ಪಕ್ಷ ಸೇರ್ಪಡೆ, ಸ್ಪರ್ಧೆ ಬಗ್ಗೆ ಜನರ ಅಭಿಪ್ರಾಯ ಕೇಳುವೆ: ಸುಮಲತಾ ಅಂಬರೀಶ್

By Kannadaprabha NewsFirst Published Mar 2, 2023, 1:40 AM IST
Highlights

ನಾನು ಯಾವ ಪಕ್ಷ ಸೇರಬೇಕು, ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಎಂಬ ಬಗ್ಗೆ ಮತ್ತೊಮ್ಮೆ ಜನಾಭಿಪ್ರಾಯ ಕೇಳುತ್ತೇನೆ. ಸಮಯ ಬಂದಾಗ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಪಕ್ಷ ಸೇರ್ಪಡೆ ನಿಲುವನ್ನು ಸ್ಪಷ್ಟಪಡಿಸದೆ ಗೊಂದಲದಲ್ಲೇ ಉಳಿಸಿದರು. 

ಮದ್ದೂರು (ಮಾ.02): ನಾನು ಯಾವ ಪಕ್ಷ ಸೇರಬೇಕು, ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಎಂಬ ಬಗ್ಗೆ ಮತ್ತೊಮ್ಮೆ ಜನಾಭಿಪ್ರಾಯ ಕೇಳುತ್ತೇನೆ. ಸಮಯ ಬಂದಾಗ ನನ್ನ ನಿರ್ಧಾರ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಪಕ್ಷ ಸೇರ್ಪಡೆ ನಿಲುವನ್ನು ಸ್ಪಷ್ಟಪಡಿಸದೆ ಗೊಂದಲದಲ್ಲೇ ಉಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ರಾಜಕಾರಣಕ್ಕೆ ಬರಬೇಕು, ಚುನಾವಣೆಗೆ ನಿಲ್ಲಬೇಕು ಎನ್ನುವುದು ಅಷ್ಟುಸುಲಭದ ವಿಚಾರ ಅಲ್ಲ. ಅದೊಂದು ದೊಡ್ಡ ನಿರ್ಧಾರ ಆಗುತ್ತೆ. ಚುನಾವಣೆಗೆ ಎಷ್ಟು ದಿನ ಎನ್ನುವುದು ಮುಖ್ಯವಲ್ಲ. 

ಗೆಲ್ಲಲು ಅನುಕೂಲಕರ ವಾತಾವರಣ ಎಷ್ಟಿದೆ ಎನ್ನುವುದು ಮುಖ್ಯ. ಹಾಗಾಗಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದು ಹೇಳಲು ಇದು ಸಮಯವಲ್ಲ. ಆ ಸಮಯ ಬಂದಾಗ ನಾನು ಎಲ್ಲರ ಸಮ್ಮುಖದಲ್ಲಿ ನಿರ್ಧಾರ ಮಾಡುತ್ತೇನೆ ಎಂದರು. ನಾನು ರಾಜಕೀಯಕ್ಕೆ ಬಂದಿರೋದೆ ಒಂದು ಆಕಸ್ಮಿಕ. ನಾನು ಪೂರ್ಣ ಪ್ರಮಾಣದಲ್ಲಿ ಇಲ್ಲೇ ಇರಲೂ ಬಂದಿಲ್ಲ. ಚುನಾವಣೆಗೆ ನಿಲ್ಲುವ, ರಾಜಕೀಯ ಪಕ್ಷ ಸೇರುವ ಅಥವಾ ಸ್ವತಂತ್ರವಾಗಿ ಉಳಿಯುವ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ ಎಂದ ಸುಮಲತಾ, ಬಿಜೆಪಿ, ಕಾಂಗ್ರೆಸ್‌ ಪಕ್ಷದಿಂದ ನನಗೆ ಆಹ್ವಾನವಿದೆ. 

Latest Videos

ಪತ್ರಕರ್ತನ ಮೇಲೆ ಎಸ್ಪಿ ರಿಷ್ಯಂತ್ ಉದ್ದ​ಟ​ತನ: ಗೃಹ ಸಚಿವರಿಗೆ ದೂರು

ಆ ಪಕ್ಷಗಳ ನಾಯಕರು ನನ್ನ ಜೊತೆ ಮಾತನಾಡಿದ್ದಾರೆ. ಯಾವ ಪಕ್ಷ ಸೇರಬೇಕೆಂಬ ಬಗ್ಗೆ ನಾನಿನ್ನೂ ನಿರ್ಧಾರ ಮಾಡಿಲ್ಲ ಎಂದರು. ದಶಪಥ ಹೆದ್ದಾರಿ ಉದ್ಘಾಟನೆ ವೇಳೆ ಸಂಸದೆಯಾಗಿ ಪ್ರಧಾನಮಂತ್ರಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನಾನು ಕೆಲವು ವಿಚಾರದಲ್ಲಿ ಬಿಜೆಪಿಗೆ ಸಪೋರ್ಚ್‌ ಮಾಡಿದ್ದೇನೆ. ಅದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಪಕ್ಷ ಸೇರುವ, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಾನು ಮತ್ತೊಮ್ಮೆ ಜನಾಭಿಪ್ರಾಯ ಕೇಳುತ್ತೇನೆ. ಒಂದು ನಿರ್ಧಾರ ತಗೊಂಡಾಗ ಅದಕ್ಕೆ ವಿರೋಧ ಇರೋದು ಸಾಮಾನ್ಯ. ಎಲ್ಲರ ಅಭಿಪ್ರಾಯವನ್ನೂ ಪಡೆಯುತ್ತೇನೆ. ನಂತರ ನನ್ನ ನಿರ್ಧಾರ ತಿಳಿಸುವುದಾಗಿ ಹೇಳಿದರು.

