75 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ: ವಿಜಯೇಂದ್ರ

Published : Mar 15, 2023, 11:08 AM ISTUpdated : Mar 15, 2023, 11:10 AM IST
75 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ: ವಿಜಯೇಂದ್ರ

ಸಾರಾಂಶ

ಭಾರತವನ್ನು ಸಮೃದ್ಧ ಶಕ್ತಿಶಾಲಿ ರಾಷ್ಟ್ರವನ್ನಾಗಿ ಪರಿವರ್ತನೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಇಡೀ ವಿಶ್ವನಾಯಕರು ಹಾಗೂ ವಿಶ್ವದ ಜನತೆ ಮೆಚ್ಚಿ ವಿಶ್ವಕ್ಕೆ ಮಾರ್ಗದರ್ಶನ ನೀಡಬೇಕೆಂಬ ಹೆಬ್ಬಯಕೆಯಲ್ಲಿದ್ದಾರೆ ಎಂದ ಬಿ.ವೈ.ವಿಜಯೇಂದ್ರ.   

ಯಮಕನಮರಡಿ(ಮಾ.15):  75 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್‌ ಪಕ್ಷದಿಂದ ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ. ಬಡವರಿಗೆ ರೈತರಿಗೆ ಶಕ್ತಿ ತುಂಬುವ ಕೆಲಸ ಬಿಜೆಪಿ ಮಾಡಿದೆ ಎಂದು ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸಮೀಪದ ಶಹಾಬಂದರ ಗ್ರಾಮದ ಬಳಿ ಸೋಮವಾರ ಆಯೊಜಿಸಿದ್ದ ಬಿಜೆಪಿ ಎಸ್ಟಿಮೋರ್ಚಾದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಕಾಶ್ಮೀರದಲ್ಲಿ 370 ವಿಧೆಯಕವನ್ನು ತೆಗೆದು ಹಾಕಿದರೇ ನಾವು ಅಲ್ಪಸಂಖ್ಯಾಂತರ ಮತಗಳಿಂದ ವಂಚಿತರಾಗುತ್ತೇವೆಂದು 370ನೇ ವಿಧೇಯಕವನ್ನು ತೆಗೆದು ಹಾಕಲಿಲ್ಲ. ಕಾಂಗ್ರೆಸ್‌ ಪಕ್ಷದ ಪಾಪದ ಕೂಸಾದ 370ನೇ ವಿಧೆಯಕವನ್ನು ನರೇಂದ್ರ ಮೋದಿಯವರು ತೆಗೆದು ಹಾಕಿ, ಅಲ್ಲಿಯ ಉಗ್ರರ ಚಟುವಟಿಕೆಗಳನ್ನು ನಿಯಂತ್ರಿಸಿದ್ದರಿಂದ ಕಾಶ್ಮೀರದಲ್ಲಿ ಉತ್ತಮ ಆಡಳಿತ ನಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಮೋದಿ, ಶಾ ಭೇಟಿ ನೀಡಿದ ಬೆನ್ನಲ್ಲೇ 20ರಂದು ಬೆಳಗಾವಿಗೆ ರಾಹುಲ್‌ ಗಾಂಧಿ

ಭಾರತವನ್ನು ಸಮೃದ್ಧ ಶಕ್ತಿಶಾಲಿ ರಾಷ್ಟ್ರವನ್ನಾಗಿ ಪರಿವರ್ತನೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಇಡೀ ವಿಶ್ವನಾಯಕರು ಹಾಗೂ ವಿಶ್ವದ ಜನತೆ ಮೆಚ್ಚಿ ವಿಶ್ವಕ್ಕೆ ಮಾರ್ಗದರ್ಶನ ನೀಡಬೇಕೆಂಬ ಹೆಬ್ಬಯಕೆಯಲ್ಲಿದ್ದಾರೆ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಪರಿವರ್ತನೆ ಜಗದ ನಿಯಮವಾಗಿದ್ದು, ಕೆಲವರು ಬದಲಾವಣೆಯಾಗುವುದಿಲ್ಲ ಎಂದು ಭಾವಿಸಿಕೊಂಡು ಕ್ಷೇತ್ರದಲ್ಲಿ ತಾವೇ ಶಾಶ್ವತ ಎಂದು ತಿಳಿದಿದ್ದು ತಪ್ಪು. ಯಮಕನಮರಡಿ ಕ್ಷೇತ್ರದಲ್ಲಿ ಡಬ್ಬಲ್‌ ಇಂಜಿನ್‌ ಸರ್ಕಾರಗಳ ಯೋಜನೆಗಳಿಂದ ಜನರು ವಂಚಿತರಾಗಿದ್ದಾರೆ. ಇದೇ ರೀತಿ ಸಂಘಟನಾತ್ಮಕ ಕಾರ್ಯದ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುವಂತೆ ಕರೆ ನೀಡಿದರು.

