ರಾಹುಲ್‌ ಗಾಂಧಿಯಿಂದ ಆಲಸಿತನದ ರಾಜಕೀಯ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

Published : Apr 23, 2023, 02:00 AM IST
ರಾಹುಲ್‌ ಗಾಂಧಿಯಿಂದ ಆಲಸಿತನದ ರಾಜಕೀಯ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಸಾರಾಂಶ

ಇತ್ತೀಚೆಗೆ ಪಕ್ಷದ ಕೆಲ ನಾಯಕರು ಅನ್ಯ ಪಕ್ಷಗಳಿಗೆ ವಲಸೆ ಹೋಗಿದ್ದು, ಆಡಳಿತಾರೂಢ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಯಾವುದೇ ಅಡ್ಡಿಮಾಡದು ಎಂದು ಪರೋಕ್ಷವಾಗಿ ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ರಾಜೀನಾಮೆ ಮಹತ್ವದ ಬೆಳವಣಿಗೆಯಲ್ಲ ಎಂದ ರಾಜೀವ್‌ ಚಂದ್ರಶೇಖರ್. 

ನವದೆಹಲಿ(ಏ.23):  ವಿಚಿತ್ರ ಆರೋಪಗಳು ಮತ್ತು ಜನರ ಜೀವನ ಮಟ್ಟಹೆಚ್ಚಿಸುವ ಯಾವುದೇ ಅಂಶಗಳನ್ನು ಒಳಗೊಂಡಿರದ ಭರವಸೆಗಳ ಮೂಲಕ ರಾಹುಲ್‌ ಗಾಂಧಿ ಅತ್ಯಂತ ಆಲಸಿತನದ ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕಿಡಿಕಾರಿದ್ದಾರೆ. ತಮ್ಮ ಇತ್ತೀಚಿನ ಕರ್ನಾಟಕ ಭೇಟಿ ವೇಳೆ ರಾಹುಲ್‌ ಗಾಂಧಿ ಜಾತಿ ಗಣತಿ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಮತ್ತು ಮುಂಬರುವ ಚುನಾವಣೆ ಸಂಬಂಧ ಹಲವು ಭರವಸೆಗಳನ್ನು ನೀಡಿದ ಬೆನ್ನಲ್ಲೇ ಕೇಂದ್ರ ಸಚಿವರು ಈ ಮಾತುಗಳನ್ನು ಆಡಿದ್ದಾರೆ.

ಜೊತೆಗೆ ಇತ್ತೀಚೆಗೆ ಪಕ್ಷದ ಕೆಲ ನಾಯಕರು ಅನ್ಯ ಪಕ್ಷಗಳಿಗೆ ವಲಸೆ ಹೋಗಿದ್ದು, ಆಡಳಿತಾರೂಢ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಕ್ಕೆ ಯಾವುದೇ ಅಡ್ಡಿಮಾಡದು ಎಂದು ಪರೋಕ್ಷವಾಗಿ ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ರಾಜೀನಾಮೆ ಮಹತ್ವದ ಬೆಳವಣಿಗೆಯಲ್ಲ ಎಂದಿದ್ದಾರೆ.

ಕಾಂಗ್ರೆಸ್‌ ಧಿಕ್ಕರಿಸಿ ಕಮಲಕ್ಕೆ ಮತ ನೀಡಿ: ರಾಜೀವ್‌ ಚಂದ್ರಶೇಖರ್‌

ಪಿಟಿಐ ಸುದ್ದಿಸಂಸ್ಥೆಗೆ ಶನಿವಾರ ಸಂದರ್ಶನ ನೀಡಿರುವ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ‘ಈ ಬಾರಿ ಪಕ್ಷದ ಹೈಕಮಾಂಡ್‌ 73 ಹೊಸ ಮುಖಗಳಿಗೆ ಅವಕಾಶ ನೀಡಿದೆ. ಹೊಸ ತಲೆಮಾರಿನ ಈ ಬದಲಾವಣೆಯನ್ನು ರಾಜ್ಯ ಬಿಜೆಪಿ ನಾಯಕರು ಕೂಡಾ ಒಪ್ಪಿಕೊಂಡಿದ್ದಾರೆ. ರಾಜ್ಯದ ಜನತೆ ಬಿಜೆಪಿಯನ್ನು ಭವಿಷ್ಯದ ಪಕ್ಷ ಎಂದು ಗುರುತಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ ಮತ್ತು ಜನತಾದಳ ಆಲಸಿ, ಸುಳ್ಳುತನಕ್ಕೆ ಸೀಮಿತವಾಗಿವೆ’ ಎಂದು ಹೇಳಿದರು.

