ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಸಮಾಜವಾದಿ ಪಾರ್ಟಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ವಿ.ಜಿ. ಪರಶುರಾಮ್ ಕರಪತ್ರಗಳಲ್ಲಿ ದೇವರ ಫೋಟೋ ಮುದ್ರಿಸಿ ನೀತಿ ಸಂಹಿತಿ ಉಲ್ಲಂಘಿಘಿಸಿದ್ದಾರೆ.
ಸೊರಬ (ಏ.21) : ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಸಮಾಜವಾದಿ ಪಾರ್ಟಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ವಿ.ಜಿ. ಪರಶುರಾಮ್ ಕರಪತ್ರಗಳಲ್ಲಿ ದೇವರ ಫೋಟೋ ಮುದ್ರಿಸಿ ನೀತಿ ಸಂಹಿತಿ ಉಲ್ಲಂಘಿಘಿಸಿದ್ದಾರೆ.
ಚುನಾವಣೆಗೆ ಗುರುವಾರ ನಾಮಪತ್ರ(Nomination) ಸಲ್ಲಿಸುವ ಮೆರವಣಿಗೆ ವೇಳೆ ಸಮಾಜವಾದಿ ಪಾರ್ಟಿ ಅಭ್ಯರ್ಥಿ ವಿ.ಜಿ. ಪರಶುರಾಮ್(Samajwadi Party candidate V.G. Parashuram) ಕರಪತ್ರ ಹಂಚಿದ್ದಾರೆ. ಈ ಕರಪತ್ರದಲ್ಲಿ ದೇವರ ಫೋಟೋ ಮುದ್ರಿಸಲಾಗಿದೆ. ಇದು ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದೆ.
ಸಂಘಟನೆ ಮತ್ತು ಈಶ್ವರಪ್ಪ ಹೇಗೋ ಹಾಗೆಯೇ ನಾನು ಮತ್ತು ಸಂಘಟನೆ: ಎಸ್ ಎನ್ ಚನ್ನಬಸಪ್ಪ
ಸಮಾಜವಾದಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿದೆ. ಪ್ರಚಾರದ ಕರಪತ್ರದಲ್ಲಿ ಚಂದ್ರಗುತ್ತಿಯ ಶ್ರೀ ರೇಣುಕಾಂಬೆ ಮತ್ತು ಪರಮೇಶ್ವರ ದೇವರುಗಳ ಪೋಟೋವನ್ನು ಬಳಸಿ ಮುದ್ರಿಸಿದ್ದಾರೆ. ಈ ಕರಪತ್ರದಲ್ಲಿ ಅಭ್ಯರ್ಥಿ ವಿ.ಜಿ. ಪರಶುರಾಮ್ ಭಾವಚಿತ್ರದ ಜೊತೆಗೆ ಸಮಾಜವಾದಿ ಪಾರ್ಟಿಯ ಹಿರಿಯ ನಾಯಕ ಮುಲಾಯಮ್ ಸಿಂಗ್ ಯಾದವ್, ರಾಷ್ಟಾ್ರಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಜಿಲ್ಲೆ ಮತ್ತು ರಾಜ್ಯದ ವಿವಿಧ ಗಣ್ಯರ ಚಿತ್ರಗಳನ್ನೂ ಮುದ್ರಿಸಲಾಗಿದೆ. ಇದು ಇತರೇ ಪಕ್ಷಗಳ ಕಂಗಣ್ಣಿಗೆ ಗುರಿಯಾಗಿದೆ. ಸಾರ್ವಜನಿಕರು ದೇವರ ಫೋಟೋ ಹಾಕಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ತಮ್ಮ ಮನೆ ದೇವರು ಶ್ರೀ ರೇಣುಕಾಂಬೆ ಆಗಿದ್ದರೂ ಚುನಾವಣಾ ಪ್ರಚಾರ ಸಮಯದಲ್ಲಿ ಎಂದಿಗೂ ಬಳಸಿಕೊಂಡಿಲ್ಲ. ಈ ಹಿಂದೆ ಗೋವಾ, ಕೇರಳ ಮೊದಲಾದ ರಾಜ್ಯಗಳ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಆಗಿದ್ದೆನೆಂದು ಹೇಳಿಕೊಳ್ಳುವ ವಿ.ಜಿ. ಪರಶುರಾಮ್ ಅವರಿಗೆ ದೇವರ ಫೋಟೋಗಳನ್ನು ಕರಪತ್ರಗಳಲ್ಲಿ ಅಳವಡಿಸಿಕೊಂಡು ಪ್ರಚಾರ ನಡೆಸುವುದು ನೀತಿ ಸಂಹಿತೆಗೆ ವಿರೋಧವಾಗಿದೆ ಎನ್ನುವ ವಿಚಾರ ಗಮನಕ್ಕೆ ಬಂದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಅಲ್ಲದೇ ಕರಪತ್ರದಲ್ಲಿ ಮುದ್ರಕರ ಹೆಸರು, ಪ್ರತಿಗಳೆಷ್ಟು, ಪ್ರಕಟಣಾಕಾರರ ಹೆಸರು ಈ ಯಾವ ಮಾಹಿತಿಗಳೂ ಇಲ್ಲ. ಇದರ ವಿರುದ್ಧ ಸೊರಬ ವಿಧಾನಸಭಾ ಚುನಾವಣಾಧಿಕಾರಿ ಯಾವ ಕ್ರಮ ಜರುಗಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.
ಶಿವಮೊಗ್ಗದಲ್ಲಿ ಚನ್ನಬಸಪ್ಪ ಗೆಲುವಿಗೆ ಶ್ರಮಿಸುವೆ: ಕೆ.ಎಸ್.ಈಶ್ವರಪ್ಪ
ಯಾವುದೇ ಪಕ್ಷದ ಮತ್ತು ಪಕ್ಷೇತರ ಅಭ್ಯರ್ಥಿಗಳು ಕರಪತ್ರ ಮತ್ತು ಫ್ಲೆಕ್ಸ್‌ಗಳಲ್ಲಿ ದೇವರ ಭಾವಚಿತ್ರಗಳನ್ನು ಮುದ್ರಿಸಿ ಪ್ರಚಾರ ನಡೆಸುವಂತಿಲ್ಲ. ಇದು ನೀತಿ ಸಂಹಿತೆ ಅಡಿಗೆ ಬರುತ್ತದೆ. ಈ ಬಗ್ಗೆ ಕರಪತ್ರವನ್ನು ಸಂಗ್ರಹಿಸಿ ಚುನಾವಣಾ ಪ್ರಚಾರ ಸಮಿತಿ ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗಿದೆ
- ನಾಗರಾಜ ಅಣ್ವೇಕರ್, ಪ್ರಚಾರ ಸಮಿತಿ ನೋಡಲ್ ಅಧಿಕಾರಿ
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.