ಪ್ರತಿಯೊಂದು ಸಮಾಜದಲ್ಲಿನ ಬಡವರ ಏಳಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಕೇಂದ್ರ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ, ಬಡವರ ಬದುಕಿನ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ.
ಬಾಗಲಕೋಟೆ (ಏ.03): ಪ್ರತಿಯೊಂದು ಸಮಾಜದಲ್ಲಿನ ಬಡವರ ಏಳಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಕೇಂದ್ರ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ, ಬಡವರ ಬದುಕಿನ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ. ಹೀಗಾಗಿ ಪ್ರಸ್ತುತ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಎಚ್.ವೈ.ಮೇಟಿ ಮನವಿ ಮಾಡಿದರು. ತಾಲೂಕಿನ ತಿಮ್ಮಾಪುರದಲ್ಲಿ ಕಮತಗಿಯ ಶಿವಕುಮಾರ ಬಿ.ನಾಯಕ ಮತ್ತು ರಂಗನಾಥ ಕೆ.ಗುಳೇದಗುಡ್ಡ ಅವರ ನೇತೃತ್ವದಲ್ಲಿ ನೂರಾರು ಯುವಕರು ಬಿಜೆಪಿ ಮತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಲೆ ಏರಿಕೆಯಿಂದ ಬಡ ಜನರ ಬದುಕು ದುಸ್ಥರವಾಗಿದೆ. ನಿತ್ಯವೂ ಕೂಲಿ-ನಾಲಿ ಮಾಡಿ ಬದುಕುವ ಜನರು, ಸಾಲದ ಸುಳಿಗೆ ಸಿಲುಕುವಂತೆ ಮಾಡಿದೆ. ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ, ಬಿಜೆಪಿಯ ಸಂಸದರು, ದೇಶಕ್ಕೆ ಅನ್ನ ನೀಡುವ ರೈತರಿಗೆ ಅವಮಾನ ಮಾಡುವ ರೀತಿ ಮಾತನಾಡುತ್ತಾರೆ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ ಬಿಜೆಪಿ, ದುಪ್ಪಟ್ಟು ಸಾಲಗಾರರನ್ನಾಗಿ ಮಾಡಿದೆ ಎಂದು ಟೀಕಿಸಿದರು. ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತ್ಯುತ್ತಮ ವಾತಾವರಣವಿದೆ. ಇಡೀ ಕ್ಷೇತ್ರದ ಜನರು ಈ ಬಾರಿ ಕಾಂಗ್ರೆಸ್ ಪರವಾಗಿ ಹೆಚ್ಚಿನ ಒಲವು ತೋರುತ್ತಿದ್ದಾರೆ. ಬಿಜೆಪಿ ಆಡಳಿತ ವಿರೋಧಿ ಅಲೆ ಎಲ್ಲೆಡೆಯೂ ಇದೆ ಎಂದರು.
undefined
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಪ್ರಚಾರ ಮಾಡಿ: ಮಾಜಿ ಸಚಿವ ಎಚ್.ವೈ.ಮೇಟಿ
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಈ ಬಾರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕು. ನಿರುದ್ಯೋಗಿ ವಿದ್ಯಾವಂತರಿಗೆ ನಿರುದ್ಯೋಗ ಭತ್ಯೆ, ಕುಟುಂಬದ ಮುಖ್ಯಸ್ಥ ಮಹಿಳೆಗೆ . 2 ಸಾವಿರ, 10 ಕೆ.ಜಿ. ಅಕ್ಕಿ ಹಾಗೂ 200 ಯೂನಿಟ್ ಉಚಿತ ವಿದ್ಯುತ್ ಹೀಗೆ ಕಾಂಗ್ರೆಸ್‌ನ ಜನೋಪಯೋಗಿ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಪ್ರತಿ ಮನೆ ಮನೆಗೂ ತಪಿಸಬೇಕು ಎಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕಾರ್ಮಿಕರ ಹಿತಕಾಯುವುದೇ ಕಾಂಗ್ರೆಸ್ ಧ್ಯೇಯ: ಮಾಜಿ ಸಚಿವ ಎಚ್.ವೈ.ಮೇಟಿ
ಕಮತಗಿಯ ಶಿವಕುಮಾರ ಬಿ.ನಾಯಕ, ರಂಗನಾಥ ಕೆ. ಗುಳೇದಗುಡ್ಡ ಅವರ ನೇತೃತ್ವದಲ್ಲಿ ನೂರುಂದ ಕನಕೇರಿ, ಪ್ರಕಾಶ ಅಚನೂರ, ಯಲ್ಲಪ್ಪ ತಳವಾರ, ಬಸು ಕಿರಸೂರ, ಮಾರುತಿ ಉಪನಾಳ, ಕಿರಣ ಮಸ್ಕಿ, ಬಸವರಾಜ ಉಪನಾಳ, ಸೋಮನ್ನ ಸಂಕದ, ಈರಪ್ಪ ಶಿರಗುಪ್ಪಿ, ಶಂಕ್ರಪ್ಪ ಹೊಸಮನಿ, ಕಿರಣ ಹೆಬ್ಬಾಳ, ಹುಚ್ಚೇಶ ಕಿರಸೂರ, ಹನಮಂತ ಚಾಪಿ, ಈರಣ್ಣ ಹಿರಾಳ, ಸಚಿವನ ಬೊಬಳೇಕರ, ಬಸವರಾಜ ಉಪನಾಳ, ಹನಮಂತ ಕತ್ತಿ, ಸತೀಶ ಬೊಬಳೇಕರ ಮುಂತಾದವರು ಜೆಡಿಎಸ್ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಜಿಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಮುಖಂಡರಾದ ಮಂಜುನಾಥ ವಾಸನದ, ಉಮೇಶ ಮೇಟಿ, ಮುತ್ತಪ್ಪ ಹುಗ್ಗಿ ಇದ್ದರು.