ಅಭಿವೃದ್ಧಿಗಾಗಿ ಬದಲಾವಣೆಯ ಅಸ್ತ್ರ ಬಳಸಿ: ಮಂಡ್ಯ ಜಿಲ್ಲೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುವ ರಾಜಕಾರಣಿಗಳು ಬೇಕು. ಅದಕ್ಕಾಗಿ ಚುನಾವಣೆ ಸಮಯದಲ್ಲಿ ಜನರು ಬದಲಾವಣೆಯ ಅಸ್ತ್ರವನ್ನು ಸರಿಯಾಗಿ ಬಳಸಿದರೆ ಸಮಸ್ಯೆಗಳ ವಿರುದ್ಧ ಜಯ ಸಾಧಿಸಬಹುದು ಎಂದು ಸಂಸದೆ ಸುಮಲತಾ ಹೇಳಿದರು. ತಾಲೂಕಿನ ಕೊಪ್ಪ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸಂಸದರ ನಿಧಿ ಅನುದಾನದ ಅಡಿ ಚಾಪುರದೊಡ್ಡಿ, ಕೌಡ್ಲೆ ಗ್ರಾಮದಲ್ಲಿ ಬಸ್‌ ತಂಗುದಾಣ, ಕೆ.ಮಲ್ಲಿಗೆರೆ, ಅವ್ವೇರಹಳ್ಳಿ, ತರೀಕೆರೆ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಂಡ್ಯ ಜಿಲ್ಲೆ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದೆ. ನೆರೆಯ ಜಿಲ್ಲೆಗಳೆಲ್ಲವೂ ಅಭಿವೃದ್ಧಿ ಸಾಧಿಸಿದ್ದರೂ ಜಿಲ್ಲೆಯ ಪ್ರಗತಿಯ ಚಿತ್ರಣ ಬದಲಾಗಿಲ್ಲ. ಪ್ರಾಮಾಣಿಕರನ್ನು, ಅಭಿವೃದ್ಧಿ ಪರ ಚಿಂತಿಸುವವರನ್ನು ಆಯ್ಕೆ ಮಾಡುವ ಸಮಯ ಬಂದಿದೆ. ಈ ಸಮಯದಲ್ಲಿ ಜನರು ಜಾಗೃತರಾಗಿ ಒಳ್ಳೆಯವರನ್ನು ಆಯ್ಕೆ ಮಾಡುವಂತೆ ಸಲಹೆ ನೀಡಿದರು. ನಮ್ಮ ಕೆಲಸದ ಬಗ್ಗೆ ನಾವು ಮಾತನಾಡಬಾರದು. ಸಾಧನೆಗಳು ನಮ್ಮ ಬಗ್ಗೆ ಮಾತನಾಡಬೇಕು. ಅದೇ ಸಿದ್ಧಾಂತ ಅಳವಡಿಸಿಕೊಂಡು ಸೇವೆ ಸಲ್ಲಿಸುವುದು ನನ್ನ ಉದ್ದೇಶ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೋವಿಡ್‌ ಮಹಾಮಾರಿಯಿಂದ ಕಠಿಣವಾದ ಸವಾಲು ಎದುರಿಸಬೇಕಾಯಿತು ಆಗ ಸಂಸದರ ನಿಧಿ ಇರಲಿಲ್ಲ. ಹಾಗಾಗಿ ಅನುದಾನ ಹಂಚಿಕೆ ಮಾಡಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಡಿಕೆ ಬೆಳೆಗಾರರನ್ನು ಬೀದಿಗೆ ತರುವ ಹುನ್ನಾರ: ಎಚ್‌ಡಿಕೆ ಆರೋಪ

ಚುನಾವಣೆ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸಹಜ. ಉಳಿದ ಅವಧಿಯಲ್ಲಿ ನಮ್ಮನ್ನು ಜನರು ಪ್ರತಿನಿಧಿಯಾಗಿ ಆಯ್ಕೆ ಮಾಡಿರುತ್ತಾರೆ ಆಗ ಕೆಲಸ ಮಾಡಬೇಕು. ಅಲ್ಲಿ ರಾಜಕಾರಣ ಮಾಡಬಾರದು. ನಾನು ಸಂಸದೆಯಾಗಿ ಆಯ್ಕೆಯಾದ ದಿನದಿಂದಲೂ ಟೀಕೆಗಳು ಬರುತ್ತಿವೆ. ನಾನು ಚುನಾವಣೆಗೆ ನಿಂತ ಸಂದರ್ಭದಿಂದಲೂ ಒಬ್ಬಂಟಿಯಾಗಿ, ಸ್ವತಂತ್ರವಾಗಿ ಹೋರಾಟ ಮಾಡಿದ ನನಗೆ ನೀವೆಲ್ಲರೂ ಆಶೀರ್ವಾದ ಮಾಡಿದ್ದೀರಿ. ನೀವು ಕೊಟ್ಟಅಧಿಕಾರ ಬಳಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

click me!