ಬಿಜೆಪಿಯಿಂದ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ: ಬಸವರಾಜ ರಾಯರೆಡ್ಡಿ

By Kannadaprabha News  |  First Published May 4, 2023, 3:30 AM IST

ನೀರಾವರಿಗೆ ಕಾಂಗ್ರೆಸ್‌ ಕೊಡುಗೆ ಶೂನ್ಯ ಅನ್ನುವ ಬಿಜೆಪಿಗರೇ, ರಾಷ್ಟ್ರದಲ್ಲಿ 500 ಡ್ಯಾಂ, ರಾಜ್ಯದಲ್ಲಿ 25 ಡ್ಯಾಂ ಕಟ್ಟಿದವರು ಯಾರು, ಕೊಪ್ಪಳದಲ್ಲಿರುವ ತುಂಗಭದ್ರಾ ಡ್ಯಾಂನ್ನು ಮೋದಿ ಬಂದು ಕಟ್ಟಿದ್ದಾರಾ ಎಂದು ಟೀಕಿಸಿದ ಬಸವರಾಜ ರಾಯರೆಡ್ಡಿ 


ಕುಕನೂರು(ಮೇ.04):  ಬಿಜೆಪಿ ಜಾತಿ,ಧರ್ಮ, ಹಣ,ಹೆಂಡದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದು, ಇಡೀ ಚುನಾವಣಾ ವ್ಯವಸ್ಥೆಯನ್ನೇ ಬಿಜೆಪಿ ಹಾಳು ಮಾಡಿದೆ. ಡಾ. ಬಿ.ಆರ್‌ ಅಂಬೇಡ್ಕರ್‌ ಅವರ ಆಶಯಕ್ಕೆ ಧಕ್ಕೆ ತಂದಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು. ತಾಲೂಕಿನ ಶಿರೂರು, ಮುತ್ತಾಳ, ಬೆದವಟ್ಟಿ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ನೀರಾವರಿಗೆ ಕಾಂಗ್ರೆಸ್‌ ಕೊಡುಗೆ ಶೂನ್ಯ ಅನ್ನುವ ಬಿಜೆಪಿಗರೇ, ರಾಷ್ಟ್ರದಲ್ಲಿ 500 ಡ್ಯಾಂ, ರಾಜ್ಯದಲ್ಲಿ 25 ಡ್ಯಾಂ ಕಟ್ಟಿದವರು ಯಾರು, ಕೊಪ್ಪಳದಲ್ಲಿರುವ ತುಂಗಭದ್ರಾ ಡ್ಯಾಂನ್ನು ಮೋದಿ ಬಂದು ಕಟ್ಟಿದ್ದಾರಾ ಎಂದು ಟೀಕಿಸಿದರು.

ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಗೌರವ:

Tap to resize

Latest Videos

undefined

ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಇದ್ದಿಲ್ಲ,ಅವರು ಸ್ವತಂತ್ರ್ಯ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರೂ,ಅವರ ಪ್ರತಿಭೆ ಕಂಡು ಪ್ರಧಾನಿ ನೆಹರು ಅವರನ್ನು ಕಾನೂನು ಸಚಿವರನ್ನಾಗಿ ಮಾಡಿದರು. ಕಾಂಗ್ರೆಸ್‌ ಅಂಬೇಡ್ಕರ್‌ ಅವರನ್ನು ಗೌರವದಿಂದ ಕಂಡಿದೆ.ಆದರೆ ಬಿಜೆಪಿ ಅವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಇತಿಹಾಸ ತಿರುಚುತ್ತಿದೆ ಎಂದರು.

ಭಜರಂಗ ದಳ-ಪಿಎಫ್ಐ ನಿಷೇಧದಿಂದ ಏನು ಲಾಭ: ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ದ ಎಚ್‌ಡಿಕೆ ವ್ಯಂಗ್ಯ

ಆರ್‌ಎಸ್‌ಎಸ್‌ ಮತೀಯ ಹೋರಾಟ:

ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿಲ್ಲ. ಅದು ಬರೀ ಮತೀಯ ಕ್ರಾಂತಿ ಮಾಡಿದೆ.ಬಿಜೆಪಿಯಲ್ಲಿ ಯಾರಾದರೂ ಒಬ್ಬರೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದಾರಾ, ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದಾರಾ, ಬಿಜೆಪಿಯವರದು ವಾಮಮಾರ್ಗದ ರಾಜಕಾರಣ ಎಂದರು.

ಬಿಜೆಪಿಯವರು ಡ್ಯಾಂ ಕಟ್ಟಿದ್ದರೆ ಸನ್ಮಾನ:

1947ರ ಪೂರ್ವದಲ್ಲಿ ಭಾರತದ ಸಾಕ್ಷರತೆ 12% ಇತ್ತು,ಈಗ 80% ಆಗಿದೆ. ಆಹಾರ ಭದ್ರತಾ ಕಾಯ್ದೆಯಿಂದ ಎಲ್ಲರಿಗೂ ಆಹಾರ ಸಿಗುತ್ತಿದೆ.ಕಾಂಗ್ರೆಸ್‌ ಅವಧಿಯಲ್ಲಿ 1.5 ಕೋಟಿ ಎಕರೆ ನೀರಾವರಿ ಆಗಿದೆ. ಬಾ ಅನ್ನಿ ಮೋದಿ ಒಂದು ಡ್ಯಾಂ ಕಟ್ಟಿದ್ದಾರಾ,ಬೇಕಿದ್ದರೆ ಸಚಿವ ಹಾಲಪ್ಪ ಆಚಾರ ಹೇಳಲಿ, ನಾನೇ ಅವರಿಗೆ ಸನ್ಮಾನಿಸುವೆ ಎಂದರು.

