ಪುದುಚೇರಿ ಬಿಜೆಪಿಯಿಂದ ಸುರಾನಾಗೆ ಸನ್ಮಾನ

By Kannadaprabha NewsFirst Published Jul 7, 2021, 9:21 AM IST
Highlights
  • ದಕ್ಷಿಣ ಭಾರತದಲ್ಲಿ ಎರಡನೇ ಬಿಜೆಪಿ ಸರ್ಕಾರ ರಚನೆ
  • ಪುದುಚೇರಿ ಉಸ್ತುವಾರಿ ನಿರ್ಮಲ್‌ಕುಮಾರ್‌ ಸುರಾನಾಗೆ ಸನ್ಮಾನ
  • ಪುದುಚೇರಿ ಸಚಿವರಾದ ಎ.ನಮಃಶಿವಾಯ, ಸಾಯಿ ಶ್ರವಣಕುಮಾರ್‌ ಸೇರಿ 8 ಜನ ಬಿಜೆಪಿ ಶಾಸಕರಿಂದ ಕೃತಜ್ಞತೆ

 ಬೆಂಗಳೂರು (ಜು.07):  ದಕ್ಷಿಣ ಭಾರತದಲ್ಲಿ ಎರಡನೇ ಬಿಜೆಪಿ ಸರ್ಕಾರ ರಚನೆ ಆಗಿರುವುದು ಅತ್ಯಂತ ಸಂತಸದ ವಿಚಾರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆದ ಪಕ್ಷದ ಪುದುಚೇರಿ ಉಸ್ತುವಾರಿ ನಿರ್ಮಲ್‌ಕುಮಾರ್‌ ಸುರಾನಾ ಸಂತಸ ವ್ಯಕ್ತಪಡಿಸಿದ್ದಾರೆ.

ಪುದುಚೇರಿ ಸಚಿವರಾದ ಎ.ನಮಃಶಿವಾಯ, ಸಾಯಿ ಶ್ರವಣಕುಮಾರ್‌ ಸೇರಿ 8 ಜನ ಬಿಜೆಪಿ ಶಾಸಕರು ಮಂಗಳವಾರ ಬೆಂಗಳೂರಿಗೆ ಆಗಮಿಸಿ ಪಕ್ಷದ ಕಚೇರಿಗೆ ಭೇಟಿ ನೀಡಿ ಸುರಾನಾ ಅವರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.

ಪುದುಚೇರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಂಗಸ್ವಾಮಿಗೆ ಕೊರೋನಾ!

ಬಳಿಕ ಮಾತನಾಡಿದ ಸುರಾನಾ, ಪುದುಚೇರಿಯಲ್ಲಿ ಬಿಜೆಪಿ ಶೂನ್ಯದಿಂದ ಆರಂಭಿಸಿ, ಎನ್‌ಡಿಎ ಅಧಿಕಾರ ಪಡೆಯಲು ಅಲ್ಲಿನ ಅಧ್ಯಕ್ಷ ಸ್ವಾಮಿನಾಥನ್‌, ಕಾರ್ಯಕರ್ತರು, ಮುಖಂಡರು ಶ್ರಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರು ಪಕ್ಷದ ಗೆಲುವಿಗೆ ವಿಶೇಷ ಮಾರ್ಗದರ್ಶನ ನೀಡಿದರು. ಎಲ್ಲರ ಶ್ರಮದಿಂದಾಗಿ ಬಿಜೆಪಿ ಮಿತ್ರ ಪಕ್ಷದ ರಂಗಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹೇಳಿದರು.

ಪುದುಚೇರಿಯಲ್ಲಿ ಬಿಜೆಪಿಗೆ ಅಧಿಕಾರ ಸಿಗುವಂತೆ ಮಾಡಿದ್ದು ಕರ್ನಾಟಕದ ಜೋಡೆತ್ತು!

ಪುದುಚೇರಿಯ ಸಚಿವರನ್ನು ಆಹ್ವಾನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು 40 ನಿಮಿಷ ಕಾಲ ಅವರ ಜೊತೆ ಸಭೆ ನಡೆಸಿರುವುದು ಅತ್ಯಂತ ವಿಶೇಷವಾಗಿದೆ. ಪುದುಚೇರಿಯನ್ನು ಅತ್ಯುತ್ತಮ ರಾಜ್ಯ ಮಾಡಲು ಪ್ರಧಾನಿಯವರು ಮುಂದಾಗಿದ್ದಾರೆ. ಬಿಸಿನೆಸ್‌, ಎಜುಕೇಷನ್‌, ಸ್ಪಿರಿಚುವಲ್‌, ಟೂರಿಸ್ಟ್‌ ಸೇರಿ ದಿ ಬೆಸ್ಟ್‌ ಪುದುಚೇರಿ ಮಾಡುವುದಾಗಿ ಪ್ರಧಾನಿ ಅವರು ತಿಳಿಸಿದ್ದಾರೆ ಎಂದರು.

ಕರ್ನಾಟಕದ 40-50 ಜನರು ಮುಖಂಡರು ಮತ್ತು ಕಾರ್ಯಕರ್ತರು ಪುದುಚೇರಿಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಗೆಲುವಿಗೆ ಶ್ರಮಿಸಿದ ಇಲ್ಲಿನ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಶಾಸಕರು, ಸಚಿವರು ರಾಜ್ಯಕ್ಕೆ ಭೇಟಿ ಕೊಟ್ಟಿದ್ದಾರೆ ಎಂದು ಸುರಾನಾ ತಿಳಿಸಿದರು.

click me!