
ಬೆಂಗಳೂರು(ಆ.07): ಬೊಮ್ಮಾಯಿ ಸಂಪುಟದ 29 ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಮೊದಲ ಬಾರಿ ಸಚಿವರಾದವರಿಗೆ ಪವರ್‌ಫುಲ್ ಖಾತೆ ನೀಡುವುದರೊಂದಿಗೆ, ಬಿಎಸ್‌ವೈ ಸಂಪುಟದ ಅನೇಕರಿಗೆ ಅದೇ ಖಾತೆಯನ್ನು ಮರು ಹಂಚಿಕೆ ಮಾಡಲಾಗಿದೆ. ಇವೆಲ್ಲದರ ಮಧ್ಯೆ ಕೆಲವರು ತಮಗಿಷ್ಟದ ಖಾತೆ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ.
"
ಇನ್ನು ಖಾತೆ ಹಂಚಿಕೆ ಬಳಿಕ ಸಚಿವ ಶ್ರೀರಾಮುಲು ತಮಗೆ ಕೊಟ್ಟ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಾಲಯ ಹಾಗೂ ಸಾರಿಗೆ ಖಾತೆಯಿಂದ ಅಸಮಾಧಾನಗೊಂಡಿದ್ದಾರೆಂಬ ಮಾತುಗಳು ಜೋರಾಗಿದ್ದವು. ಇಷ್ಟವಿಲ್ಲದ ಖಾತೆಯಲ್ಲಿ ಕೆಲಸ ಮಾಡೋಕೆ ಆಗೋದಿಲ್ಲವೆಂದು ಆಪ್ತರ ಮುಂದೆ ಹೇಳಿಕೊಂಡಿದ್ದಾರೆ. ಇಷ್ಟೆಲ್ಲ ಅವಮಾನದೊಂದಿಗೆ ಸಚಿವರಾಗೋ ಬದಲು ಶಾಸಕರಾಗಿ ಉಳಿಯೋದೇ ಲೇಸು ಎಂದಿದ್ದಾರೆನ್ನಲಾಗಿತ್ತು. ಆದರೀಗ ಈ ಬಗ್ಗೆ ಖುದ್ದು ಸಚಿವ ಶ್ರೀರಾಮುಲು ಅವರೇ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶ್ರೀರಾಮುಲು ಸಾರಿಗೆ ಹಾಗೂ ನೂತನವಾಗಿ ಸೃಷ್ಟಿಯಾಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವಾಲಯದ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಜವಾಬ್ದಾರಿ ನೀಡಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ವಂದಿಸುತ್ತಾ, ಅವರ ನಿರ್ಧಾರ ಸ್ವಾಗತಿಸುತ್ತೇನೆ ಎಂದಿದ್ದಾರೆ.
ಅಲ್ಲದೇ ಹರಿದಾಡುತ್ತಿರುವ ವದಂತಿಗಳ ಬಗ್ಗಯೂ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ಮಾದರಿ ಆಡಳಿತ, ಜನಪರ ಹಾಗೂ ಅಭಿವೃದ್ಧಿ ಪರ ಆಡಳಿತವೊಂದೇ ನನ್ನ, ನಮ್ಮ ಸರ್ಕಾರದ ಗುರಿ. ಮುಖ್ಯಮಂತ್ರಿಗಳ ನೇತೃತ್ವ ಹಾಗೂ ಹಿರಿಯರು ಬಿ.ಎಸ್. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ. ಅಸಮಾಧಾನ ಮತ್ತಿತರೆ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.