Assembly election: ಜೆಡಿಎಸ್‌ ಬಹುಮತದೊಡನೆ ಅಧಿಕಾರಕ್ಕೆ ಬರಲು ಸಹಕರಿಸಿ: ಶಾಸಕ ಕೆ. ಮಹದೇವ್‌ ಮನವಿ

By Kannadaprabha NewsFirst Published Feb 3, 2023, 10:10 AM IST
Highlights

ರಾಜ್ಯದ ಅಭಿವೃದ್ಧಿಗಾಗಿ ಜೆಡಿಎಸ್‌ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಮತದಾರರು ಸಹಕರಿಸಬೇಕು ಎಂದು ಶಾಸಕ ಕೆ. ಮಹದೇವ್‌ ಹೇಳಿದರು.ತಾಲೂಕಿನ ಚೌತಿ ಮಾಲಂಗಿ ಹಾಗೂ ಮುತ್ತೂರು ಗ್ರಾಪಂ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪಿರಿಯಾಪಟ್ಟಣ (ಫೆ.3) : ರಾಜ್ಯದ ಅಭಿವೃದ್ಧಿಗಾಗಿ ಜೆಡಿಎಸ್‌ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಮತದಾರರು ಸಹಕರಿಸಬೇಕು ಎಂದು ಶಾಸಕ ಕೆ. ಮಹದೇವ್‌ ಹೇಳಿದರು.

ತಾಲೂಕಿನ ಚೌತಿ ಮಾಲಂಗಿ ಹಾಗೂ ಮುತ್ತೂರು ಗ್ರಾಪಂ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನ ಸೇರಿದಂತೆ ಹಲವು ಜನಪರ ಯೋಜನೆ ಜಾರಿಗೊಳಿಸಲಾಗಿತ್ತು. ಇದನ್ನು ಸಹಿಸದ ಕಾಂಗ್ರೆಸ್ಸಿಗರು ಕೋಟ್ಯಾಂತರ ಹಣ ಪಡೆದು ಸರ್ಕಾರ ಬೀಳಿಸಿದರು. ನಾವು ಬೇಡ ಎಂದರು ಕುಮಾರಸ್ವಾಮಿ ಅವರು ಕಾಂಗ್ರೆಸಿಗರ ಜತೆ ಸೇರಿ ಸರ್ಕಾರ ರಚಿಸಿ ಇರಿಸು ಮುರಿಸು ಉಂಟಾಯಿತು ಎಂದರು.

Akshayaaahara: ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ?

ಶಾಸಕರು ಜನರ ಸೇವಕರಾಗಿ ಕೆಲಸ ಮಾಡಬೇಕು. ಆದರೆ ಹಿಂದೆ ತಾಲೂಕಿನಲ್ಲಿ ಅಧಿಕಾರ ಅನುಭವಿಸಿದವರು ಜನರ ಮಧ್ಯೆ ಇರದೆ ವರ್ಷಕ್ಕೊಮ್ಮೆ ಜನಗಳ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ನಾನು ಪ್ರತಿನಿತ್ಯ ತಮ್ಮ ಸೇವಕನಾಗಿ ಸುಲಭವಾಗಿ ಸಾರ್ವಜನಿಕರ ಸೇವೆಗೆ ಸಿಗುತ್ತಿದ್ದೇನೆ. ನನ್ನಂತಹ ಶಾಸಕನನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸದಿದ್ದರೆ ನಿಮಗೆ ನೀವೇ ಮೋಸ ಮಾಡಿಕೊಂಡಂತೆ. ವಿರೋಧಿಗಳ ವದಂತಿ ನಂಬದೆ ಅಪಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್‌ ಕಾರ್ಯಕರ್ತರ ಬಾಯಿ ಮುಚ್ಚಿಸುವ ಕೆಲಸವನ್ನು ಜೆಡಿಎಸ್‌ ಕಾರ್ಯಕರ್ತರು ಮಾಡಬೇಕು ಎಂದರು.

ಮೈಮುಲ್‌ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ರಾಜ್ಯದ ರೈತರ ಪರವಾಗಿ ಹೋರಾಟ ಮಾಡಿ ಪಕ್ಷ ಸಂಘಟನೆಯಲ್ಲಿ ಸದಾ ತೊಡಗಿರುವ ಬಡವರ ದಲಿತರ ಪರವಾಗಿ ಧ್ವನಿ ಎತ್ತುವ ನಾಯಕರಾದ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಈ ತಾಲೂಕಿನಲ್ಲಿ ಕೆ. ಮಹದೇವ್‌ ಅವರನ್ನು ಗೆಲ್ಲಿಸಲು ನಾವೆಲ್ಲರೂ ಪಣತೊಡಬೇಕು ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾರ್ಯಕರ್ತರು ಬೈಕ್‌ ಮೆರವಣಿಗೆ ನಡೆಸಿ ಶಾಸಕ ಕೆ. ಮಹದೇವ್‌ ಅವರನ್ನು ಮಂಗಳವಾದ್ಯ ಸಹಿತ ಮಹಿಳೆಯರ ಪೂರ್ಣ ಕುಂಭದೊಂದಿಗೆ ಜೈಕಾರ ಕೂಗಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದರು. ಮೈಮುಲ್‌ ನಿರ್ದೇಶಕ ಎಚ್‌.ಡಿ. ರಾಜೇಂದ್ರ, ಮುಖಂಡರಾದ ರಾಮಚಂದ್ರ, ಎಸ್‌. ರಾಮು ಮಾತನಾಡಿದರು.

ಪರೋಕ್ಷ ತೆರಿಗೆ ಮೂಲಕ ಜನ ಸಾಮಾನ್ಯರಿಗೆ ವಿಷ ನೀಡಿದೆ: ಎಚ್‌.ಸಿ. ಮಹದೇವಪ್ಪ

ಈ ವೇಳೆ ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿ.ಎನ್‌. ರವಿ, ಜೆಡಿಎಸ್‌ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಪುರಸಭೆ ಅಧ್ಯಕ್ಷ ಕೆ. ಮಹೇಶ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ದೊರೆಕೆರೆ ನಾಗೇಂದ್ರ, ಮುಖಂಡ ರಘುನಾಥ್‌, ಗ್ರಾಪಂ ಅಧ್ಯಕ್ಷೆ ಗೌರಿ, ಜ್ಯೋತಿ ನಟೇಶ್‌, ಉಪಾಧ್ಯಕ್ಷ ಲಕ್ಷ್ಮಣ್‌ ಪಟೇಲ…, ಮಾಜಿ ಉಪಾಧ್ಯಕ್ಷ ರವಿಚಂದ್ರ ಬೂದಿತಿಟ್ಟು, ಶಿವರಾಜು, ಸುರೇಶ್‌, ಹೇಮಂತ್‌, ಕರಡಿಪುರ ಕುಮಾರ್‌, ಜಿ. ಶಂಕರ್‌, ತಿಮ್ಮನಾಯಕ ಮತ್ತು ಕಾರ್ಯಕರ್ತರು ಇದ್ದರು.

click me!