ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದ್ರೆ ಎದುರಿಸಲು ಸಿದ್ಧ: ಆರ್.ಅಶೋಕ್ ಹೇಳಿದ್ದೇನು?

Published : Nov 17, 2025, 07:59 AM IST
R Ashok

ಸಾರಾಂಶ

ರಾಹುಲ್ ಗಾಂಧಿ ಓರ್ವ ಪಾರ್ಟ್ ಟೈಂ ರಾಜಕಾರಣಿ, ಚುನಾವಣೆ ವೇಳೆ ಚುನಾವಣೆ ನಂತರ ಫಾರೀನ್‌ಗೆ ಹೋಗ್ತಾರೆ. ಬರಿ ದೇಶ, ವಿದೇಶ ಸುತ್ತೋದೆ ಇವರ ಕೆಲಸವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.

ಚಾಮರಾಜನಗರ (ನ.17): ರಾಹುಲ್ ಗಾಂಧಿ ಓರ್ವ ಪಾರ್ಟ್ ಟೈಂ ರಾಜಕಾರಣಿ, ಚುನಾವಣೆ ವೇಳೆ ಚುನಾವಣೆ ನಂತರ ಫಾರೀನ್‌ಗೆ ಹೋಗ್ತಾರೆ. ಬರಿ ದೇಶ, ವಿದೇಶ ಸುತ್ತೋದೆ ಇವರ ಕೆಲಸವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು. ವರನಟ ಡಾ.ರಾಜ್ ಕುಮಾರ್ ರಂಗಮಂದಿರದ ಮುಂಭಾಗ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಗಾಂಧಿ ಕುಟುಂಬದ ವಿರುದ್ಧ ಕೆಂಡಕಾರಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ರೆ ಮಾತ್ರ ಇವಿಎಂ ಸರಿಯಾಗಿರುತ್ತೆ. ಬಿಜೆಪಿ ಅಥವಾ ಬೇರೆ ಪಕ್ಷ ಗೆದ್ರೆ ಇವಿಎಂನಲ್ಲಿ ಮೋಸ ಆಗಿರುತ್ತೆ ಎಂದು ಕಿಡಿಕಾರಿದರು.

ಇವರ ಮತ ಚೋರಿ ಸುಳ್ಳಿನ ಕಂತೆಯನ್ನ ದೇಶದ ಜನ ಒಪ್ಪಿಲ್ಲ. ಗಾಂಧಿ ಕುಟುಂಬದ ಆಟ ಇನ್ನು ಯಾವುದೇ ಕಾರಣಕ್ಕೂ ನಡೆಯುವುದಿಲ್ಲ. ಆಫ್ಟರ್ ಬಿಹಾರ ಚುನಾವಣಾ ರಿಸಲ್ಟ್ ರಾಹುಲ್ ಗಾಂಧಿ ಡಮ್ಮಿ ಆಗಿದ್ದಾರೆ. ಇನ್ಮೇಲೆ ರಾಜ್ಯದಲ್ಲಿ ಏನಿದ್ರು ಮುಖ್ಯಮಂತ್ರಿ ಸಿದ್ದರಾಮಯ್ಯರದ್ದೆ ಪ್ರಾಬಲ್ಯ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸ್ತ್ರ ಬಿಹಾರ ಚುನಾವಣೆಯಲ್ಲಿ ವರ್ಕೌಟ್ ಆಗಿಲ್ಲ ಎಂದರು. ಡಿಕೆಶಿ ಶಿವ ಹಾಗೂ ವಿಷ್ಣುವನ್ನು ನೋಡಿದ್ರು ಈಗ ಹಣೆಬರಹ ಬ್ರಹ್ಮನನ್ನು ನೋಡದೊಂದೆ ಬಾಕಿ, ಬಿಹಾರ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಎಲ್ಲ ಉಲ್ಟಾ ಆಗೋಗಿದೆ.

ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಮಾತ್ರ ಪ್ರಾಬಲ್ಯವಾಗಿದೆ. ಚುನಾವಣೆಯ ಪಲಿತಾಂಶ ಬಳಿಕ ಸಿಎಂ ಸಿದ್ದರಾಮಯ್ಯ ಪ್ರಾಬಲ್ಯರಾಗಿದ್ದಾರೆ. ಸಿಎಂ ಕುರ್ಚಿನ ಸಿದ್ದರಾಮಯ್ಯ ಬಿಟ್ಟು ಕೊಡಲ್ಲ ಡಿ.ಕೆ .ಶಿವಕುಮಾರ್ ಸುಮ್ನೆ ಇರೋಲ್ಲ, ಇವರಿಬ್ಬರ ತಿಕ್ಕಾಟದ ಮಧ್ಯೆ ಸರ್ಕಾರ ಬಿದ್ದು ಹೋಗುತ್ತೆ ಎಂದರು. ಮಧ್ಯಂತರ ಚುನಾವಣೆ ಕರ್ನಾಟಕ ರಾಜ್ಯದಲ್ಲಿ ಬರಲಿದೆ. ಚುನಾವಣೆಯನ್ನು ಎದುರಿಸಲು ಬಿಜೆಪಿ ಜೆಡಿಎಸ್ ಸಿದ್ಧವಿದೆ. ಬಿಜೆಪಿ ಜೆಡಿಎಸ್ ಒಟ್ಟಾಗಿ ಒಗ್ಗಟ್ಟಾಗಿ ಮುಂಬರುವ ಚುನಾವಣೆಯನ್ನು ಎದುರಿಸಲಿದೆ ಎಂದು ಆರ್.ಅಶೋಕ್ ಹೇಳಿಕೆ ನೀಡಿದರು.

ಮೆರವಣಿಗೆಗೆ ಚಾಲನೆ

ಚಾಮರಾಜನಗರದಲ್ಲಿ ಬಿಜೆಪಿ ವತಿಯಿಂದ ಬಿರ್ಸಾ ಮುಂಡಾ ಜಯಂತಿ ಆಯೋಜನೆ ಮಾಡಲಾಗಿದ್ದು ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ಮುಖಂಡರಾದ ಬಂಗಾರು ಹನುಮಂತು ಸೇರಿ ಮುಖಂಡರು ಭಾಗಿಯಾಗಿದ್ದರು. ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಮೆರವಣಿಗೆಗೆ ಚಾಲನೆ ಕೊಟ್ಟು ಹೆಜ್ಜೆ ಹಾಕಿದ ಅಶೋಕ್, ಜಿಲ್ಲಾಡಳಿತ ಭವನ ಮುಂಭಾಗ ಗೊರವರ ಕುಣಿತಕ್ಕೆ ಹೆಜ್ಜೆ ಹಾಕಿದರು. ಢಮರುಗ ಹಿಡಿದು ನೃತ್ಯ ಮಾಡಿದ ಅಶೋಕ್ ಅವರಿಗೆ ಬಿಜೆಪಿ ಮುಖಂಡರಾದ ಬಂಗಾರು ಹನುಮಂತು, ಸಿ‌.ಎಸ್.ನಿರಂಜನಕುಮಾರ್, ರಾಮಚಂದ್ರು ಸಾಥ್ ಕೊಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