ಸಚಿವ ಎಂಟಿಬಿ- ಶಾಸಕ ಶರತ್‌ ಬಚ್ಚೇಗೌಡರ ನಡುವೆ ಪ್ರೋಟೋಕಾಲ್‌ ಜಟಾಪಟಿ

By Kannadaprabha News  |  First Published Nov 22, 2022, 10:07 PM IST
  • ಸಚಿವ ಎಂಟಿಬಿ- ಶಾಸಕರ ಪ್ರೋಟೋಕಾಲ್‌ ಜಟಾಪಟಿ
  • ನೂರು ಹಾಸಿಗೆಗಳ ‘ತಾಯಿ ಮಗು ಆಸ್ಪತ್ರೆ’ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ
  • ಜಿಲ್ಲಾ ಸಚಿವ ಸಮ್ಮುಖದಲ್ಲೇ ವಾಕ್ಸಮರ

ಹೊಸಕೋಟೆ (ನ.22): ಹೊಸಕೋಟೆಯಲ್ಲಿ ಹಲವಾರು ಬಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ವೇಳೆ ಸಚಿವ ಎಂಟಿಬಿ ನಾಗರಾಜ್‌ ಹಾಗೂ ಶಾಸಕ ಶರತ್‌ ಬಚ್ಚೇಗೌಡರ ನಡುವಿನ ಪ್ರೋಟೋಕಾಲ್‌ ವಾಕ್ಸಮರ ಮಂಗಳವಾರ ತಾಯಿ-ಮಗು ಆಸ್ಪತ್ರೆ ಕಾಮಗಾರಿ ಭೂಮಿಪೂಜೆ ವೇಳೆಯೂ ಮುಂದುವರಿಯಿತು.

ಕೊಳತೂರು ಬಳಿ ನಡೆದ ತಾಯಿ-ಮಗು ಆಸ್ಪತ್ರೆ ಭೂಮಿಪೂಜೆ ವೇಳೆ ಜಡಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸದಸ್ಯರಿಗೆ ವೇದಿಕೆ ಮೇಲೆ ಅವಕಾಶ ಕೊಡದೆ, ನಗರಸಭೆ ಜನಪ್ರತಿನಿಧಿ​ಗಳಿಗೆ ಅವಕಾಶ ಕೊಟ್ಟಿದ್ದೀರಿ. ನಗರಸಭೆ ಸದಸ್ಯರಿಗೆ ಜಡಿಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಕೆ ಅವಕಾಶ ಕೊಟ್ಟಿದ್ದೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಅವರ ಸಮ್ಮುಖದಲ್ಲೇ ಪರಸ್ಪರ ವಾಕ್ಸಮರಕ್ಕೆ ಎಂಟಿಬಿ ನಾಗರಾಜ್‌ ಹಾಗೂ ಶರತ್‌ ಬಚ್ಚೇಗೌಡ ಇಳಿದರು.

Latest Videos

undefined

'ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ'

ಈ ಸಂದಭದಲ್ಲಿ ಅಲ್ಲಿ ನೆರೆದಿದ್ದ ಉಭಯ ಬಣಗಳ ಕಾರ್ಯಕರ್ತ ಬಂಬಲಿಗರು ಕೂಡ ಜೋರಾಗಿ ಹಾರಾಟ-ಕೂಗಾಟ, ನೂಕು ನುಗ್ಗುಲು ಉಂಟು ಮಾಡುವ ಮೂಲಕ ಕೆಲಕಾಲ ಸಾಕಷ್ಟುಗೊಂದಲ ಸೃಷ್ಟಿಸಿ, ಬಿಗುವಿನ ವಾತಾವರಣ ನಿರ್ಮಾಣವಾಯಿತು. ಸತತ ಒಂದು ಗಂಟೆ ಕಾಲ ಇಬ್ಬರ ನಡುವೆ ಜೋರಾಗಿಯೇ ವಾಕ್ಸಮರ ನಡೆಯಿತು.

ಈ ವೇಳೆ ಅಲ್ಲಿಯೇ ಕರ್ತವ್ಯನಿರತರಾಗಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಉಮಾಶಂಕರ್‌, ಪೊಲೀಸ್‌ ಸಿಬ್ಬಂದಿ ವರ್ಗ ಅಲ್ಲಿದ್ದ ಕಾರ್ಯಕರ್ತರನ್ನು ಚದುರಿಸಿ, ವೇದಿಕೆ ಮೇಲೆ ಸಚಿವರು, ಶಾಸಕರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಅಧಿ​ಕಾರಿಗಳನ್ನು ಹೊರತುಪಡಿಸಿ ಎಲ್ಲಾ ಕಾರ್ಯಕರ್ತರನ್ನು ಕೆಳಗಿಸಿ ಕಾರ್ಯಕ್ರಮ ನಡೆಯಲು ಅನುವು ಮಾಡಿಕೊಟ್ಟರು. ಆ ಬಳಿಕ ವೇದಿಕೆ ಕಾರ್ಯಕ್ರಮ ಮುಂದುವರಿಯಿತು.

