ತೆಲಂಗಾಣ, ಮಧ್ಯ ಪ್ರದೇಶ ಚುನಾ​ವ​ಣೆ: ಪ್ರಿಯಾಂಕಾಗೆ ಹೆಚ್ಚು ಹೊಣೆ ಸಾಧ್ಯ​ತೆ

By Kannadaprabha NewsFirst Published Jun 8, 2023, 2:30 AM IST
Highlights

ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ನಡೆಸಿದ ಮಹಿಳಾ ಸಂವಾದ ಎಂಬ ಕಾರ್ಯಕ್ರಮವನ್ನು ಇಲ್ಲೂ ನಡೆಸಲಿದ್ದು, ಇದರಲ್ಲಿ ಮಹಿಳೆಯರಿಗೆ 1500 ರು. ಭತ್ಯೆ, ಅಡುಗೆ ಅನಿಲವನ್ನು ಕೇವಲ 500 ರೂ.ಗಳಿಗೆ ನೀಡುವ ಗ್ಯಾರಂಟಿ ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ಎಂಬ ಭರವಸೆಗಳನ್ನು ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.

ನವದೆಹಲಿ(ಜೂ.08):  ಕಾಂಗ್ರೆಸ್‌ ಪಕ್ಷ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶದಲ್ಲಿ ಯಶಸ್ವಿಯಾಗಿ ಜಯಗಳಿಸಿದ ಬೆನ್ನಲ್ಲೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಮುಂಬರುವ ತೆಲಂಗಾಣ ಹಾಗೂ ಮಧ್ಯ ಪ್ರದೇಶಗಳ ಚುನಾವಣೆ ಕಡೆ ಗಮನಹರಿಸಲಿದ್ದಾರೆ ಎಂದು ಮೂಲ​ಗಳು ಹೇಳಿ​ವೆ.

ಇದರ ಭಾಗವಾಗಿ ಈಗಾಗಲೇ ತೆಲಂಗಾಣದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಪ್ರಿಯಾಂಕಾ ಅವರು ಜೂ.12ರಂದು ಮಧ್ಯ ಪ್ರದೇಶಕ್ಕೆ ತೆರಳಲಿದ್ದಾರೆ. ಈ ವೇಳೆ ಕರ್ನಾಟಕದಲ್ಲಿ ನೀಡಿದ ಹಾಗೇ ಉಚಿತ ಭರವಸೆಗಳ ಕುರಿತು ಉಲ್ಲೇಖ ಮಾಡಲಿದ್ದಾರೆ ಎಂದು ಅವು ಹೇಳಿ​ವೆ.

ಕರ್ನಾಟಕ ಗೆಲುವಿನ ಬಳಿಕ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಪಂಚ ಗ್ಯಾರಂಟಿ ಪಾಲಿಟಿಕ್ಸ್‌!

ಉತ್ತರ ಪ್ರದೇಶ ಹಾಗೂ ಕರ್ನಾಟಕದಲ್ಲಿ ನಡೆಸಿದ ಮಹಿಳಾ ಸಂವಾದ ಎಂಬ ಕಾರ್ಯಕ್ರಮವನ್ನು ಇಲ್ಲೂ ನಡೆಸಲಿದ್ದು, ಇದರಲ್ಲಿ ಮಹಿಳೆಯರಿಗೆ 1500 ರು. ಭತ್ಯೆ, ಅಡುಗೆ ಅನಿಲವನ್ನು ಕೇವಲ 500 ರೂ.ಗಳಿಗೆ ನೀಡುವ ಗ್ಯಾರಂಟಿ ಹಾಗೂ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ಎಂಬ ಭರವಸೆಗಳನ್ನು ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.

ಈ ಹಿಂದೆ ಪ್ರಿಯಾಂಕಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಿರುಸಿನ ಪ್ರಚಾರವನ್ನು ಯಶಸ್ವಿಯಾಗಿ ತಡೆದು ರಾಹುಲ್‌ ಗಾಂಧಿಯೊಂದಿಗೆ ಕಾಂಗ್ರೆಸ್‌ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

click me!