ಚುನಾವಣೆ ಹೊತ್ತಲ್ಲಿ 'ಕೈ'ಗೆ ಮತ್ತೊಂದು ಶಾಕ್‌ : ಸದಾ ಬಿಜೆಪಿಯನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ವಕ್ತಾರ ಬಿಜೆಪಿಗೆ

By Anusha KbFirst Published Apr 12, 2024, 11:17 AM IST
Highlights

 ಲೋಕಸಭಾ ಚುನಾವಣೆ ಹೊಸ್ತಿಲ್ಲಿರುವಾಗ ಕಾಂಗ್ರೆಸ್‌ ಪಕ್ಷಕ್ಕೆ ಶಾಕ್ ಮೇಲೆ ಶಾಕ್ ಆಗುತ್ತಿದ್ದು, ಮತ್ತೊಬ್ಬ ಕಾಂಗ್ರೆಸ್ ವಕ್ತಾರರೊಬ್ಬರು ಈಗ ಕೇಸರಿ ಪಾಳಯ ಸೇರಿದ್ದಾರೆ. ಕಾಂಗ್ರೆಸ್‌ನ ವಕ್ತಾರ ರೋಹನ್ ಗುಪ್ತಾ ಬಿಜೆಪಿ ಸೇರಿದ್ದು, ಪಕ್ಷ ತೊರೆಯುವುದಕ್ಕೆ ಕಾರಣ ಹೇಳಿದ್ದಾರೆ. 

ನವದೆಹಲಿ: ಲೋಕಸಭಾ ಚುನಾವಣೆ ಹೊಸ್ತಿಲ್ಲಿರುವಾಗ ಕಾಂಗ್ರೆಸ್‌ ಪಕ್ಷಕ್ಕೆ ಶಾಕ್ ಮೇಲೆ ಶಾಕ್ ಆಗುತ್ತಿದ್ದು, ಮತ್ತೊಬ್ಬ ಕಾಂಗ್ರೆಸ್ ವಕ್ತಾರರೊಬ್ಬರು ಈಗ ಕೇಸರಿ ಪಾಳಯ ಸೇರಿದ್ದಾರೆ. ಕಾಂಗ್ರೆಸ್‌ನ ವಕ್ತಾರ ರೋಹನ್ ಗುಪ್ತಾ ಬಿಜೆಪಿ ಸೇರಿದ್ದು, ಪಕ್ಷ ತೊರೆಯುವುದಕ್ಕೆ ಕಾರಣ ಹೇಳಿದ್ದಾರೆ. ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಪಕ್ಷದ ನಾಯಕರು ತಳಮಟ್ಟದ ವಿಚಾರಗಳನ್ನು ನಿರ್ಲಕ್ಷಿಸುವಷ್ಟು ಉದ್ಧಟತನವನ್ನು ಹೊಂದಿದ್ದಾರೆ ಇದರ ಜೊತೆಗೆ ದೇಶದ ಅತ್ಯಂತ ಹಿರಿಯ ಪಕ್ಷವೆನಿಸಿರುವ ಕಾಂಗ್ರೆಸ್ ತನ್ನ ದಿಕ್ಕು ಹಾಗೂ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ.  ದುರಂಹಕಾರದ ಜೊತೆಗೆ ಜನರ ಸ್ವಾಭಿಮಾನವನ್ನು ತುಳಿಯುತ್ತಿದೆ ಎಂದು ಅವರು ದೂರಿದ್ದಾರೆ. ಆದರೆ ಎಲ್ಲೂ ಅವರು ಯಾರ ಹೆಸರನ್ನು ಯಾವೊಬ್ಬ ನಾಯಕರನ್ನು ಉಲ್ಲೇಖಿಸಿಲ್ಲ. ಆದರೆ ಅವರು ಕಾಂಗ್ರೆಸ್‌ ಪಕ್ಷದ ಸಂವಹನವನ್ನು ನಿರ್ವಹಿಸುವ ವ್ಯಕ್ತಿ ಎಂದು ಅವರು ಹೇಳಿದ್ದಾರೆ. 

ಅವರು ಅಧಿಕಾರ ವಹಿಸಿಕೊಂಡಾಗಿನಿಂದ, ಅನೇಕ ಸಮಸ್ಯೆಗಳಿದ್ದವು. ರಾಷ್ಟ್ರೀಯತೆ, ಸನಾತನ, ಆಮ್ ಆದ್ಮಿ ಪಕ್ಷದೊಂದಿಗಿನ ಮೈತ್ರಿಗಳು ಇತ್ಯಾದಿ. ನಾನು ಮತ್ತು ಇತರ ಅನೇಕರು ಈ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದೆವು. ಆದರೆ ನಾವು ಸೈನಿಕರಂತೆ ಹೋರಾಡಿದ್ದೇವೆ. ಆದರೆ ನನ್ನ ತಂದೆ ಅಸೌಖ್ಯರಾಗಿ ಆಸ್ಪತ್ರೆಯಲ್ಲಿದ್ದಾಗಲೂ ಅವರು ಸೌಜನ್ಯಕ್ಕೂ ಒಂದು ಕರೆ ಮಾಡಿಲ್ಲ, ಈ ವೇಳೆ ನಾವು ಇದು ನಿರ್ಧಾರ ಕೈಗೊಳ್ಳಬೇಕಾದ ಸಮಯ ಎಂದು ಭಾವಿಸಿದೆವು ಹಾಗೂ ಇದು ಸ್ವಾಭಿಮಾನದ ವಿಚಾರವಾಗಿದೆ ಎಂದು ಹೇಳಿದ್ದಾರೆ. 

