ಸ್ವತಂತ್ರ ಸರ್ಕಾರ ರಚನೆಗಾಗಿ ರಾಯರ ಮೊರೆ: ಮಂತ್ರಾಲಯದಲ್ಲಿ ಕುಮಾರಸ್ವಾಮಿ ದಂಪತಿ

By Sathish Kumar KH  |  First Published Jan 29, 2023, 3:08 PM IST

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಸರ್ಕಾರವೇ ನನ್ನ ಗುರಿಯಾಗಿದೆ. ಈ ಗುರಿಯನ್ನು ಈಡೇರಿಸುವುದಕ್ಕಾಗಿ ಅನುಗ್ರಹಿಸುವಂತೆ ರಾಯರಲ್ಲಿ ಕೇಳಿಕೊಂಡಿದ್ದೇನೆ.


ರಾಯಚೂರು (ಜ.29):  ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಸರ್ಕಾರವೇ ನನ್ನ ಗುರಿಯಾಗಿದೆ. ಈ ನನ್ನ ಗುರಿಯನ್ನು ಈಡೇರಿಸುವುದಕ್ಕಾಗಿ ಅನುಗ್ರಹಿಸುವಂತೆ ರಾಯರಲ್ಲಿ ಕೇಳಿಕೊಂಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. 

ಮಂತ್ರಾಲಯದ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ರಾಯರ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಾಲಯಕ್ಕೆ ಬರಲು ಹಲವಾರು ವರ್ಷಗಳಿಂದ ಬರಲು ಸಾಧ್ಯವಾಗಿರಲಿಲ್ಲ. ಕಳೆದ ಐದು ದಿನಗಳಿಂದ ರಾಯಚೂರಿನಲ್ಲಿ ಪಂಚರತ್ನ ಕಾರ್ಯಕ್ರಮ ನಡೆಯುತ್ತಿದೆ. ರಥಯಾತ್ರೆ ಯಶಸ್ಸಿಗೆ ಹಲವಾರು ವರ್ಷಗಳ ಬಳಿಕ, ರಾಯರೇ ನನ್ನನ್ನ ಕರೆಸಿಕೊಂಡಿದ್ದಾರೆ. ಇನ್ನು ಅನಿತಾ ಕುಮಾರಸ್ವಾಮಿ ಅವರು ರಾಯರ ಭಕ್ತರಾಗಿದ್ದಾರೆ ಎಂದು ತಿಳಿಸಿದರು.

