ಕ್ಷೇತ್ರದಲ್ಲಿ ಇದೇ ಜೋಷ್ ಇದ್ದರೆ ಹಿರಿಯೂರು ಶಾಸಕಿ ಪೂರ್ಣಿಮಾ ಗೆಲ್ಲುತ್ತಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹಿರಿಯೂರು ಪಟ್ಟಣದ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಹೇಳಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ನ.22): ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಬಿಜೆಪಿ ವತಿಯಿಂದ ಜನ ಸಂಕಲ್ಪ ಸಮಾವೇಶ ನಡೆಯಿತು. ಸಿಎಂ ಆಗಮಿಸುತ್ತಿದ್ದಂತೆ ಘೋಷಣೆ ಕೂಗಿದ ಜನರಲ್ಲಿ ಕಿವಿಮಾತು ಹೇಳಿದರು. ಕ್ಷೇತ್ರದಲ್ಲಿ ಇದೇ ಜೋಷ್ ಇದ್ದರೆ ಹಿರಿಯೂರು ಶಾಸಕಿ ಪೂರ್ಣಿಮಾ ಗೆಲ್ಲುತ್ತಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹಿರಿಯೂರು ಪಟ್ಟಣದ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಸಮಾವೇಶದಲ್ಲಿ ಹೇಳಿದರು. ಜನ ಸಂಕಲ್ಪ ಯಾತ್ರೆ ವಿಜಯ ಸಂಕಲ್ಪ ಯಾತ್ರೆ ಆಗಲಿದೆ. 2007-08ರಲ್ಲಿ ಜಿಲ್ಲೆಯಲ್ಲಿನ ನೀರಿಗಾಗಿ ಹೋರಾಟ ನಡೆದಿತ್ತು. 580 ದಿನಕಾಲ ರೈತರು ನಿರಂತರ ಧರಣಿ ನಡೆಸಿದ್ದರು. ಹಿಂದಿನ ಸರ್ಕಾರಗಳು ನಿರ್ಲಕ್ಷ ತೋರಿದ್ದರು. ನಾನು ನೀರಾವರಿ ಸಚಿವನಾಗಿದ್ದು ಸ್ಥಳಕ್ಕೆ ಬಂದಿದ್ದೆನು. ಇಲ್ಲಿನ ಜನರ ಕಷ್ಟವನ್ನು ಕಣ್ಣಾರೆ ಕಂಡಿದ್ದೆನೆ. ನಂಜಾವಧೂತ ಶ್ರೀ ನೇತೃತ್ವ ವಹಿಸಿ ಧರಣಿಯಲ್ಲಿದ್ದರು. ಭದ್ರಾ ಮೇಲ್ದಂಡೆ ಯೋಜನೆ ಕನಸು ನನಸಾಗಿಸಿ. ಎಸ್ ನಿಜಲಿಂಗಪ್ಪ ಅವರ ಕಾಲದಿಂದಲೂ ನೆನಗುದಿಗೆ ಎಂದಿದ್ದರು. ಆಗಿನ ಸಿಎಂ ಬಿಎಸ್ ವೈ ಬಳಿ ಚರ್ಚಿಸಿ ಯೋಜನೆ ಜಾರಿಗೆ ಕ್ರಮ. ಹಿರಿಯೂರಿಗೆ ಬಂದು ಹೋದ ಹದಿನೈದು ದಿನದಲ್ಲಿ ಆದೇಶಿಸಿದ್ದೆನು ಎಂದರು.
undefined
ಬಡವರ ಪರ ನಾಯಕತ್ವದ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷ ಐವತ್ತಕ್ಕೂ ಹೆಚ್ಚು ವರ್ಷ ಆಳ್ವಿಕೆ ನಡೆಸಿದೆ. ವಾಣಿ ವಿಲಾಸ ಸಾಗರ ಡ್ಯಾಂಗೆ ಕಾಯಕಲ್ಪ ನೀಡುವ ಕೆಲಸ ಮಾಡಿಲ್ಲ. ಜನರ ಬದುಕು ಹಸನು ಮಾಡುವುದು ಬಿಜೆಪಿ ಬದ್ಧತೆ. ಆರ್ಥಿಕ, ಆಹಾರ ಭದ್ರತೆ ನೀಡುವುದು ಸರ್ಕಾರದ ಕರ್ತವ್ಯ. ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಆಗಲಿದೆ. ರಾಜ್ಯದಲ್ಲಿ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆ. ಬರದನಾಡು ಹಸಿರಿನ ಬೀಡು ಆಗಲಿದೆ. ವಾಣಿ ವಿಲಾಸ ಸಾಗರ ಡ್ಯಾಂ ನಿರ್ವಹಣೆಗೆ 20ಕೋಟಿ ಮಂಜೂರು. ವಾಣಿ ವಿಲಾಸ ಕಾಲುವೆಗಳು ಮುಚ್ಚಿ ಹೋಗಿವೆ. 738ಕೋಟಿ ವೆಚ್ಚದಲ್ಲಿ ಕಾಲುವೆ ನವೀಕರಣ ಯೋಜನೆ. ಪ್ರವಾಸಿಗರ ಆಕರ್ಷಣೆಗಾಗಿ ಸುಂದರ ಉದ್ಯಾನ ನಿರ್ಮಾಣ ಮಾಡಲಾಗುವುದು.