ಬಿಜೆಪಿ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ, ಈ ಸಲ 40 ಸೀಟ್‌ಗಳನ್ನೂ ಗೆಲ್ಲಲ್ಲ: ರೋಹನ್ ಗುಪ್ತಾ

ಆದರೆ ರೋಹನ್ ಗುಪ್ತಾ ಅವರ ನಿರ್ಗಮನದ ಬಗ್ಗೆ ಕಾಂಗ್ರೆಸ್ ಇದುವರೆಗೂ ಕಾಮೆಂಟ್ ಮಾಡಿಲ್ಲ ಯಾರಾದರೂ ಪಕ್ಷ ಬಿಟ್ಟು ಹೋದಾಗಲೆಲ್ಲ ಟೀಕೆಗೆ ಒಳಗಾಗುತ್ತಾರೆ. ದುರಾಸೆಯಿಂದ ಅವನು ಹೊರಟು ಹೋದ, ಅವನಿಗೆ ಹೆದರಿಕೆ ಎಂದೆಲ್ಲಾ ಹೇಳುತ್ತಾರೆ. ಆದರೆ ಸ್ವಾಭಿಮಾನದ ವಿಚಾರದ ಬಗ್ಗೆ ಚಿಂತಿಸುವುದಿಲ್ಲ, ನಾವು ತಳಮಟ್ಟದಿಂದ  ಸಮಸ್ಯೆಯ ಬಗ್ಗೆ ಹೇಳಿದಾಗ ಅದನ್ನು ಕೇಳಬೇಕು. ಕೇಳಲು ಸಾಧ್ಯವಾಗದ ನಾಯಕರಿಗೆ ಮನ್ನಣೆ ನೀಡಬಾರದು ಎಂದು ರೋಹನ್ ಗುಪ್ತ ಕಿಡಿಕಾರಿದ್ದಾರೆ. 

ಸದಾ ಬಿಜೆಪಿ ಟೀಕಿಸುತ್ತಿದ್ದ ನೀವು ಬಿಜೆಪಿ ಸೇರಿದ್ದೇಕೆ?

ಕಾಂಗ್ರೆಸ್ ಪರವಾಗಿ ಸದಾ ಬಿಜೆಪಿಯನ್ನು ಟೀಕೆ ಮಾಡುತ್ತಿದ್ದ ನೀವು ಈಗ ಅದೇ ಪಕ್ಷವನ್ನು ಏಕೆ ಸೇರಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಗುಪ್ತಾ, ಇದು ಪಕ್ಷದ ದೀರ್ಘಾವಧಿಯ ದೂರದೃಷ್ಟಿಯಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದ ಎಲ್ಲ ವಿಚಾರಗಳ ಪರ ಇಂದು ಬೆಜೆಪಿ ನಿಂತಿದೆ. ಅದರಲ್ಲೂ ಕೇಂದ್ರೀಯ ನೀತಿಗಳು ಮತ್ತು ರಾಷ್ಟ್ರೀಯತೆಯ ಎರಡು ಪ್ರಮುಖ ಮೌಲ್ಯಗಳ ವಿಚಾರದಲ್ಲಿ ಬಿಜೆಪಿ ಸಧೃಡವಾಗಿ ನಿಂತಿದೆ. ಈ ವಿಚಾರಗಳೇ 60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತಕ್ಕೆ ಸಹಾಯ ಮಾಡಿವೆ ಎಂದು ಗುಪ್ತಾ ಹೇಳಿದರು.

ಇದು ಕಾಂಗ್ರೆಸ್ ಮಾಡಿದ ದೊಡ್ಡ ತಪ್ಪು

ಆದರೆ ಕಳೆದ ಎರಡು ವರ್ಷಗಳಲ್ಲಿ, ಈ ಮೌಲ್ಯಗಳನ್ನು ಪಕ್ಷದ ಎಡಪಂಥೀಯ ವಿಚಾರಗಳು ಹಿಂದಿಕ್ಕಿವೆ, ಇದು ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಹಾಜರಾಗಲು ಕಾಂಗ್ರೆಸ್‌ನ ನಿರಾಕರಣೆ ಮತ್ತು ದೇಶದ ಬೆಳವಣಿಗೆಗೆ ಕಾರಣವಾದ ಉದ್ಯಮಿಗಳ ಟೀಕೆಗೆ ಮೂಲ ಕಾರಣವಾಗಿದೆ. ಉದಾರವಾದವನ್ನು ಜಾರಿಗೆ ತಂದು ದೇಶದ ಆರ್ಥಿಕ ಬೆಳವಣಿಗೆಗೆ  ಎಡೆಮಾಡಿಕೊಟ್ಟ ಕಾಂಗ್ರೆಸ್ ನಿಲುವನ್ನು ಉಲ್ಲೇಖಿಸಿದ ಅವರು ಈಗ ಇರುವಂತೆ ಕಾಂಗ್ರೆಸ್  ಯಾವತ್ತೂ ಇರಲಿಲ್ಲ ಎಂದು ಹೇಳಿದ್ದಾರೆ. 