Latest Videos

undefined

ಹಾಸನ ಟಿಕೆಟ್‌ ಫೈಟ್‌ಗೆ ತೆರೆ: ಪತ್ನಿ, ಮಕ್ಕಳಿಗೆ ನಿರಾಶೆ ಮಾಡಿದ ಎಚ್.ಡಿ. ರೇವಣ್ಣ

ನಂತರ ಮಾತನಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು, ನಾನು ಮೊದಲಿನಿಂದಲೂ ರಾಯರ ಭಕ್ತೆಯಾಗಿದ್ದೇನೆ. ಇಂದು ಮಂತ್ರಾಲಯಕ್ಕೆ ದಂಪತಿ ಸಮೇತ ಬಂದಿದ್ದೇವೆ. ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ಅಂತ ಅಷ್ಟೇ ಕೇಳಿಕೊಂಡಿದ್ದೇನೆ. ಜೀವನದಲ್ಲಿ ರಾಯರನ್ನ ನಂಬಿದಕ್ಕೆ ಒಳಿತಾಗಿದೆ. ನನಗೆ ಜೀವನದಲ್ಲಿ ಏನಾದರೂ ಒಳ್ಳೆಯದಾಗಿದ್ದರೇ ಅದು ರಾಯರ ಇಚ್ಛೆಯಾಗಿದೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಹಾಸನ ಟಿಕೆಟ್ ಗೊಂದಲ ವಿಚಾರ: ಹಾಸನದಲ್ಲಿ ಭವಾನಿ ರೇವಣ್ಣ ಅವರು ಟಿಕೆಟ್‌ಗಾಗಿ ಜೋರಾಗಿ ಲಾಭಿ ಮಾಡುತ್ತಿದ್ದಾರೆ. ಈ ಗೊಂದಲದ ನಡುವೆಯೇ ಎಚ್.ಡಿ. ಕುಮಾರಸ್ವಾಮಿ ದಂಪತಿ ಟೇಪಲ್ ರನ್ ಮಾಡುತ್ತಿದ್ದಾರೆ. ಈ ಮೂಲಕ ಸಂಕಷ್ಟ ನಿವಾರಣೆಗೆ ರಾಯರ ಮೊರೆ ಹೋಗಿದ್ದಾರೆ. ಇಂದು ಮಂತ್ರಾಲಯಕ್ಕೆ  ಕುಮಾರಸ್ವಾಮಿ ದಂಪತಿ ಭೇಟಿ ನೀಡಿದ್ದು, ರಾಯರ ಆಶೀರ್ವಾದ ಪಡೆದಿದ್ದಾರೆ. ಪಂಚರತ್ನ ಯಾತ್ರೆ ಯಶಸ್ವಿ ಹಾಗೂ ರಾಜ್ಯದಲ್ಲಿ ಬಹುಮತದ ಜೆಡಿಎಸ್‌ ಸರ್ಕಾರ ರಚನೆಗೆ ಪಣ ತೊಟ್ಟಿದ್ದು, ಇದನ್ನು ಈಡೇರಿಸುವಂತೆ ಕೋರಿಕೊಂಡಿದ್ದಾರೆ.

ಮೂಲ ಬೃಂದಾವನ ದರ್ಶನ ಪಡೆದ ಎಚ್‌ಡಿಕೆ ದಂಪತಿ: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿ ದರ್ಶನ ಪಡೆದ ಬಳಿಕ ಕುಮಾರಸ್ವಾಮಿ ದಂಪತಿ ಮಂತ್ರಾಲಯದ ಮಂಚಾಲಮ್ಮ ತಾಯಿಯ ದರ್ಶನ ಪಡೆದರು. ಆ ಬಳಿಕ ರಾಯರ ಮೂಲ ಬೃಂದಾವನ ದರ್ಶನ ಪಡೆದು ಶ್ರೀಮಠದ ಪೀಠಾಧಿಪತಿಗಳೊಂದಿಗೆ ಚರ್ಚೆ ಮಾಡಿದರು. ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನ ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಕುಮಾರಸ್ವಾಮಿ ದಂಪತಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನದ ಬಳಿಕ ಪಂಚರತ್ನ ಯಾತ್ರೆ ಬಗ್ಗೆ ಎಚ್ ಡಿಕೆ ಜೊತೆಗೆ ಮಾತುಕತೆ ನಡೆಸಿದರು.

ಅಧಿಕಾರ ಕೊಟ್ಟಾಗ ಕುಮಾರಸ್ವಾಮಿ ಏನೂ ಮಾಡಲಿಲ್ಲ: ಡಿ.ಕೆ.ಶಿವಕುಮಾರ್‌

ಜೆಡಿಎಸ್ 57ನೇ ದಿನದ ಪಂಚರತ್ನ ಯಾತ್ರೆ: ಇಂದು ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯನ್ನು ಆರಂಭಿಸಲಿದ್ದಾರೆ. ಸಿಂಧನೂರು ವಿಧಾನಸಭಾ ಕ್ಷೇತ್ರದ ಗಣೇಶ ದೇವಸ್ಥಾನ, ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ. ಆ ಬಳಿಕ ಸಿಂಧನೂರು ವಿಧಾನಸಭಾ ಕ್ಷೇತ್ರದ ಅರಗಿನಮರ ಕ್ಯಾಂಪ್ ರ್ಯಾಲಿಯಲ್ಲಿ ಪಾಲ್ಗೊಂಡು ಆರ್.ಎಚ್. ಕ್ಯಾಂಪ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

click me!