‘I.N.D.I.A.’ ಮೈತ್ರಿಕೂಟದ ಮರು ನಾಮಕರಣ ಮಾಡಿದ ಪ್ರಧಾನಿ: ಮೋದಿ ಇಟ್ಟ ಹೊಸ ಹೆಸರು ಹೀಗಿದೆ ನೋಡಿ..

By BK Ashwin  |  First Published Aug 4, 2023, 10:53 AM IST

ತಮ್ಮ ಮೈತ್ರಿಕೂಟವನ್ನು ‘I.N.D.I.A.’ ಎಂದು ಕರೆದುಕೊಳ್ಳುವ ಪ್ರತಿಪಕ್ಷಗಳ ಮೇಲೆ ಮೋದಿ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ಮೈತ್ರಿಕೂಟಕ್ಕೆ ‘I.N.D.I.A.’ ಎಂದು ಕರೆಯದೆ "ಘಮಾಂಡಿಯಾ" (ಅಹಂಕಾರ) ಎಂಬ ಹಿಂದಿ ಪದವನ್ನು ನೀಡಿದ್ದಾರೆ.


ನವದೆಹಲಿ (ಆಗಸ್ಟ್‌ 4, 2023): ಪ್ರಧಾನಿ ನರೇಂದ್ರ ಮೋದಿ ‘I.N.D.I.A.’ ಎಂಬ ಹೆಸರು ಇಟ್ಟುಕೊಂಡಿರುವ ವಿರೋದ ಪಕ್ಷದ ಮತ್ರಿಕೂಟಕ್ಕೆ ಹೊಸ ಹೆಸರು ನೀಡಿದ್ದಾರೆ. ವಿರೋಧ ಪಕ್ಷದ ಮೈತ್ರಿಯನ್ನು ನಿಭಾಯಿಸಲು ಹೊಸ ತಂತ್ರವನ್ನು ಸೂಚಿಸಿದ್ದಾರೆ. ಗುರುವಾರ ಬಿಹಾರದ ಮಿತ್ರಪಕ್ಷಗಳನ್ನು ಭೇಟಿಯಾದಾಗ ಹಿಂದಿ ಪದದ ಈ ಹೆಸರು ಇಟ್ಟಿದ್ದಾರೆ. 

ತಮ್ಮ ಮೈತ್ರಿಕೂಟವನ್ನು ‘I.N.D.I.A.’ ಎಂದು ಕರೆದುಕೊಳ್ಳುವ ಪ್ರತಿಪಕ್ಷಗಳ ಮೇಲೆ ಮೋದಿ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷಗಳ ಮೈತ್ರಿಕೂಟಕ್ಕೆ ‘I.N.D.I.A.’ ಎಂದು ಕರೆಯದೆ "ಘಮಾಂಡಿಯಾ" (ಅಹಂಕಾರ) ಎಂಬ ಹಿಂದಿ ಪದವನ್ನು ನೀಡಿದ್ದಾರೆ. ಹಿಂದಿನ ಯುಪಿಎ ಅಥವಾ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ನು ದಾಖಲೆಯನ್ನು ವೈಟ್‌ವಾಷ್‌ ಮಾಡಲು  ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಮರುನಾಮಕರಣ ಮಾಡಲು ಪ್ರಯತ್ನಿಸುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

Tap to resize

Latest Videos

ಇದನ್ನು ಓದಿ: ಬೆಂಗಳೂರು ಅಭಿವೃದ್ಧಿಗೆ ಹಣವಿಲ್ಲ ಎಂದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

"ಅವರು ಬಡವರ ವಿರುದ್ಧ ಹೇಗೆ ಸಂಚು ರೂಪಿಸಿದರು ಎಂಬುದನ್ನು ಮರೆಮಾಚಲು ಅವರು ತಮ್ಮ ಹೆಸರನ್ನು ಯುಪಿಎಯಿಂದ ‘I.N.D.I.A.’ ಗೆ ಬದಲಾಯಿಸಿದ್ದಾರೆ. ‘I.N.D.I.A. ಎಂಬ ಹೆಸರು ತಮ್ಮ ದೇಶಪ್ರೇಮವನ್ನು ತೋರಿಸಲು ಅಲ್ಲ, ಆದರೆ ದೇಶವನ್ನು ದೋಚುವ ಉದ್ದೇಶದಿಂದ" ಎಂದು ಪ್ರಧಾನಿ ಮೋದಿ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ, 26 ವಿರೋಧ ಪಕ್ಷಗಳು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ‘I.N.D.I.A.’  ಅಥವಾ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ ಎಂಬ ಹೊಸ ಹೆಸರಿನಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಎದುರಿಸಲು ನಿರ್ಧರಿಸಿದವು. ಈ ಹೆಸರು ಆಕ್ರಮಣಕ್ಕೊಳಗಾಗುತ್ತಿರುವ "ಭಾರತದ ಕಲ್ಪನೆ" ಗಾಗಿ ತಮ್ಮ ಹೋರಾಟವನ್ನು ಸಂಕೇತಿಸುತ್ತದೆ ಎಂದು ವಿಪಕಷ್ ಮೈತ್ರಿಕೂಟ ಹೇಳಿಕೊಂಡಿತ್ತು.

