ಸಿದ್ದು ಕ್ಷೇತ್ರಗಳನ್ನು ಅಲೆದು ಕೊನೆಗೆ ವರುಣಕ್ಕೆ ಬಂದಿದ್ದಾರೆ, ಗೆದ್ದು ತೋರಿಸಲಿ: ಶ್ರೀನಿವಾಸಪ್ರಸಾದ್‌ ಸವಾಲು

By Kannadaprabha News  |  First Published May 4, 2023, 3:00 AM IST

ನನ್ನ 50 ವರ್ಷ ರಾಜಕಾರಣದ ಜೀವನದಲ್ಲಿ ನಾನು ಹಂತ ಹಂತವಾಗಿ ಹೋರಾಟ ಮಾಡಿ ಬಂದಿದ್ದೇನೆ. ಯಾರಿಗೂ ನಾನು ತಲೆಬಾಗುವುದಿಲ್ಲ ಎಂದ ಸಂಸದ ವಿ. ಶ್ರೀನಿವಾಸಪ್ರಸಾದ್‌. 


ಮೈಸೂರು(ಮೇ.04):  ಸಿದ್ದರಾಮಯ್ಯ ಕ್ಷೇತ್ರಗಳನ್ನು ಅಲೆದು ಕೊನೆಗೆ ವರುಣಕ್ಕೆ ಬಂದಿದ್ದಾರೆ. ಗೆದ್ದು ತೋರಿಸಲಿ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್‌ ಸವಾಲು ಹಾಕಿದರು. ಮೈಸೂರಿನ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಡನಹಳ್ಳಿಯ ಶ್ರೀ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಬಿಜೆಪಿ ಎಸ್ಸಿ ಮೋರ್ಚಾ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ 50 ವರ್ಷ ರಾಜಕಾರಣದ ಜೀವನದಲ್ಲಿ ನಾನು ಹಂತ ಹಂತವಾಗಿ ಹೋರಾಟ ಮಾಡಿ ಬಂದಿದ್ದೇನೆ. ಯಾರಿಗೂ ನಾನು ತಲೆಬಾಗುವುದಿಲ್ಲ ಎಂದರು.

ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸ್ವಾತಂತ್ರ್ಯ ಬಂದ ಮೇಲೆ ದಲಿತರ ಸ್ಥಿತಿಗತಿಗಳು ಏನಿದೆ ಎಂಬುದನ್ನು ವಿಶೇಷವಾಗಿ ನರೇಂದ್ರ ಮೋದಿ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದೇನೆ. ಕಾಂಗ್ರಸ್‌ ಸರ್ಕಾರದಿಂದ ದಲಿತರಿಗೆ ಏನು ಅನುಕೂಲಗಳಾಗಿಲ್ಲ. ಸಿದ್ದರಾಮಯ್ಯ ಸ್ವಾರ್ಥ ರಾಜಕಾರಿಣಿ. ತಾವು ಮುಖ್ಯಮಂತ್ರಿಯಾಗಲು ತಮ್ಮ ಪಕ್ಷದ ಪರಮೆಶ್ವರ ಅವರನ್ನು ಸೋಲಿಸಿದರು. ದಲಿತರನ್ನು ಬೆಳೆಯಲು ಬಿಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಮಲ್ಲಿಕಾರ್ಜುನ ಖರ್ಗೆ ಹೋರಾಟಗಾರರಲ್ಲ. ಅವರು, ಅವಕಾಶವಾದಿ, ಮಲ್ಲಿಕಾರ್ಜುನ ಖರ್ಗೆ ಎಂದು ಹೋರಾಟ ಮಾಡಿ ಮೇಲೆ ಬಂದಿಲ್ಲ. ಖರ್ಗೆ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಆದರೆ, ಅಧಿಕಾರ ಇಲ್ಲದೆ ಅವರು ಬದುಕಲಾರರು ಎಂದು ಅವರು ವಾಗ್ದಾಳಿ ನಡೆಸಿದರು.

Latest Videos

undefined

ಕ್ಷೇತ್ರ ಬಿಟ್ಟು ಹೋಗೋರಿಗೆ ಮತ ಹಾಕದಿರಿ: ಸಿದ್ದರಾಮಯ್ಯ ವಿರುದ್ಧ ಅಮಿತ್‌ ಶಾ ಕಿಡಿ

ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಿ.ಎಂ. ಮಹದೇವಯ್ಯ, ನಟ ಕೆ. ಶಿವರಾಂ, ವರುಣ ಮಂಡಲ ಅಧ್ಯಕ್ಷ ವಿಜಯಕುಮಾರ್‌, ಜಿಪಂ ಮಾಜಿ ಸದಸ್ಯ ಸದಾನಂದ, ಗುರುಸ್ವಾಮಿ, ಕಾ.ಪು. ಸಿದ್ದಲಿಂಗಸ್ವಾಮಿ, ಚುನಾವಣಾ ವೀಕ್ಷಕ ಪ್ರಕಾಶ್‌, ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಂದ್ರ, ಅರಕಲವಾಡಿ ನಾಗೇಂದ್ರ, ಮುಖಂಡರಾದ ನರಸಿಂಹಮೂರ್ತಿ, ವರಹಳ್ಳಿ ನಾಗೇಂದ್ರ, ಶ್ರೀಧರ ಶಿವಯ್ಯ, ಎಂ. ಮಂಜು, ಆನಂದರಾಜು, ಬಲರಾಜು, ನರಸಿಂಹಮೂರ್ತಿ ಮೊದಲಾದವರು ಇದ್ದರು.

click me!