ಬಿಎಸ್‌ವೈ ಮನೆಯಲ್ಲೇ ನಡೆದಿದೆ ಪಿಎಸ್‌ಐ ನೇಮಕಾತಿ ಹಗರಣ: ಸಿದ್ದರಾಮಯ್ಯ ಗಂಭೀರ ಆರೋಪ

By Kannadaprabha News  |  First Published Mar 15, 2023, 4:15 PM IST

ಪೊಲೀಸ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆಯಲ್ಲೇ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.


ಬ್ಯಾಡಗಿ (ಮಾ.15) : ಪೊಲೀಸ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆಯಲ್ಲೇ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಗಂಭೀರ ಆರೋಪ ಮಾಡಿದರು. . 2500 ಕೋಟಿ ಕೊಟ್ಟರೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಬಹುದು ಎಂದು ಸ್ವಪಕ್ಷದ ಶಾಸಕರೇ ಹೇಳಿದ್ದಾರೆ. ಹೀಗಾಗಿ ಇವರ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮತ್ತೇನಿದೆ ಎಂದು ಇದೇ ವೇಳೆ ಪ್ರಶ್ನಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಪ್ರಜಾಧ್ವನಿ(Congress Prajadhwaniyatre) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಪರೇಶನ್‌ ಕಮಲಕ್ಕೆ ಎಲ್ಲಿಂದ ಹಣ ಬಂತು? ಲೂಟಿ ಹೊಡೆದ ಲಂಚದ ಹಣದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಉತ್ತಮ ಆಡಳಿತ ಕೊಡಲು ಸಾಧ್ಯವಿಲ್ಲ ಎಂದರು.

Tap to resize

Latest Videos

undefined

ಪಿಎ​ಸ್‌ಐ ಹಗ​ರ​ಣ​ದಿಂದ ಪೊಲೀಸ್‌ ಹುದ್ದೆ​ಗಳು ಭರ್ತಿ​ಯಾ​ಗಿ​ಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಬಿಜೆಪಿ ಸರ್ಕಾರ(BJP Govt) ನಾಚಿಕೆ, ಮಾನ, ಮಾರಾರ‍ಯದೆ ಈ ಮೂರು ಬಿಟ್ಟಿದೆ. ಶಾಸಕರನ್ನು ಖರೀದಿಸಿ ಹಿಂಬಾಗಿಲಿನಿಂದ ಆಧಿಕಾರಕ್ಕೆ ಬಂದಿದ್ದು ಇದೊಂದು ಅನೈತಿಕ ಸರ್ಕಾರವಾಗಿದೆ ಎಂದು ಕಿಡಿಕಾರಿದರು.

ಕ್ಷೇತ್ರದ ಟಿಕೆಟ್‌ ಬಯಸಿ 8 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಎಲ್ಲ ಘಟಕದ ಅಧ್ಯಕ್ಷರು ಹಾಗೂ ಕ್ಷೇತ್ರದ ಜನರ ಅಭಿಪ್ರಾಯ ಸರ್ವೇ ವರದಿ ನೋಡಿಯೇ ಹೈಕಮಾಂಡ್‌ ಟಿಕೆಟ್‌ ನೀಡಲಿದೆ. ಟಿಕೆಟ್‌ ಯಾರಿಗೇ ಸಿಕ್ಕರೂ ಸಹ ಪಕ್ಷವನ್ನು ಗೆಲ್ಲಿಸುವಂತಹ ಕೆಲಸದಲ್ಲಿ ಕಾರ್ಯಕರ್ತರು ಸಿದ್ಧರಾಗಬೇಕು ಎಂದರು.

ಮಾಜಿ ಸಚಿವ ಸತೀಶ್‌ ಜಾರಕಿಹೊಳಿ(Satish Jarkiholi) ಮಾತನಾಡಿ, ಸಿದ್ದರಾಮಯ್ಯ ಅವರ ಅಧಿಕಾರದ ಅವಧಿ ರಾಜ್ಯದಲ್ಲಿ ಸುವರ್ಣಯುಗ ಕಂಡಿದ್ದೇವೆ, ಎಲ್ಲ ವರ್ಗದ ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇವೆ ಎಂದು ತಿಳಿಸಿದರು.

ಮಾಜಿ ಸಚಿವ ಜಮೀರ್‌ ಅಹ್ಮದ್‌ಖಾನ್‌ ಮಾತನಾಡಿ, ನಾನು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಬ್ಯಾಡಗಿ ಮತಕ್ಷೇತ್ರಕ್ಕೆ ಬಂದಾಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳನ್ನೇ ಉದ್ಘಾಟಿಸಲು ಕರೆ ತರುತ್ತೀದ್ದರು ಎಂದು ಲೇವಡಿ ಮಾಡಿದರು.

PSI Recruitment Scam: ಎಸ್‌ಐ ಕೇಸ್‌ ವಿಚಾರಣೆಯಿಂದ ಸಿಜೆ ಪೀಠ ಹಿಂದಕ್ಕೆ

ಆಕಾಂಕ್ಷಿಗಳ ನಿಲ್ಲದ ಬಣ ರಾಜಕಾರಣ

ಕಾಂಗ್ರೆಸ್‌ ನಾಯಕರು ಆಗಮಿಸುವ ಮುನ್ನವೇ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾದ ಬಸವರಾಜ ಶಿವಣ್ಣನವರ ಮತ್ತು ಎಸ್‌.ಆರ್‌. ಪಾಟೀಲ ಅಭಿಮಾನಿಗಳ ನಡುವಿನ ಬಣ ಬಡಿದಾಟ ಮತ್ತೊಮ್ಮ ಅನಾವರಣಗೊಂಡಿತು. ಮುಖ್ಯವೇದಿಕೆ ಬಲಭಾಗದಲ್ಲೇ ಇಬ್ಬರನ್ನು ಪ್ರತ್ಯೇಕ ಮೆರವಣಿಗೆ ಮಾಡಿದ್ದಲ್ಲದೇ ತಮ್ಮ-ತಮ್ಮ ನಾಯಕರಿಗೆ ಟಿಕೆಟ್‌ ಕೊಡಬೇಕೆಂಬ ಭಿತ್ತಿಪತ್ರ ಪ್ರದರ್ಶಿಸಿದರು.

click me!