"NDA ಮತ್ತು I.N.D.I.A.’  ನಡುವೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ನಡುವೆ, ಅವರ (ಬಿಜೆಪಿ) ಸಿದ್ಧಾಂತ ಮತ್ತು ಭಾರತದ ನಡುವೆ ಹೋರಾಟವಿದೆ. ಯಾರಾದರೂ I.N.D.I.A. ವಿರುದ್ಧ ನಿಂತಾಗ, ಯಾರು ಗೆಲ್ಲುತ್ತಾರೆ ಎಂದು ನಿಮಗೆ ತಿಳಿದಿದೆ" ಎಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಇದನ್ನೂ ಓದಿ: ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ ಅವರ ಆಧಾರ್‌ ಕಾರ್ಡ್‌ಗಳನ್ನೇ ತಿರುಚಿ ದುರುಪಯೋಗ ಮಾಡ್ಕೊಂಡ ಭೂಪ!


ನಿನ್ನೆಯ ಸಭೆಯಲ್ಲಿ, ಪ್ರಧಾನಿ ಮೋದಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಂಸದರಿಗೆ ಜಾತಿ ಆಧಾರಿತ ರಾಜಕೀಯವನ್ನು ಬಿಟ್ಟು ಮೇಲೆ ಬರಲು ಮತ್ತು "ಇಡೀ ಸಮಾಜಕ್ಕೆ ನಾಯಕರಾಗಲು" ಸಲಹೆ ನೀಡಿದರು.ಈ ಮಧ್ಯೆ, ಕಳೆದ ವರ್ಷ ಎನ್‌ಡಿಎ ತೊರೆದು ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜತೆ ಹೋದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉಲ್ಲೇಖಿಸಿದ ಪ್ರಧಾನಿ, ಸ್ಥಿರ ಸರ್ಕಾರಕ್ಕಾಗಿ ಬಿಜೆಪಿಯ ದೊಡ್ಡತನಕ್ಕೆ ಅವರು ಉದಾಹರಣೆ ಎಂದು ಹೇಳಿದರು. "ನಿತೀಶ್ ಕುಮಾರ್ ಅವರು ಕಡಿಮೆ ಸ್ಥಾನಗಳನ್ನು ಹೊಂದಿದ್ದರಿಂದ ಮುಖ್ಯಮಂತ್ರಿಯಾಗಲು ಅರ್ಹರಾಗಿರಲಿಲ್ಲ. ಆದರೂ ಬಿಜೆಪಿ ಅವರನ್ನು ಮುಖ್ಯಮಂತ್ರಿ ಮಾಡಿದೆ. ಇದು ಎನ್‌ಡಿಎ 'ತ್ಯಾಗ ಭಾವನೆ' (ತ್ಯಾಗ)" ಎಂದು ಅವರು ಹೇಳಿದರು.

ಹಾಗೆ, ಅಕಾಲಿ ದಳವನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದಾಗಿ ಮೈತ್ರಿಕೂಟ ತೊರೆದಿದ್ದಾರೆ ಎಂದೂ ಹೇಳಿದರು. ಸರ್ಕಾರದ ಯೋಜನೆಗಳನ್ನು "ಎನ್‌ಡಿಎ ಸರ್ಕಾರದ ಯೋಜನೆಗಳು" ಎಂದು ವಿವರಿಸಲು ಸಂಸದರಿಗೆ ಪ್ರಧಾನಿ ಸಲಹೆ ನೀಡಿದರು ಮತ್ತು ಎನ್‌ಡಿಎ ಮಾತ್ರ ಸ್ಥಿರ ಸರ್ಕಾರವನ್ನು ನೀಡುತ್ತದೆ ಎಂದೂ ಹೇಳಿದರು. ಈ ವೇಳೆ, ಸಂಸದರಿಗೆ ಕಾರ್ಯಗಳನ್ನು ನಿಯೋಜಿಸಿದ ಮೋದಿ, ಎನ್‌ಡಿಎ ಕೊಡುಗೆಗಳನ್ನು ಪ್ರಚಾರ ಮಾಡಲು ಮತ್ತು ಹೈಲೈಟ್ ಮಾಡಲು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳಲು ಸಲಹೆ ನೀಡಿದರು.

ಇದನ್ನೂ ಓದಿ: ಆಕ್ಸಿಜನ್‌ ಮಾಸ್ಕ್‌ ಧರಿಸಿದ್ದ ಸೋನಿಯಾ ಗಾಂಧಿ: ಕಾಂಗ್ರೆಸ್‌ ನಾಯಕಿ ಬಳಿ ತೆರಳಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

click me!