ಶಾಸಕಿ ರೂಪಾಲಿ ನಾಯ್ಕ್ ಮತ್ತೊಮ್ಮೆ ಗೆದ್ದಲ್ಲಿ ಬೆಂಗಳೂರಿನಲ್ಲೇ ಇರುತ್ತಾರೆ ಹೊರತು ಜನರ ಕೈಗೆ ಸಿಗಲ್ಲ. ಸತೀಶ್ ಸೈಲ್ ಅವರನ್ನು ಗೆಲ್ಲಿಸಿದಲ್ಲಿ ನಾನೇ ಅವರ ಹಿಂದೆ ನಿಂತು ಜನಪರ ಕೆಲಸ ಮಾಡಿಸುತ್ತೇನೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರನ್ನು ಗೆಲ್ಲಿಸಿ ಅಂತಾ ಮತ ಪ್ರಚಾರ ಮಾಡಲಾರಂಭಿಸಿದ ಆನಂದ್ ಆಸ್ನೋಟಿಕರ್.
ಕಾರವಾರ(ಮೇ.04): ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಇದೀಗ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರವಾಗಿ ಬ್ಯಾಟ್ ಬೀಸಲಾರಂಭಿಸಿದ್ದಾರೆ. ಈ ಮೂಲಕ ಹಿಂದಿನ ರಾಜಕೀಯ ಬದ್ಧ ವೈರಿಗಳು ಇದೀಗ ಕೈಜೋಡಿಸಿಕೊಂಡಿದ್ದಾರೆ.
ಕಾಂಗ್ರೆಸ್‌ನಿಂದ ಬಂದಂತಹ ಆನಂದ್ ಆಸ್ನೋಟಿಕರ್ ಗೆದ್ದ ಬಳಿಕ ಬಿಜೆಪಿ ಸೇರಿದ್ದರು. ಬಿಜೆಪಿಯಲ್ಲಿ ಸ್ಪರ್ಧಿಸಿ ಸಚಿವರಾಗಿರೂ ಅಧಿಕಾರ ಪಡೆದಿದ್ದರು. ಆದರೆ, 2013ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಸತೀಶ್ ಸೈಲ್ ವಿರುದ್ಧ ಸೋತಿದ್ದರು. ಗೆದ್ದ ಸತೀಶ್ ಸೈಲ್ ಬಳಿಕ ಕಾಂಗ್ರೆಸ್ ಸೇರಿದ್ದರು. ರಾಜಕೀಯವಾಗಿ ಆನಂದ್ ಆಸ್ನೋಟಿಕರ್ ಹಾಗೂ ಸತೀಶ್ ಸೈಲ್ ವೈರಿಗಳಾಗಿಯೇ ಗುರುತಿಸಿಕೊಂಡಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಈ ರಾಜಕೀಯ ವೈರಿಗಳು ಇದೀಗ ಒಂದಾಗಿದ್ದಾರೆ.
undefined
ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್ ಬಳಿ ಮತ್ತೊಂದು ಅವಘಡ: ಹೊತ್ತಿ ಉರಿದ ಬೆಂಕಿ!
ಬಿಜೆಪಿ ಪರ ಹೆಚ್ಚು ಒಲವು ಹೊಂದಿದ್ದ ಆನಂದ್, ಇಷ್ಟು ದಿನಗಳ ಕಾಲ ಬಿಜೆಪಿ ಕದ ತಟ್ಟುತ್ತಿದ್ದರು. ಯಾವಾಗ ಟಿಕೆಟ್ ದೊರೆಯುವ ಸುಳಿವು ಸಿಕ್ಕಿಲ್ಲವೋ ಆಗ ತಾನು ಖುದ್ದಾಗಿ ಚುನಾವಣಾ ಕಣದಲ್ಲಿ ಇಳಿಯುವುದಾಗಿ ಹೇಳಿಕೊಳ್ಳಯತ್ತಿದ್ದರು. ಆದರೆ, ನಾಮಪತ್ರ ಸಲ್ಲಿಕೆಯ ಬಳಿಕದಿಂದ ಸೈಲೆಂಟಾಗಿದ್ದ ಆಸ್ನೋಟಿಕರ್ ಇದೀಗ ಏಕಾಏಕಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಬ್ಯಾಟ್ ಬೀಸಲಾರಂಭಿಸಿದ್ದಾರೆ.
ಶಾಸಕಿ ರೂಪಾಲಿ ನಾಯ್ಕ್ ಮತ್ತೊಮ್ಮೆ ಗೆದ್ದಲ್ಲಿ ಬೆಂಗಳೂರಿನಲ್ಲೇ ಇರುತ್ತಾರೆ ಹೊರತು ಜನರ ಕೈಗೆ ಸಿಗಲ್ಲ. ಸತೀಶ್ ಸೈಲ್ ಅವರನ್ನು ಗೆಲ್ಲಿಸಿದಲ್ಲಿ ನಾನೇ ಅವರ ಹಿಂದೆ ನಿಂತು ಜನಪರ ಕೆಲಸ ಮಾಡಿಸುತ್ತೇನೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರನ್ನು ಗೆಲ್ಲಿಸಿ ಅಂತಾ ಮತ ಪ್ರಚಾರ ಮಾಡಲಾರಂಭಿಸಿದ್ದಾರೆ.