ಖಾತೆ ಕ್ಯಾತೆ: ಸಿಎಂ ಬೊಮ್ಮಾಯಿಗೆ ರಾಜೀನಾಮೆ ಎಚ್ಚರಿಕೆ ಕೊಟ್ಟ ಸಚಿವ

By Suvarna NewsFirst Published Aug 7, 2021, 4:33 PM IST
Highlights

* ಖಾತೆ ಹಂಚಿಕೆ ಬೆನ್ನಲ್ಲೇ ಭಗಿಲೆದ್ದ ಅಸಮಾಧಾನ
* ಖಾತೆ ಬಗ್ಗೆ ಅಸಮಧಾನ ಹೊರಹಾಕಿದ ಸಚಿವರು 
* ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ಕೊಟ್ಟ ಸಚಿವ

ಬೆಂಗಳೂರು, (ಆ.07): ಮುಖ್ಯಮಂತ್ರಿ ಬಸವರಾಜ​​ ಬೊಮ್ಮಾಯಿ ತಮ್ಮ ಸಂಪುಟದ 29 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಬೆನ್ನಲ್ಲೇ ಅಸಮಾಧಾನ ಭುಗಿಲೆದ್ದಿದೆ. 

ಹೌದು..ನಿರೀಕ್ಷಿಸಿದ್ದ ಖಾತೆ ಸಿಕ್ಕಿಲ್ಲವೆಂದು ಕೆಲವರು ಸಚಿವರು ಬಹಿರಂಗವಾಗಿಯೇ ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಆನಂದ್ ಸಿಂಗ್‌ ಪರಿಸರ ಮತ್ತು ಪ್ರವಾಸೋದ್ಯಮ ಇಲಾಖೆ ಕೊಟ್ಟಿರುವುದರಿಂದ ತೀವ್ರ ಬೇಸರಗೊಂಡಿದ್ದು, ಪರೋಕ್ಷವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ಕೊಟ್ಟಿದ್ದಾರೆ.

2-3 ದಿನಗಳಲ್ಲಿ ನನ್ನ ನಿರ್ಧಾರ ತಿಳಿಸುವೆ, ಸಂಚಲನ ಮೂಡಿಸಿದ ಎಂಟಿಬಿ ಹೇಳಿಕೆ

ಈ ಬಗ್ಗೆ ಬಳ್ಳಾರಿಯಲ್ಲಿ ಇಂದು (ಆ.07) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆನಂದ್ ಸಿಂಗ್,  ನಾನು ಒಂದು ಖಾತೆಯನ್ನು ಕೇಳಿದ್ದರೆ, ಬೇರೊಂದು ಖಾತೆಯನ್ನು ನೀಡಲಾಗಿದೆ. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಖಾತೆ ಬದಲಾಯಿಸುವಂತೆ ಕೇಳುವೆ. ಒಂದು ವೇಳೆ ಕೇಳಿದ ಖಾತೆಯನ್ನು ಕೊಡದೇ ಇದ್ದರೆ ಶಾಸಕನಾಗಿ ಉಳಿಯುವುದೇ ಒಳಿತು ಎನ್ನುವುದು ನನ್ನ ನಿಲುವಾಗಿದೆ ಎಂದು ಪರೋಕ್ಷವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಎಚ್ಚರಿಕೆ ನೀಡಿದರು.

ಕೇಳಿದ ಖಾತೆ ನೀಡದಿರುವುದು ನನಗೆ ಅಸಮಾಧಾನ ಉಂಟುಮಾಡಿದೆ. ಕೇಳಿದ ಖಾತೆ ಏಕೆ ನೀಡಲಿಲ್ಲ ಅನ್ನೋದು ನನಗೆ ತಿಳಿಸಬೇಕು. ಸಿಎಂ ಬೊಮ್ಮಾಯಿರನ್ನು ಭೇಟಿಯಾಗಿ ಮನವಿ ಮಾಡುವೆ. ನನಗೆ ಅರ್ಹತೆ ಇಲ್ವಾ?, ನಾನು ಭ್ರಷ್ಟಾಚಾರ ಮಾಡಿದ್ದೀನಾ? ನನಗೆ ಸಾಮರ್ಥ್ಯ ಇಲ್ವಾ? ನಾನೇನು ಅನ್‌ ಫಿಟ್ ಇದೀನಾ? ಎಂದು ಕೇಳುವೆ. ಅವರು ನೀನು ನಾಲಾಯಕ್ ಅಂತ ಅನ್ನೋದನ್ನಾದ್ರೂ ಹೇಳಲಿ ಎಂದು ಸಿಎಂ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಅಳೆದು ತೂಗಿ ಕರ್ನಾಟಕ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಪಟ್ಟಿ

ಸರ್ಕಾರ ಬರಲಿಕ್ಕೆ ಕಾರಣವಾದವರಲ್ಲಿ ನಾನೂ ಮೊದಲಿಗ. ಮೊದಲಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ನಾನೇ. ನಾನು ರಾಜೀನಾಮೆ ನೀಡಿದಾಗ ಯಾರೂ ಕೊಟ್ಟಿರಲಿಲ್ಲ. ನಾನು ಕೇಳಿದ ಖಾತೆ ನನಗೆ ಮತ್ತು ಸಿಎಂಗೆ ಮಾತ್ರ ಗೊತ್ತು. ಕೇಳಿದ ಖಾತೆ ಸಿಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ಹೇಳಿದರು.

click me!