ದೇಗುಲಗಳ ಕಡೆಯಿಂದ ಮುಖ ತಿರುಗಿಸಿದ್ದು ಕೂಡ ಪಕ್ಷದ ದೊಡ್ಡ ತಪ್ಪು, ಲಕ್ಷಾಂತರ ಜನರ ನಂಬಿಕೆ ಭಾವನೆಗಳು ಭಾಗಿಯಾಗಿರುವ ವಿಚಾರಗಳನ್ನು ಯಾವತ್ತೂ ನಿರ್ಲಕ್ಷಿಸಬಾರದು. ನೀವು ಉದ್ಟಾಟನೆಯನ್ನು ನಿರ್ಲಕ್ಷಿಸಬಹುದು ಆದರೆ ನೀವು ಆ ಸ್ಥಳಕ್ಕೆ ಮತ್ತೊಂದು ದಿನ ಸುಲಭವಾಗಿ ಭೇಟಿ ನೀಡಬಹುದು ಎಂದು ಅವರು ಹೇಳಿದರು. 

ಪಕ್ಷದಿಂದ ನನ್ನ ಉಚ್ಛಾಟಿಸಲಿ ಎಂದು ಕಾಯುತ್ತಿದ್ದೇನೆ: ಈಶ್ವರಪ್ಪ

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಅವರು ದೇವಾಲಯ ಉದ್ಘಾಟನಾ ಆಹ್ವಾನವನ್ನು ತಿರಸ್ಕರಿಸಿದ್ದರೂ, ಪಕ್ಷವು ಯಾವುದೇ ನಾಯಕರ ಭೇಟಿಯನ್ನು ನಿಷೇಧಿಸಿರಲಿಲ್ಲ. ಹೀಗಾಗಿ ಉತ್ತರ ಪ್ರದೇಶದ ಬೆರಳೆಣಿಕೆಯ ನಾಯಕರನ್ನು ಹೊರತುಪಡಿಸಿ, ಕೆಲವರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುವ ಅಭ್ಯಾಸ ಹೊಂದಿದ್ದರೂ ಕಾಂಗ್ರೆಸ್‌ ಏಕೆ ಈ ರೀತಿ ಮಾಡಿತ್ತು ಎಂದು ಕೇಳಿದಾಗ ಪ್ರತಿಕ್ರಿಯಿಸಿದ ಗುಪ್ತಾ, ರಾಹುಲ್ ಗಾಂಧಿ ತಮ್ಮ ಸಲಹೆಗಾರರ ಸಲಹೆ ಪಡೆಯುತ್ತಾರೆ. ಯಾವಾಗಲೂ ಒಬ್ಬರು ಸರಿಯಾದ ಸಲಹೆಗಾರರನ್ನು ಆರಿಸಬೇಕು. ಎಂದಿಗೂ ಚುನಾವಣೆಗೆ ಸ್ಪರ್ಧಿಸದ ವ್ಯಕ್ತಿ ಸಲಹೆಗಾರರಾದರೇ ಅವರೆಷ್ಟು ಸರಿಯಾಗಿ ಸಲಹೆ ನೀಡುತ್ತಾರೆ.  ಅವರಿಗೆ ತಳಮಟ್ಟದ ಸಮಸ್ಯೆಗಳು ತಿಳಿದಿಲ್ಲಎಂದು ಗುಪ್ತಾ ಹೇಳಿದರು.

ಬಿಜೆಪಿ ಸೇರಿರುವ ಕಾಂಗ್ರೆಸ್ ವಕ್ತಾರ ರೋಹನ್ ಗುಪ್ತಾ ಅವರು ಬಿಜೆಪಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಟೀಕಿಸುತ್ತಾ ಬಂದವರು. ಈ ಹಿನ್ನೆಲೆಯಲ್ಲಿ ನೀವು ಬಿಜೆಪಿಯನ್ನು ನಿಂದಿಸಿದ ಟ್ವಿಟ್‌ಗಳನ್ನು ಅಳಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು  ನನ್ನ ಗತದ ಬಗ್ಗೆ ನನಗೆ ನಾಚಿಕೆ ಇಲ್ಲ, ನಾನು 15 ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ, ಆದರೆ ನನ್ನ ದೃಷ್ಟಿ ಅಥವಾ ಧ್ಯೇಯೋದ್ದೇಶದ ಬಗ್ಗೆ ಪಕ್ಷವೂ ಖುಷಿ ಪಟ್ಟಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಅವರು ಹೇಳಿದರು. 

click me!