ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋನಲ್ಲಿ ಬದಲಾವಣೆ; ಸ್ಥಳ, ಸಮಯದ ಮಾಹಿತಿ ಇಲ್ಲಿದೆ

By Ravi Janekal  |  First Published Apr 12, 2024, 11:38 AM IST

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.14ರಂದು ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರೋಡ್‌ಶೋ ನಡೆಸಲಿರುವುದರಿಂದ ಎಸ್‌ಪಿಜಿ (ವಿಶೇಷ ಭದ್ರತಾ ವಿಭಾಗ) ತಂಡದ ಅಧಿಕಾರಿಗಳು ಗುರುವಾರ ಆಗಮಿಸಿ ಈಗಾಗಲೇ ಪರಿಶೀಲನೆ ನಡೆಸಿದ್ದಾರೆ.


ಮಂಗಳೂರು (ಏ.12): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.14ರಂದು ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರೋಡ್‌ಶೋ ನಡೆಸಲಿರುವುದರಿಂದ ಎಸ್‌ಪಿಜಿ (ವಿಶೇಷ ಭದ್ರತಾ ವಿಭಾಗ) ತಂಡದ ಅಧಿಕಾರಿಗಳು ಗುರುವಾರ ಆಗಮಿಸಿ ಈಗಾಗಲೇ ಪರಿಶೀಲನೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಹೊಣೆ ಹೊತ್ತಿರುವ ಎಸ್‌ಪಿಜಿ ತಂಡದ ಅಧಿಕಾರಿಗಳು ರೋಡ್‌ಶೋ ನಡೆಯುವ ರಸ್ತೆಯುದ್ಧಕ್ಕೂ ಕಾಲ್ನಡಿಗೆಯಲ್ಲಿ ಸಾಗಿ ಪರಿಶೀಲನೆ ನಡೆಸಿದ್ದಾರೆ. ಮೋದಿ ಅವರು ಸಾಗುವ ರೋಡ್‌ಶೋ ಮ್ಯಾಪ್‌ ಸಿದ್ಧವಾಗಿದ್ದು, ನಗರದ ಲೇಡಿಹಿಲ್‌ ನಾರಾಯಣಗುರು ವೃತ್ತದಿಂದ ಲಾಲ್‌ಬಾಗ್‌, ಪಿವಿಎಸ್‌ ವೃತ್ತದವರೆಗೆ ಮಾತ್ರ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ. ಮೊದಲು ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆವರೆಗೆ ಸುಮಾರು 2.9 ಕಿಮೀ ರೋಡ್ ಶೋ ನಿಗದಿಯಾಗಿತ್ತು ಆದರೆ ರಸ್ತೆ ಪರಿಶೀಲನೆ ನಡೆಸಿದ ಎಸ್‌ಪಿಜಿ ತಂಡ ಪಿವಿಎಸ್ ವೃತ್ತದವರೆಗೆ ಬದಲಾವಣೆ ಮಾಡಿದೆ. ಅಂದರೆ 2.9ಕಿಮೀ ಬದಲಾಗಿ 1.8 ಕಿ.ಮೀ ರೋಡ್ ಶೋ ನಡೆಸಲಿರುವ ಮೋದಿ. ಮೋದಿ ರೋಡ್‌ ಶೋ ವೇಳೆ ಸುಮಾರು 1500ಕ್ಕೂ ಹೆಚ್ಚು ಪೊಲೀಸರ ಭದ್ರತೆಗೆ ನಿಯೋಜಿಸಲಾಗುತ್ತದೆ.

Tap to resize

Latest Videos

ಲೋಕಸಭೆ ಚುನಾವಣೆ 2024: ಏ.14ರಂದು ಪ್ರಧಾನಿ ಮೋದಿ ಮಂಗಳೂರಿಗೆ

ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸಿದ ಬಳಿಕ ಸುಮಾರು 20-30 ನಿಮಿಷಗಳಲ್ಲಿ ರೋಡ್ ಶೋ ಮುಕ್ತಾಯವಾಗೋ ಸಾಧ್ಯತೆಯಿದೆ. ದ.ಕ ಜಿಲ್ಲಾ ಬಿಜೆಪಿ ಸಿದ್ದಪಡಿಸಿದ್ದ ರೂಟ್ ಮ್ಯಾಪ್ ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಏ.14ರ ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ  ನಾರಾಯಣ ಗುರು ಸರ್ಕಲ್ ಬಳಿ ಆಗಮಿಸುತ್ತಾರೆ. ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಬಳಿಕ ರೋಡ್ ಶೋ ಅರಂಭವಾಗಲಿದೆ. ಲೇಡಿಹಿಲ್ ನಾರಾಯಣ ಗುರು ಸರ್ಕಲ್ ನಿಂದ ಆರಂಭವಾಗಲಿರೋ ರೋಡ್ ಶೋ ಅಲ್ಲಿಂದ ಲಾಲ್ ಭಾಗ್ ನ ಮಂಗಳೂರು ಪಾಲಿಕೆ ಕಚೇರಿ ಎದುರು ತಲುಪಲಿದೆ. ಅಲ್ಲಿಂದ ಬಳ್ಳಾಲ್ ಭಾಗ್ ದಾಟಿ ಎಂ.ಜಿ ರಸ್ತೆಯಲ್ಲಿ ಮುಂದೆ ಸಾಗಲಿದ್ದು, ಪಿವಿಎಸ್ ಸರ್ಕಲ್ ಬಳಿ ರೋಡ್ ಶೋ ಅಂತ್ಯವಾಗಲಿದೆ.

click me!