ಡೊಂಗಿ ರಾಜಕಾರಣ:

ಬಿಜೆಪಿ ಅಧಿಕಾರಕ್ಕಾಗಿ ಡೊಂಗಿ ರಾಜಕಾರಣ ಮಾಡುತ್ತಿದೆ. ಮೋದಿ ಕಾಂಗ್ರೆಸ್‌ ಕೊಡುಗೆ ಶೂನ್ಯ ಎನ್ನುತ್ತಾರೆ. ಗೃಹ ಮಂತ್ರಿ ಅಮಿತ್‌ ಶಾ ಜಾತಿ ರಾಜಕಾರಣ ಮಾಡ್ತಾರೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಅಂದರಲ್ಲ, ಇವರು ಮಾಡಿದ್ದು ಅವರ ಖರ್ಚನ್ನು ದ್ವಿಗುಣ. ಗೊಬ್ಬರ ಬೆಲೆ ಏರಿಕೆ, ಪೆಟ್ರೋಲ್‌, ಡಿಸೇಲ್‌, ಅಡುಗೆ ಎಣ್ಣೆ, ಕಬ್ಬಿಣ ಏರಿಕೆಗೆ ಜನ ಹೈರಾಣ ಆಗಿದ್ದಾರೆ ಎಂದರು.

ಕಾಂಗ್ರೆಸ್‌ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಶಿ ಮಾತನಾಡಿ,ಸಚಿವ ಹಾಲಪ್ಪ ಆಚಾರ ಅವರು ಮೂರು ಇಲಾಖೆ ಸಚಿವರಾಗಿದ್ದರೂ ಸಹ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ. ನೂತನ ಅಂಗನವಾಡಿ ಮಂಜೂರಾತಿ ಇಲ್ಲ,ಅಂಗನವಾಡಿಗಳಿಗೆ ಕಟ್ಟಡ ಇಲ್ಲ.ಅಲ್ಲದೆ ಸಿಡಿಪಿಓ ಇಲಾಖೆಗೆ ಕಟ್ಟಡ ಇಲ್ಲ.ಅಲ್ಲದೆ ಗಣಿ ಇಲಾಖೆಯಿಂದ ಸಂಗ್ರಹವಾದ ರಾಜಧನದಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಬೇಕಿತ್ತು. ಇಲ್ಲಿ ಸಹ ಗಣಿ ಉದ್ಯಮ ಇದೆಯಲ್ಲ ಎಂದರು.

ಕೊಪ್ಪಳವನ್ನು ಶಿಕ್ಷಣ ಕಾಶಿಯನ್ನಾಗಿ ಮಾಡುವೆ: ಕರಡಿ ಸಂಗಣ್ಣ

ಕುಕನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹನುಮಂತಗೌಡ ಚಂಡೂರು, ವೀರನಗೌಡ ಪಾಟೀಲ್‌, ರಾಮಣ್ಣ ಭಜಂತ್ರಿ, ವೀರಣ್ಣ ಹಳ್ಳಿಕೇರಿ, ಬಿ.ಎಂ.ಶಿರೂರು,ಕೆರಿಬಸಪ್ಪ ನಿಡಗುಂದಿ, ದೇವಪ್ಪ ಅರಕೇರಿ, ಸುಭಾಷ ಮದಕಟ್ಟಿ, ಈಶಪ್ಪ ದೊಡ್ಮನಿ, ಸಕ್ರಪ್ಪ ಚೌಡ್ಕಿ, ಹನುಮೇಶ ಕಡೆಮನಿ, ಬಸವರಾಜ ಹಳ್ಳಿ, ಬಸವರಾಜ ಮಾಸೂರು, ಎಂ.ಎ.ದೇಸಾಯಿ, ಅಶೋಕ ತೋಟದ ಇತರರಿದ್ದರು.

ರಾಯರೆಡ್ಡಿಗೆ ದೇಣಿಗೆಗಳ ಮಹಾಪೂರ:

ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಚುನಾವಣೆಗೆ ಬೆದವಟ್ಟಿವಿಜಯನಗರದ ಅಟೋ ಚಾಲಕ ಸತ್ಯಪ್ಪ ಕಬುರ್ಗಿಎಂಬುವವರು .10 ಸಾವಿರ ಹಾಗೂ ಕದ್ರಳ್ಳಿಯಲ್ಲಿ ನಿವೃತ್ತ ಸೈನಿಕರೊಬ್ಬರು .12 ಸಾವಿರ ನೀಡಿದರು. ಹಿರೇಬೀಡಿನಾಳದಲ್ಲಿ ಕುರಿ ಮರಿ ನೀಡಿದರು.

click me!