‘ತಾಯಿ ಮಗು ಆಸ್ಪತ್ರೆ’ ಕಾಮಗಾರಿ ಭೂಮಿಪೂಜೆ

ಭೂಮಿಪೂಜೆ ಬಳಿಕ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಕೊಳತೂರು ಗ್ರಾಮದ ಬಳಿ ‘ತಾಯಿ ಮಗು ಆಸ್ಪತ್ರೆ’ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಯಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ 4 ಎಕರೆ ಪ್ರದೇಶದಲ್ಲಿ 39 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸುತ್ತಿದೆ. ಆಸ್ಪತ್ರೆಯಲ್ಲಿ ಸುರಕ್ಷಿತ ಹೆರಿಗೆ, ನವಜಾತ ಶಿಶು ಆರೈಕೆ ಘಟಕ, ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿಗಳು ಇರಲಿವೆ. 18 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉಪಯೋಗಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ 100 ನಮ್ಮ ಕ್ಲಿನಿಕ್‌:

ಆರೋಗ್ಯ ಸೇವೆಯಲ್ಲಿ ನಾಗರಿಕರಿಗೆ ಮತ್ತಷ್ಟುಹತ್ತಿರವಾಗುವ ದೃಷ್ಟಿಯಿಂದ ರಾಜ್ಯದಲ್ಲಿ 100, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 9 ನಮ್ಮ ಕ್ಲಿನಿಕ್‌ ತೆರೆಯುವ ಚಿಂತನೆ ಇದೆ. ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆಯಾ ತಾಲೂಕು ಕೇಂದ್ರಗಳಲ್ಲಿ ಶಾಸಕರು, ಉಸ್ತುವಾರಿ ಮಂತ್ರಿಗಳು ಚಾಲನೆ ನೀಡಲಿದ್ದಾರೆ. ಇದರಿಂದ ದಿನದ 24 ಗಂಟೆಗಳ ಕಾಲ ಆರೋಗ್ಯ ಸೇವೆ ಲಭ್ಯವಾಗಲಿದೆ ಎಂದರು.

ಸಚಿವ ಎಂಟಿಬಿ ನಾಗರಾಜ್‌ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದ ನಂತರ ಅಭಿವೃದ್ಧಿಯಲ್ಲಿ ಕ್ರಾಂತಿ ಉಂಟು ಮಾಡಿದ್ದಾರೆ. ಪ್ರಮುಖವಾಗಿ ಆರೋಗ್ಯ ಶಿಕ್ಷಣದ ಅಭಿವೃದ್ಧಿಗೆ ದಿಟ್ಟಹೆಜ್ಜೆ ಇಡಲಾಗಿದೆ. ಆಯುಷ್ಮಾನ್‌ ಭಾರತ್‌, ಆರೋಗ್ಯ ಕಾರ್ಡ್‌ ವಿತರಣೆ ಮಾಡುವ ಮೂಲಕ 5 ಲಕ್ಷದವರೆಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಉಪಚುನಾವಣೆಯಲ್ಲಿ ನಾನು ಸೋಲುಂಡರೂ ವಿಧಾನಪರಿಷತ್‌ ಸದಸ್ಯನಾಗಿ ಸಚಿವನಾಗಿದ್ದೇನೆ. ಆದರೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟುಹಿನ್ನಡೆಯಾಗಿದೆ ಎಂಬ ಚಿಂತೆ ನನ್ನನ್ನು ಸದಾ ಕಾಡುತ್ತಿದೆ. ಆದರೂ ಕೂಡ ನಾನು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮೆಟ್ರೋ ವಿಸ್ತರಣೆ ಹಾಗೂ ಕಾವೇರಿ ನೀರು ತರುವ ವಿಚಾರವಾಗಿ ನಿರಂತರ ಪ್ರಯತ್ನ ಮಾಡುತ್ತಿದ್ದು, ಯೋಜನೆ ಸಾಕಾರಗೊಳಿಸುತ್ತೇನೆ ಎಂದು ಹೇಳಿದರು.

ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, ತಾಯಿ ಮಗು ಆಸ್ಪತ್ರೆ ಬಗ್ಗೆ ನಾನು ಸಚಿವ ಸುಧಾಕರ್‌ ಅವರಿಗೆ ಮನವಿ ಸಲ್ಲಿಸಿದ್ದೆ. ಅದರಂತೆ ಅವರು ನನಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಮುಗಬಾಳ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಟ್ರಾಮ್‌ ಸೆಂಟರ್‌ ಆಗಿ ಪರಿವರ್ತನೆ ಮಾಡಿಕೊಡಲು ಸಚಿವ ಸುಧಾಕರ್‌ ಅವರಿಗೆ ಮನವಿ ಸಲ್ಲಿಸಿದರು.

ಅ​ಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ನನ್ನದಲ್ಲ: ಎಂಟಿಬಿ ನಾಗರಾಜ್‌

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವಣಪ್ಪ, ಜಿಲ್ಲಾ ಆರೋಗ್ಯಾ​ಧಿಕಾರಿ ಡಾ.ಬಿ.ಕೆ.ವಿಜೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಲ್ಲವಿಅರುಣ್‌, ನಗರಸಭೆ ಅಧ್ಯಕ್ಷ ಡಿ.ಕೆ.ನಾಗರಾಜ್‌ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

click me!