ಓಲೈಕೆಗೆ ಮುಂದಾದ ಸರ್ಕಾರ: ಬೆಳಗಾವಿಯಲ್ಲಿ 15 ಅಡಿ ಎತ್ತರದ ಬಸವೇಶ್ವರರ ಕಂಚಿನ ಪ್ರತಿಮೆಗೆ ಸಿದ್ಧತೆ

ಸೂರಪುರದ ಶಾಸಕ ರಾಜುಗೌಡ ನಾಯಿಕ ಮಾತನಾಡಿ, ಮಹರ್ಷಿ ವಾಲ್ಮೀಕಿಯವರನ್ನು ಗೌರವ ನೀಡಿದ್ದು, ಬಿಜೆಪಿಗರು ಮಾತ್ರ ಶೇ.3 ರಿಂದ ಶೇ.7ಕ್ಕೆ ಎಸ್ಟಿಮೀಸಲಾತಿ ಏರಿಸಿದ್ದು ಬಿಜೆಪಿ ಸರ್ಕಾರದ ಸಾಧನೆ ವಾಲ್ಮೀಕಿ ಜನರ ಅಭಿವೃದ್ಧಿಗಾಗಿ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಶಾಸಕರೆಂದರೆ ಅರಸರಲ್ಲ ಜನರ ಜೀತದಾಳಾಗಿ ಕೆಲಸ ಮಾಡುವುದೇ ಶಾಸಕರ ಕಾರ್ಯ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶಶಿಕಾಂತ ನಾಯಿಕ, ಚಿಕ್ಕೋಡಿ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಮಾತನಾಡಿದರು. ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ, ಮುಖಂಡರಾದ ರವಿಂದ್ರ ಹಂಜಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್ಟಿಮೋರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ, ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಸಿದ್ದಲಿಂಗ ಸಿದ್ದಗೌಡರ, ಶ್ರೀಶೈಲ ಯಮಕನಮರಡಿ, ಅಪ್ಪಯ್ಯ ಜಾಜರಿ, ಉಜ್ವಲಾ ಬಡವನಾಚೆ, ಮಂಜುನಾಥ ಒಲೇಕಾರ, ಶೇಖರಗೌಡಾ ಮೊದಗಿ, ಈರಣ್ಣ ಗುರವ, ಅಯೂಬಖಾನ್‌ ಓಂಟಿಗಾರ, ಶಿವಪ್ಪ ಡೊನಪಾಟೀಲ, ಶಶಿಕಾಂತ ಮಠಪತಿ, ಬಸವರಾಜ ಪೂಜೇರಿ, ಬಸವರಾಜ ಬರಗಾಲಿ, ಯಲ್ಲಪ್ಪ ಗಡಕರಿ, ಪ್ರವೀಣ ಕೆಂಪವಾಡ ಸ್ವಾಗತಿಸಿದರು. ಗೌರಿ ಮಟ್ಟಿ ನಿರೂಪಿಸಿದರು.

ರಾಜ್ಯದಲ್ಲಿ ಬಿಜೆಪಿ ಅಂತಂತ್ರದಲ್ಲಿದ್ದಾಗ ಗೋಕಾಕ ಶಾಸಕ ರಮೇಶ ಜಾರಕಿಹೊಳಿಯವರು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಅಂತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?