ಸಭೆಗೆ ತಡವಾಗಿ ಬಂದ ಕುಮಾರಣ್ಣ, ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಮುಂದೂಡಿಕೆ!

By Gowthami K  |  First Published Apr 3, 2023, 7:06 PM IST

ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆ ಮುಂದೂಡಿಕೆಯಾಗಿದೆ. ಪಕ್ಷದಲ್ಲಿನ ಗೊಂದಲ , ಸಮಸ್ಯೆಗಳ ನಡುವೆ ಕುಮಾರಸ್ವಾಮಿಒ ತಡವಾಗಿ ಸಭೆಗೆ ಬಂದಿದ್ದಾರೆ ಎಂಬ ಕಾರಣ ನೀಡಿ ಜೆಡಿಎಸ್ ಈ ನಿರ್ಧಾರ ಪ್ರಕಟಿಸಿದೆ.


ಬೆಂಗಳೂರು (ಏ.3): ಜೆಡಿಎಸ್‌ ಎರಡನೇ ಪಟ್ಟಿ ಬಿಡುಗಡೆ ಮುಂದೂಡಿಕೆಯಾಗಿದೆ. ಪಕ್ಷದಲ್ಲಿನ ಆತಂರಿಕ ಸಮಸ್ಯೆ, ಗೊಂದಲಗಳಿಂದ ಪಟ್ಟಿ ಬಿಡುಗಡೆ ಮುಂದಕ್ಕೆ ಹೋಗಿದೆ. ಇಂದು ಎರಡನೇ ಪಟ್ಟಿ ಬಿಡುಗಡೆ ಆಗಬೇಕಿತ್ತು. ಕುಮಾರಸ್ವಾಮಿ ಅವರು ಕೆಆರ್  ಪೇಟೆ ಯಿಂದ ಬೆಂಗಳೂರಿಗೆ ಬರುವುದು ತಡವಾದ ಹಿನ್ನೆಲೆಯಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗಲಿಲ್ಲ. ಹೀಗಾಗಿ ಏಪ್ರಿಲ್ 5 ರಂದು ಎರಡನೇ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಮೊದಲ ಪಟ್ಟಿಯಲ್ಲಿ 90 ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ರಿಲೀಸ್ ಮಾಡಿದೆ.

ಹಾಸನ ಜಿದ್ದಾ ಜಿದ್ದಿನಲ್ಲಿ ಎರಡನೇ ಪಟ್ಟಿ ಬಿಡುಗಡೆ ವಿಳಂಬ:
ತೀವ್ರ ಕುತೂಹಲ ಮೂಡಿಸಿದ್ದ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಏಪ್ರಿಲ್ 1 ರಂದು ನಡೆದ ಸಂಧಾನ ಸಭೆ ವಿಫಲವಾಗಿದೆ. ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್‌ ಕೈತಪ್ಪಿದೆ.

Tap to resize

Latest Videos

 ಅಗತ್ಯ ಬಿದ್ದರೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಬಿಜೆಪಿಗೂ ಬೆಂಬಲ : ಜನಾರ್ದನ ರೆಡ್ಡಿ

ಪದ್ಮನಾಭ ನಗರದ ಮನೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಗೌಡರು ತಮ್ಮ ನಿಲುವು ವ್ಯಕ್ತಪಡಿಸಿದ ಬಳಿಕ ಆಕ್ರೋಶಗೊಂಡ ಭವಾನಿ ಮತ್ತು ಎಚ್‌.ಡಿ.ರೇವಣ್ಣ ಮುನಿಸಿಕೊಂಡು ಸಭೆಯ ಅರ್ಧದಲ್ಲೇ ಪ್ರತ್ಯೇಕವಾಗಿ ನಿರ್ಗಮಿಸಿದ್ದರು. ಕುಟುಂಬದವರಿಗೆ ಟಿಕೆಟ್‌ ಬೇಡ ಎಂಬ ಬಲವಾದ ನಿಲುವು ವ್ಯಕ್ತಪಡಿಸಿದ್ದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಮಾತಿಗೇ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದರು.

2028ಕ್ಕೆ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಜನಾರ್ದನ ರೆಡ್ಡಿಯ ಕೆಆರ್‌ಪಿಪಿ!

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸೋಮವಾರ ಜೆಡಿಎಸ್‌ನ ಎರಡನೇ ಪಟ್ಟಿ ಪ್ರಕಟಗೊಳ್ಳುವುದೇ? ಒಂದು ವೇಳೆ ಪ್ರಕಟಗೊಂಡರೂ ಅದರಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಹೆಸರು ಇರಲಿದೆಯೇ ಎಂಬುದು ಕುತೂಹಲಕರ ಮೂಡಿತ್ತು. ಕೊನೆಗೂ ಜೆಡಿಎಸ್‌ನ ಎರಡನೇ ಪಟ್ಟಿಪ್ರಕಟ ವಿಳಂಬವಾಗಿದೆ.

click me!