ಪ್ರಧಾನಿ ಮೋದಿ ಸೋಲಿನ ಭಯದಿಂದ, ಗಲ್ಲಿ ಗಲ್ಲಿ ಸುತ್ತಾಡ್ತಿದಾರೆ! ಎಚ್. ವಿಶ್ವನಾಥ್ ಟೀಕೆ

By Sathish Kumar KH  |  First Published May 4, 2023, 11:15 PM IST

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯದ ಗಲ್ಲಿ, ಗಲ್ಲಿಯಲ್ಲಿ ಸುತ್ತಾಡುತ್ತಿದ್ದಾರೆ ಎಂದು ಹೆಚ್. ವಿಶ್ವನಾಥ್ ಟೀಕೆ ಮಾಡಿದರು.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 
ಕೊಡಗು  (ಮೇ 04): ರಾಜ್ಯ ಚುನಾವಣಾ ಪ್ರಚಾರಕ್ಕಾಗಿ ಪದೇ ಪದೇ ಬರುತ್ತಿರುವ ಮೋದಿಯವರು ಗಲ್ಲಿ ಗಲ್ಲಿ ಸುತ್ತುತ್ತಿದ್ದಾರೆ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ. ಯಾವ ಪ್ರಧಾನಿಯೂ ಚುನಾವಣೆಗಾಗಿ ಇಷ್ಟು ಭಾರಿ ಬಂದಿರಲಿಲ್ಲ. ಒಂದು ರಾಜ್ಯದ ಚುನಾವಣೆಯನ್ನು ಗೆಲ್ಲಬೇಕೆಂಬ ಹಂಬಲದಿಂದ ಗಲ್ಲಿ ಗಲ್ಲಿ ತಿರುಗುತ್ತಿದ್ದಾರೆ. ಹಾಗಾದರೆ ಸೋಲುತ್ತೇವೆ ಎನ್ನುವ ಹೆದರಿಕೆ ನಿಮಗೆ ಅಷ್ಟೊಂದು ಇದೆಯಾ ಎಂದು ಹೆಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ. 

ಮಡಿಕೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎಚ್.ವಿಶ್ವನಾಥ್ ಕರ್ನಾಟಕದ ಜನತೆಗೆ ನಿಮ್ಮ ಮೇಲೆ ನಂಬಿಕೆ ಹೊರಟು ಹೋಗಿದೆಯಾ,? ಕರ್ನಾಟಕದ ಜನ ಪ್ರಧಾನಿಯವರ ಮೇಲೆ, ಬಿಜೆಪಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎನ್ನುವುದು ನಿಮ್ಮ ಮನಸ್ಸಿನಲ್ಲಿದೆ. ಹೀಗಾಗಿಯೇ ಜನರಲ್ಲಿ ಆ ನಂಬಿಕೆಯನ್ನು ಮೂಡಿಸುವುದಕ್ಕಾಗಿ ಪದೇ ಪದೇ ಬರುತ್ತಿರುವುದಾಗಿ ನೀವೇ ಜಗತ್ ಜಾಹೀರು ಮಾಡಿಕೊಳ್ಳುತ್ತಿದ್ದೀರಾ ಎಂದು ವಿಶ್ವನಾಥ್ ಹೇಳಿದ್ದಾರೆ. ಪ್ರಧಾನಿಯವರು ರಾಜಧಾನಿಯಲ್ಲಿ ನಿಂತು ಭಾಷಣ ಮಾಡಿದರೆ ಅದರ ಮೇಲೆ ಚರ್ಚೆಗಳಾಗುತ್ತವೆ. ಆದರೆ ಇಲ್ಲಿ ಏನು ಚರ್ಚೆ ಆಗುತ್ತಿದೆ ಎಂದು ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ. 

