40 ವರ್ಷಗಳ ಏಕತಾನತೆಯ ರಾಜಕಾರಣ ನೋಡಿರುವ ಜನತೆ ಸಹಜವಾಗಿ ಬದಲಾವಣೆ ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ರಾಷ್ಟ್ರೀಯ ಪಕ್ಷಗಳ ಎದುರು ಪ್ರಾಂತೀಯ ಪಕ್ಷ ಗೆಲುವು ಸಾಧಿಸಲಿದೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರಲ್ಲದೆ, ಜೊತೆಗೆ ಈಗಿನ ಬಿಜೆಪಿ ಅಭ್ಯರ್ಥಿ ಈಶ್ವರಪ್ಪನವರ ಪ್ರತಿರೂಪದಂತೆಯೇ ಇದ್ದು, ಈ ಹರಕು ಬಾಯಿಗೆ ಕೂಡ ಬೀಗ ಹಾಕಬೇಕಿದೆ ಎಂದು ಛೇಡಿಸಿದರು.
ಶಿವಮೊಗ್ಗ (ಏ.21) : 40 ವರ್ಷಗಳ ಏಕತಾನತೆಯ ರಾಜಕಾರಣ ನೋಡಿರುವ ಜನತೆ ಸಹಜವಾಗಿ ಬದಲಾವಣೆ ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ರಾಷ್ಟ್ರೀಯ ಪಕ್ಷಗಳ ಎದುರು ಪ್ರಾಂತೀಯ ಪಕ್ಷ ಗೆಲುವು ಸಾಧಿಸಲಿದೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್(JDS Candidate ayanur Manjunath) ಹೇಳಿದರಲ್ಲದೆ, ಜೊತೆಗೆ ಈಗಿನ ಬಿಜೆಪಿ ಅಭ್ಯರ್ಥಿ ಈಶ್ವರಪ್ಪನವರ ಪ್ರತಿರೂಪದಂತೆಯೇ ಇದ್ದು, ಈ ಹರಕು ಬಾಯಿಗೆ ಕೂಡ ಬೀಗ ಹಾಕಬೇಕಿದೆ ಎಂದು ಛೇಡಿಸಿದರು.
ಗುರುವಾರ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಅತ್ಯಂತ ಉತ್ಸಾಹದಿಂದ ಈ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಬೇಕೆಂದು ವಿಶೇಷ ತಯಾರಿ ನಡೆಸಿ, ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಈ ಬಾರಿ ಶಾಂತಿ ಸೌಹಾರ್ದತೆಗಾಗಿ ಎಲ್ಲ ಧರ್ಮೀಯರು ಸಹಕಾರ ನೀಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.
undefined
ಮಂಡ್ಯದಿಂದ ಸ್ಪರ್ಧೆ ಮಾಡಲು ನಾನೇನು ಟೂರಿಂಗ್ ಟಾಕೀಸಾ? ಹೆಚ್.ಡಿ. ಕುಮಾರಸ್ವಾಮಿ ಟಾಂಗ್
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಈಶ್ವರಪ್ಪನವರ ಪ್ರತಿರೂಪದ ವ್ಯಕ್ತಿಯೇ ಬಿಜೆಪಿ ಅಭ್ಯರ್ಥಿ:
ಈಶ್ವರಪ್ಪ(KS Eshwarappa) ಅವರ ವ್ಯಕ್ತಿತ್ವದ ಪ್ರತಿರೂಪದ ವ್ಯಕ್ತಿಯೇ ಬಿಜೆಪಿ ಅಭ್ಯರ್ಥಿ(BJP Canidate)ಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಹಿಂದೆ ಸಿದ್ದರಾಮಯ್ಯ(Siddaramaiah) ಅವರ ತಲೆ ಕೈ ಕತ್ತರಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಯಾವಾಗಲೂ ಜೇಬಲ್ಲಿ ಮಚ್ಚು ಇಟ್ಟುಕೊಂಡವರಂತೆ ಬಿಜೆಪಿ ಅಭ್ಯರ್ಥಿ ಮಾತನಾಡುತ್ತಾರೆ. ಈಶ್ವರಪ್ಪ ಅವರಂತೆಯೇ, ಒಂದು ಹಂತದಲ್ಲಿ ಈಶ್ವರಪ್ಪ ಅವರನ್ನೇ ಮೀರಿಸುವಂತೆ ಈ ಬಿಜೆಪಿ ಅಭ್ಯರ್ಥಿ ಹೇಳಿಕೆ ನೀಡುತ್ತಾರೆ. ಹೀಗಾಗಿ ಹರಕು ಬಾಯಿಗಳಿಗೆ ಹೊಲಿಗೆ ಬೀಳಬೇಕಿದೆ. ಜನರೇ ಈ ಬಾರಿ ಹರಕು ಬಾಯಿಗಳಿಗೆ ಹೊಲಿಗೆ ಹಾಕಲಿದ್ದಾರೆ. ಇದಕ್ಕೆ ನಾನು ಸೂಜಿಯಾಗುತ್ತೇನೆ ಎಂದು ಹೇಳಿದರು.
ಬಿಜೆಪಿ ಮತ್ತೊಂದು ವಿಕೆಟ್ ಪತನ, ಜೆಡಿಎಸ್ ಸೇರಿದ ಮರುಕ್ಷಣದಲ್ಲೇ ಆಯನೂರ್‌ಗೆ ಟಿಕೆಟ್!
ನನ್ನ ಎದುರಾಳಿಗಳು ಯಾರೆಂಬುದು ಮುಖ್ಯ ಅಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ನಮ್ಮ ಎದುರಾಳಿಯಾಗಿವೆ. ನನ್ನ ಎದುರಾಳಿಗಳಲ್ಲಿ ಒಬ್ಬರು ಮಸೀದಿ ಒಡೆದವರು. ಮತ್ತೊಬ್ಬರು ಮಂದಿರಕ್ಕಾಗಿ ಸಿಹಿ ಹಂಚಿದವರು. ಇವರುಗಳ ಹೆಸರನ್ನು ನಾನು ಹೇಳಬೇಕಾಗಿಲ್ಲ. ಶಿವಮೊಗ್ಗ ಕ್ಷೇತ್ರದ ಜನತೆಗೆ ಗೊತ್ತಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ತಳಮಟ್ಟದ ಸಂಘಟನೆ ಇದೆ. ಪಕ್ಷದ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಸಂಘಟನೆ ಬಲಪಡಿಸಿದ್ದಾರೆ. ಅವರ ನೇತೃತ್ವದಲ್ಲಿ ಈ ಚುನಾವಣೆಯನ್ನು ಎದುರಿಸುತ್ತೇನೆ ಎಂದರು.