ಖಾಯಂ ಆಗಿ ವಾಣಿವಿಲಾಸ ಸಾಗರ ಡ್ಯಾಂಗೆ 5ಟಿಎಂಸಿ ನೀಡುತ್ತೇವೆ. ಈಗಾಗಲೇ ಮಾಜಿ ಸಿಎಂ ಬಿಎಸ್ ವೈ ಹೇಳಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಭದ್ರಾ ಮೇಲ್ದಂಡೆ ಯೋಜನೆ ಸುಮಾರು ಐನೂರು ಕೋಟಿಗೂ ಹೆಚ್ಚು ಹಣದ ಅಭಿವೃದ್ಧಿ ಕಾಮಗಾರಿ ಕ್ಷೇತ್ರದಲ್ಲಿ ಆಗಿವೆ. ಧರ್ಮಪುರ ಕೆರೆಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿದ್ದೇವೆ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ನೀರಾವರಿ ಸವಲತ್ತು ಯೋಜನೆ. ನೀರಾವರಿಯಿಂದ ಜನಜೀವನ ಸಮೃದ್ಧಿ ಆಗಲಿದೆ. ರೈತನ ಬೆವರಿಗೆ ಬೆಲೆ ಸಿಗುವ ಕೆಲಸ ಆಗುತ್ತದೆ. ಬಂಗಾರ ಬೆಳೆಯ ನಾಡು ಆಗಬೇಕೆಂಬುದು ನಮ್ಮ ಸಂಕಲ್ಪ ಎಂದರು.
ಚಳ್ಳಕೆರೆಯಲ್ಲಿರುವ ಐಐಎಸ್ಸಿ, ಇಸ್ರೋ ಸಂಸ್ಥೆಯಿಂದ ದೊಡ್ಡ ಬೆಳವಣಿಗೆ. ಚಿತ್ರದುರ್ಗದಲ್ಲಿ 1ಸಾವಿರ ಎಕರೆಯಲ್ಲಿ ಇಂಡಸ್ಟ್ರಿಯಲ್ ಟೌನ್ ಶಿಪ್ ಮಾಡಲಾಗುವುದು. ಬರುವ ಜನವರಿ ಸರ್ಕಾರದಿಂದ ಚಾಲನೆ ನೀಡಲಿದ್ದೇವೆ. ದಾವಣಗೆರೆ -ಚಿತ್ರದುರ್ಗ -ತುಮಕೂರು ನೇರ ರೈಲು ಮಾರ್ಗ ತ್ವರಿತಗತಿಯಲ್ಲಿ ಚಾಲನೆ ನೀಡಲಾಗುವುದು. ಜನವರಿಯಲ್ಲಿ ಅಡಿಗಲ್ಲು ಹಾಕಿ ಚಾಲನೆ ನೀಡಲಿದ್ದೇವೆ ಎಂದು ಸಿಎಂ ತಿಳಿಸಿದರು. ಪೂರ್ಣಿಮಾ ಶ್ರೀನಿವಾಸ್ ಭಾಷಣದಲ್ಲಿ ತಂದೆ, ಪತಿಯನ್ನು ನೆನಪಿಸಿದರು. ಪೂರ್ಣಿಮಾ ಮಾತು ಹಿಂದು ಸಂಸ್ಕೃತಿ ತೋರುತ್ತದೆ.