Tap to resize

Latest Videos

undefined

ಸಿದ್ದರಾಮಯ್ಯ ಪರ ತಾರೆಯರ ಹಿಂಡು: ಶಿವರಾಜ್‌ ಕುಮಾರ್ ನೋಡಲು ಅಭಿಮಾನಿಗಳ ದಂಡು

ಕರ್ನಾಟಕದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಅದನ್ನು ಬಿಟ್ಟು ಪ್ರಧಾನಿಯವರಾಗಿ ನೀವು ಏನೆಲ್ಲಾ ಮಾತನಾಡುತ್ತಿದ್ದೀರಾ. ಕಾಂಗ್ರೆಸ್ ನವರು ಅಂಬೇಡ್ಕರ್ ಅವರನ್ನು ಗೌರವಿಸಲ್ಲ ಎನ್ನುತ್ತೀರಾ. ಆದರೆ ಅಂಬೇಡ್ಕರ್ ಅವರನ್ನು ಗೌರವಿಸುವುದು ಎಂದರೆ ಸಂವಿಧಾನವನ್ನು ಗೌರವಿಸುವುದು ಎಂದರ್ಥ. ನೀವು ಸಂವಿಧಾನವನ್ನು ಗೌರವಿಸುವುದಾದರೆ ಈ ಚುನಾವಣೆಯಲ್ಲಿ ಯಾಕೆ ಮುಸಲ್ಮಾನರಿಗೆ ನಿಮ್ಮ ಪಕ್ಷದಿಂದ ಒಂದೇ ಒಂದು ಟಿಕೆಟ್ ಕೊಟ್ಟಿಲ್ಲ. ಮುಸ್ಲಿಮರು ಈ ದೇಶದ ಪ್ರಜೆಗಳಲ್ಲವೇ.? ಮುಸ್ಲಿಮರು ಈ ದೇಶದ ಪ್ರಜೆಗಳಲ್ಲ ಎಂದು ನೀವು ಡಿಸೈಡ್ ಮಾಡಿಬಿಡಿ. ಆ ಮೇಲೆ ನೀವು ಏನಾದರೂ ಮಾಡಿ. 

ಪ್ರಧಾನಿಯವರು ಬರೀ ಹಿಂದೂಧರ್ಮದ ಪ್ರಧಾನಿಯವರಲ್ಲ. ಈ ದೇಶದಲ್ಲಿ ಬದುವ ಎಲ್ಲಾ ಜಾತಿ ಜನಾಂಗ ಧರ್ಮಗಳ ಪ್ರಧಾನಿಯಾಗಿದ್ದಾರೆ. ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ನಿಮಗೆ ಯಾರು ಗೌರವ ಕೊಡಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾನು ಪ್ರಧಾನಿಯವರನ್ನು ಗೌರವಿಸುತ್ತೇನೆ. ಆದರೆ ಅವರ ಮಾತು ನಡವಳಿಕೆಯನ್ನು ನಾನು ಗೌರವಿಸಲ್ಲ ಎಂದು ವಿಶ್ವನಾತ್ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ 6 ಸಾವಿರ ಶಾಲೆಗಳು ಮುಚ್ಚಿಹೋಗಿದ್ದರೆ, ಒಂದು ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರಿದ್ದಾರೆ. ಇವುಗಳ ಬಗ್ಗೆ ಮಾತನಾಡಬೇಕಾಗಿರುವ ಪ್ರಧಾನಿ ಮೋದಿ ಅವರು ಕೇವಲ ಭಾವನೆಗಳೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಹೇಳಿರುವುದಕ್ಕೆ ಪ್ರಧಾನಿ ಮೋದಿಯವರು ಹಿಂದೆ ಕಾಂಗ್ರೆಸ್ನವರು ರಾಮನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದರು. ಈಗ ಹನುಮನ ಭಕ್ತರನ್ನು ಬಂಧಿಸುವುದಕ್ಕೆ ಹೊರಟಿದ್ದಾರೆ ಎಂದು ಹೇಳಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿಶ್ವನಾಥ್, ಪ್ರಧಾನಿ ಮೋದಿಯವರ ಮನಸ್ಸು ಬದಲಾಗಬೇಕು. ಪ್ರಧಾನಿಯವರ ಮನಸ್ಸು ಭಾರತದಷ್ಟೇ ವಿಶಾಲ ಆಗಬೇಕು ಎಂದರು.

Jan Ki Baat Suvarna News Survey: ಮೋದಿ ಪ್ರಭಾವ, ಸರಳ ಬಹುಮತದತ್ತ ಬಿಜೆಪಿ!

ದೇಶದಲ್ಲಿ ವಿವಿಧ ಭಾಷೆ, ಮತ ಧರ್ಮಗಳ 140 ಕೋಟಿ ಜನರಿದ್ದೇವೆ. ನಮ್ಮ ಬದುಕಿಗೆ ಏನು ಕೊಡ್ತೀರಾ ಅದನ್ನು ಹೇಳಿ. ಅದು ಬಿಟ್ಟು ಕೇವಲ ಭಾವನೆಗಳ ಜೊತೆ ಚೆಲ್ಲಾಟವಾಡಬೇಡಿ. ಬರಿ ಭಾವನೆಗಳ ಮೇಲೆ ಬದುಕುವುದಕ್ಕೆ ಆಗುತ್ತಾ, ಈ ಭಾವನೆಗಳ ಮೇಲೆ ನೀವು ಚುನಾವಣೆ ಮಾಡ್ತೀರಾ ಎಂದು ಕೇಳಿದರೆ ಮೋದಿಯವರೆ ಉಲ್ಟಾ ಏನೇನೋ ಹೇಳ್ತೀರಾ. ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದರು. ಪ್ರಧಾನಿ ಮೋದಿಯವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಶಿಕ್ಷಣ, ಉದ್ಯೋಗ, ಆರ್ಥಿಕತೆ ಬಗ್ಗೆ ಮಾತನಾಡಿ ಎಂದು ವಿಶ್ವನಾಥ್ ಹೇಳಿದರು.

click me!