ರೆಸ್‌ ಸಂಸದ ಆರೋಪಿಸಿದರು.

ಇದನ್ನೂ ಓದಿ: Bharat Jodo Yatra: ಕರ್ನಾಟಕದಲ್ಲಿ ರಾಹುಲ್‌ ಯಾತ್ರೆ ಫೋಟೋ ಶೋ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್