ಬಿಜೆಪಿ ಸರ್ಕಾರದಿಂದ ಆರೋಗ್ಯ ಕ್ರಾಂತಿ ಮಾಡುತ್ತಿದ್ದೇವೆ. ಸಂಕಷ್ಟದಲ್ಲಿ ಇರುವವರಿಗೆ ನಮ್ಮ ಸರ್ಕಾರದಿಂದ ಸಹಕಾರ. ಐದು ವರ್ಷಕಾಲ ಕಾಂಗ್ರೆಸ್ ಸರ್ಕಾರ ನೋಡಿದ್ದೇವೆ. ಭಾಗ್ಯ ಭಾಗ್ಯ ಭಾಗ್ಯ ಎಂದು ಹೇಳಿಕೊಂಡರು. ಭಾಗ್ಯ ಯೋಜನೆ ಮೂಲಕ ಕನ್ನ ಹೊಡೆದರು. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಿಂದ ಭ್ರಷ್ಟಾಚಾರ ಮಾಜಿ ಸಚಿವ ಹೆಚ್ ಆಂಜನೇಯ ಹೆಸರು ಹೇಳದೆ ಟೀಕೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ದಿಂಬು ಹಾಸಿಗೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಎಲ್ಲಾ ಹಣ 'ವಿಜಯ ಬ್ಯಾಂಕ್ ' ಗೆ ಹಾಕಿದರು ಎಂದ ಸಿಎಂ ಭ್ರಷ್ಟಾಚಾರ ಬಯಲಾಗುವ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ. ಲೋಕಾಯುಕ್ತ ಮುಚ್ಚಿಹಾಕಿ ಎಸಿಬಿ ತಂದರು. ಐವತ್ತಕ್ಕೂ ಹೆಚ್ಚು ಕೇಸ್ ಬಿ ರಿಪೋರ್ಟ್ ಹಾಕಿದ್ದರು. ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಕಾರಣಕ್ಕೆ ಎಲ್ಲಾ ರಾಜ್ಯದಲ್ಲಿ ಕಾಂಗ್ರೆಸ್ ಮೂಲೆಗುಂಪು.
ರಾಜಕಾರಣಕ್ಕಾಗಿ ಧರ್ಮ ನಿಂದಿಸುವ ಕೀಳುಮಟ್ಟಕ್ಕಿದ ಕಾಂಗ್ರೆಸ್: ಸಿಎಂ ಬೊಮ್ಮಾಯಿ
ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗಲಿದೆ. ಕರ್ನಾಟಕ ಚುನಾವಣೆಗೆ ಮುನ್ನುಡಿ ಬರೆಯಲಿದೆ. ಸಾಮಾಜಿಕ ನ್ಯಾಯವೆಂದು ಹೇಳುತ್ತ ಕಾಂಗ್ರೆಸ್ ಸಾಮಾಜಿಕ ಅನ್ಯಾಯ ಮಾಡಿದೆ. ಭ್ರಷ್ಟಾಚಾರ ಕಾರಣಕ್ಕೆ ಎಲ್ಲಾ ರಾಜ್ಯದಲ್ಲಿ ಕಾಂಗ್ರೆಸ್ ಮೂಲೆಗುಂಪು. ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗಲಿದೆ. ಕರ್ನಾಟಕ ಚುನಾವಣೆಗೆ ಮುನ್ನುಡಿ ಬರೆಯಲಿದೆ. ಸಾಮಾಜಿಕ ನ್ಯಾಯವೆಂದು ಹೇಳುತ್ತ ಕಾಂಗ್ರೆಸ್ ಸಾಮಾಜಿಕ ಅನ್ಯಾಯ ಮಾಡಿದೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬು ಚಿಂತನೆ ಸರ್ಕಾರದ್ದಾಗಿದೆ. ಜನ ವಿರೋಧಿ, ಅಭಿವೃದ್ಧಿ ವಿರೋಧಿ, ಎಸ್ಸಿ ಎಸ್ಟಿ ವಿರೋಧಿ ಕಾಂಗ್ರೆಸ್ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕಬೇಕೆಂದು ಕರೆ ಕೊಟ್ಟರು.
Jana Sankalpa Yatre: ಸಿಎಂ ಆಗಲು ಸಿದ್ರಾಮಣ್ಣ ಡಿಕೆಶಿ ಬೆಂಬಲ ಕೇಳಲಿ: ಸಿಎಂ
ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಕಾಂಗ್ರೆಸ್ ಏಕೆ ಮಾಡಲಿಲ್ಲ. ರಾಜಕೀಯ ಇಚ್ಛಾಶಕ್ತಿಯಿಂದ ಬದಲಾವಣೆ ಸಾಧ್ಯ. ಯಡಿಯೂರಪ್ಪ ಆಶೀರ್ವಾದಿಂದ ರಾಜ್ಯ ಸರ್ಕಾರದಿಂದ ಸಮಗ್ರ ಅಭಿವೃದ್ಧಿ. ಜನರ ಸಂಕಲ್ಪವೇ ನಮ್ಮ ಸಂಕಲ್ಪ ಆಗಿದೆ. ಹಿರಿಯೂರಿನ ವಾಣಿ ಸಕ್ಕರೆ ಕಾರ್ಖಾನೆ ಬಂದಾಗಿದೆ.ಪುನಶ್ಚೇತನ ಮಾಡುವುದು ರೈತರ ಒತ್ತಾಸೆಯಾಗಿದೆ. ವಾಣಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ. ತಜ್ಞರ ಸಮಿತಿ ಕಳಿಸಿ ಅಧ್ಯಯನ ನಡೆಸಿ ಪುನಶ್ಚೇತನಕ್ಕೆ ಕ್ರಮ ಎಂದರು..