ಆಲಸಿ ರಾಹುಲ್‌:

ಚುನಾವಣೆ ಹೊಸ್ತಿಲಿನಲ್ಲಿ ಜಾತಿ ಗಣತಿಯ ಬಗ್ಗೆ ಮಾತನಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಟೀಕಿಸಿದ ಆರ್‌ಸಿ, ‘ನಿರುದ್ಯೋಗಿಗಳು ಹಾಗೂ ಮಹಿಳೆಯರಿಗೆ ಭತ್ಯೆ ನೀಡುವ ಭರವಸೆ ನೀಡಿರುವ ರಾಹುಲ್‌ ಗಾಂಧಿ, ರಾಜಕೀಯವಾಗಿ ಮಹತ್ವವಾದ ಒಬಿಸಿ ಸಮುದಾಯವನ್ನು ಓಲೈಸುವ ಸಲುವಾಗಿ ಜಾತಿ ಗಣತಿ ಬೇಡಿಕೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ದಶಕಗಳ ಕಾಲ ಅಧಿಕಾರದಲ್ಲಿದ್ದಾಗ ಮಾತ್ರ ಏನೂ ಮಾಡಲಿಲ್ಲ. ಕಾಂಗ್ರೆಸ್‌ನ ಆಡಳಿತವನ್ನು ಜನ ಮರೆತುಬಿಡಬೇಕು ಎಂದು ರಾಹುಲ್‌ ಬಯಸುತ್ತಿದ್ದಾರೆ. ರಾಹುಲ್‌ ಗಾಂಧಿಯದ್ದು ಆಲಸಿತನದ ರಾಜಕೀಯ’ ಎಂದು ಟೀಕಿಸಿದರು.

ಬಿಜೆಪಿಯೇ ಭವಿಷ್ಯ:

ಕರ್ನಾಟಕದ ಭವಿಷ್ಯವಾಗಿ ಬಿಜೆಪಿಯನ್ನು ಗುರುತಿಸಲಾಗುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಆಲಸ್ಯ, ಸುಳ್ಳು ಭರವಸೆಗಳಿಗೆ ಸೀಮಿತವಾಗಿವೆ. ಕಾಂಗ್ರೆಸ್‌ ತಾನು ಅಧಿಕಾರದಲ್ಲಿದ್ದ ಪಂಜಾಬ್‌,ರಾಜಸ್ತಾನ, ಛತ್ತೀಸ್‌ಗಢದಲ್ಲೂ ಹಲವು ಭರವಸೆಗಳನ್ನು ನೀಡಿತ್ತು. ಆದರೆ ಯಾವುದನ್ನೂ ಸಹ ಪಕ್ಷ ಪೂರ್ಣಗೊಳಿಸಿಲ್ಲ ಎಂದು ಹೇಳಿದರು.

ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆ ನಷ್ಟವಲ್ಲ:

ಜಗದೀಶ್‌ ಶೆಟ್ಟರ್‌, ಲಕ್ಷಣ ಸವದಿಯಂತಹ ನಾಯಕರು ಕಾಂಗ್ರೆಸ್‌ಗೆ ಸೇರಿರುವುದರಿಂದ ಲಿಂಗಾಯಿತ ಸಮುದಾಯದ ವೋಟು ನಷ್ಟವಾಗುವುದಿಲ್ಲ. ಈ ಇಬ್ಬರು ನಾಯಕರು ಬಿಜೆಪಿಯಿಂದ ಎಲ್ಲವನ್ನೂ ಪಡೆದುಕೊಂಡಿದ್ದಾರೆ. ಖಾಸಗಿ ಆಕಾಂಕ್ಷೆಗಳು ಹೆಚ್ಚಿರುವ ಕೆಲವು ನಾಯಕರು ಕಾಂಗ್ರೆಸ್‌ ಅಥವಾ ಜೆಡಿಎಸ್‌ಗೆ ಸೇರ್ಪಡೆಯಾಗಬಹುದು. ಆದರೆ ಇದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಮೇ 13ರಂದು ಈ ನಾಯಕರು ಸೋಲಲಿದ್ದಾರೆ. ಬಿಜೆಪಿಯ ಸದಸ್ಯರಾಗಿ ದಶಕಗಳಿಂದ ಪಡೆದುಕೊಂಡಿರುವುದನ್ನು ಕಳೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಅವಮಾನ ಮಾಡಿಲ್ಲ:

ಲಿಂಗಾಯತ ನಾಯಕರಿಗೆ ಬಿಜೆಪಿ ಅವಮಾನ ಮಾಡಿದೆ ಎಂಬ ವಿಪಕ್ಷಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜ್ಯದ ಅತ್ಯಂತ ದೊಡ್ಡ ಜನಸಮುದಾಯವನ್ನು ಒಡೆದು ಆಳುವ ಬಗ್ಗೆ ಕಾಂಗ್ರೆಸ್‌ ದೊಡ್ಡ ಇತಿಹಾಸವನ್ನೇ ಹೊಂದಿದೆ. 2018ರ ಚುನಾವಣೆ ವೇಳೆ ಲಿಂಗಾಯತರು ಹಿಂದೂಗಳೇ ಅಲ್ಲ ಎಂದು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ವಾದಿಸಿದ್ದರು. ಇದು ಉತ್ತಮ ಆಡಳಿತವನ್ನು ಬೆಂಬಲಿಸುವ ಸಮುದಾಯವನ್ನು ಒಡೆದು ಆಳುವ ಕಾಂಗ್ರೆಸ್‌ನ ನೀತಿಗೆ ಪ್ರತ್ಯಕ್ಷ ಸಾಕ್ಷಿ. ಆದರೆ ಕಾಂಗ್ರೆಸ್‌ನ ಇಂಥ ಯತ್ನ ಫಲಿಸದು. 2018ರಲ್ಲಿ ಸೋಲು ಕಂಡಂತೆ ಈ ಬಾರಿಯೂ ಅವರು ಸೋಲಲಿದ್ದಾರೆ’ ಎಂದು ಭವಿಷ್ಯ ನುಡಿದರು.

ಆಂತರಿಕ ಕಲಹ:

ಕಾಂಗ್ರೆಸ್‌ ಆಂತರಿಕ ಕಲಹದಲ್ಲಿ ತೊಡಗಿದ್ದು, ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿದೆ ಮತ್ತು ಕರ್ನಾಟಕದಲ್ಲಿನ ಸೋಲು ದಕ್ಷಿಣ ಭಾರತದಲ್ಲಿ ಕೇರಳ ಹೊರತುಪಡಿಸಿ ಮತ್ತೆಲ್ಲಾ ರಾಜ್ಯಗಳಿಂದ ಹೊರಬಿದ್ದಂತೆ ಎಂಬ ಆತಂಕ ಪಕ್ಷವನ್ನು ಕಾಡುತ್ತಿದೆ ಎಂದರು.

ಸಚಿವ ರಾಜೀವ್ ಚಂದ್ರಶೇಖರ್ ಬೇಟಿಯಾದ ಕುಕ್, ಮೋದಿ ದೂರದೃಷ್ಟಿ ಪ್ರಶಂಸಿಸಿದ ಆ್ಯಪಲ್ ಸಿಇಒ!

ಡಬಲ್‌ ಎಂಜಿನ್‌ ಸಾಧನೆ:

ಕೋವಿಡ್‌ ಸಾಂಕ್ರಾಮಿಕ ಮತ್ತು ಆತ್ಯಂತ ಭೀಕರ ಪ್ರವಾಹದ ಸಮಯದಲ್ಲಿ ರಾಜ್ಯವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ ಸಾಧನೆಯು ಆಡಳಿತ ಪರ ಅಲೆಗೆ ಕಾರಣವಾಗಿದೆ. ಇದೀಗ ರಾಜ್ಯದ ಆರ್ಥಿಕತೆಯೂ ಹಾದಿಗೆ ಮರಳಿದೆ ಮತ್ತು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥಿಕತೆಯಾಗಿ ಹೊರಹೊಮ್ಮಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೋದಿ ಸರ್ಕಾರ ಗರಿಷ್ಠ ಆಡಳಿತವನ್ನು ಜಾರಿಗೆ ತಂದಿದ್ದು, ಪಕ್ಷವನ್ನು ಮತ್ತೊಮ್ಮೆ ಗೆಲುವಿನ ಮೆಟ್ಟಿಲು ಏರಿಸಲಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.

ನಿರುದ್ಯೋಗಿಗಳು ಹಾಗೂ ಮಹಿಳೆಯರಿಗೆ ಭತ್ಯೆ ನೀಡುವ ಭರವಸೆ ನೀಡಿರುವ ರಾಹುಲ್‌ ಗಾಂಧಿ, ರಾಜಕೀಯವಾಗಿ ಮಹತ್ವವಾದ ಒಬಿಸಿ ಸಮುದಾಯವನ್ನು ಓಲೈಸುವ ಸಲುವಾಗಿ ಜಾತಿ ಗಣತಿ ಬೇಡಿಕೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಆದರೆ ದಶಕಗಳ ಕಾಲ ಅಧಿಕಾರದಲ್ಲಿದ್ದಾಗ ಮಾತ್ರ ಏನೂ ಮಾಡಲಿಲ್ಲ ಅಂತ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!