ಬಿಜೆಪಿ ಭ್ರಷ್ಟಾಚಾರಕ್ಕೆ ಜನ ಮತ ನೀಡಲ್ಲ: ಸಿದ್ದರಾಮಯ್ಯ

By Kannadaprabha News  |  First Published Feb 7, 2023, 12:49 PM IST

ನನ್ನ ಅಧಿ​ಕಾರ ಅವ​ಧಿಯಲ್ಲಿ ಲಂಚತನ ಭ್ರಷ್ಟಾಚಾರ ನಡೆದಿಲ್ಲ. ಲಂಚ ಪಡೆದಿದ್ದೇನೆ ಎಂದು ಯಾರಾದರು ಹೇಳಿದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆಂದು ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದ ಸಿದ್ದರಾಮಯ್ಯ


ಚಿಂಚೋಳಿ(ಫೆ.07):  ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಡೆಯವ ಸಾರ್ವತ್ರಿಕ ಚುನಾವಣೆಯಲ್ಲಿ ಅ​ಕಾಡದಲ್ಲಿರುವ ಬಿಜೆಪಿಗೆ ಸೋಲಿನ ಭೀತಿ ಶುರುವಾಗಿದೆ. ರಾಜ್ಯದಲ್ಲಿ ಬಿಜೆಪಿ ಭ್ರಷ್ಟಾಚಾರ ನೋಡಿ ಮತದಾರರು ಮತ ನೀಡುವುದಿಲ್ಲವೆಂದು ಅರಿತು ಪ್ರಧಾನಮಂತ್ರಿ ಮೋದಿ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವ್ಯಂಗವಾಡಿದರು. ಪಟ್ಟಣದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಕಾಂಗ್ರೆಸ್‌ ಪ್ರಜಾಧ್ವನಿಯಾತ್ರೆ ಮತ್ತು ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಚಿಂಚೋಳಿ ಮತಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು ಎರಡು ಬಾರಿ ಮುಖ್ಯಮಂತ್ರಿಗಳಾಗಿ ಒಳ್ಳೆಯ ಆಡಳಿತವನ್ನು ನೀಡಿದ್ದಾರೆ. ಮಾಜಿ ಸಚಿವ ದಿ. ದೇವೇಂದ್ರಪ್ಪ ಜಮಾದಾರ, ಮಾಜಿ ಸಚಿವ ದಿ. ವೈಜನಾಥ ಪಾಟೀಲರು ಹೋರಾಟಗಾರರು ಆಗಿದ್ದರು. ನನ್ನ ಸ್ನೇಹಿತರು ಆಗಿದ್ದರು. ಇಂತಹ ಮತಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಡಾ. ಉಮೇಶ ಜಾಧವ್‌ 2013ರಲ್ಲಿ ವೈದ್ಯರಾಗಿದ್ದಾನೆ ಎಂದು ತಿಳಿದು ಟಿಕೆಟ್‌ ಕೊಟ್ಟು ಗೆಲ್ಲಿಸಲಾಯಿತು. ಆದರೆ, ಉಮೇಶ ಜಾಧವ್‌ ಆಪರೇಶನ್‌ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಓಡಿ ಹೋದರು. ಅವರು ಶಾಸಕರಾಗಿದ್ದಾಗ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಗಾಗಿ ಕೇಳಿದ್ದಷ್ಟುಅನುದಾನವನ್ನು ನೀಡಿದ್ದೇನೆ. ಆದರೆ, ಅವರು ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿ ಸೇರಿಕೊಂಡಿದ್ದರು. ಈ ಸಲ ತಕ್ಕ ಪಾಠ ಕಲಿಸಬೇಕು ಎಂದರು.

Tap to resize

Latest Videos

undefined

ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ: ಸಿದ್ದರಾಮಯ್ಯ

ಬಂಜಾರ ಸಮಾಜಕ್ಕೆ ಕಾಂಗ್ರೆಸ್‌ ಅಧಿ​ಕಾರದಲ್ಲಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಆದರೆ, ಬಿಜೆಪಿ ಏನು ಮಾಡಲಿಲ್ಲ. ನಾವು ಮಾಡಿದ ಊಟವನ್ನು ಅವರು ಬಡಿಸಿದರು. ಬಂಜಾರ ಸಮಾಜದ ಪುಣ್ಯಕ್ಷೇತ್ರ ಸೂರೆಗೊಂಡನಕೊಪ್ಪ ಅಭಿವೃದ್ಧಿಗಾಗಿ 100 ಕೋಟಿ ರೂ, ಮತ್ತು ಲಂಬಾಣಿ ತಾಂಡಾಗಳ ಅಭಿವೃದ್ಧಿಗೋಸ್ಕರ 400ಕೋಟಿ ರು. ನೀಡಿದ್ದೇನೆ. ಸೇವಾಲಾಲ್‌ ಜಯಂತಿ ಆಚರಣೆ ಮಾಡಿರುವುದು ಕಾಂಗ್ರೆಸ್‌ ಸರಕಾರ. ಬಿಜೆಪಿ ಏನು ಮಾಡಿದೆ ಎಂದು ಟೀಕಿಸಿದರು.
ನನ್ನ ಅಧಿ​ಕಾರ ಅವ​ಧಿಯಲ್ಲಿ ಲಂಚತನ ಭ್ರಷ್ಟಾಚಾರ ನಡೆದಿಲ್ಲ. ಲಂಚ ಪಡೆದಿದ್ದೇನೆ ಎಂದು ಯಾರಾದರು ಹೇಳಿದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆಂದು ಸಿದ್ದರಾಮಯ್ಯ ಬಿಜೆಪಿಗೆ ಸವಾಲು ಹಾಕಿದರು.

ಕಾಂಗ್ರೆಸ ಮುಖಂಡ ಸುಭಾಷ ರಾಠೋಡ ಮಾತನಾಡಿ, ಚಿಂಚೋಳಿ ಮತಕ್ಷೇತ್ರದಲ್ಲಿ ಬಿಜೆಪಿ ಆಡಳಿತದಲ್ಲಿ 50% ಕಮಿಷನ್‌ ವ್ಯಾಪಾರ ನಡೆಯುತ್ತಿದೆ. ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗೆ ಕಾಂಗ್ರೆಸ್‌ ಸರಕಾರದಿಂದ 200ಕೋಟಿ ರು. ಅನುದಾನ ನೀಡಲಾಗಿತ್ತು. ಆದರೆ, ಯೋಜನೆಯಿಂದ ರೈತರ ಜಮೀನಿಗೆ ಒಂದಿಚು ನೀರು ಹರಿಯುತ್ತಿಲ್ಲ. ನಾನು ಜನರ ಮ®ಸ್ಸು ಗೆದ್ದವನು ನಾನೇ ಸಾಹುಕಾರ. ಚಿಂಚೋಳಿ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದರೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿ​ಕಾರಕ್ಕೆ ಬರುತ್ತದೆ. ನನಗೊಂದು ಅವಕಾಶ ಕೊಟ್ಟು ಗೆಲ್ಲಿಸಿರಿ ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಜಮೀರ್‌ ಅಹ್ಮದ್‌, ಪ್ರಿಯಾಂಕ್‌ ಖರ್ಗೆ, ಕೆಪಿಸಿಸಿ(ಐ)ಕಾರ್ಯಧ್ಯಕ್ಷ ಈಶ್ವರಖಂಡ್ರೆ, ಮಾಜಿ ಸಚಿವ ಡಾ . ಶರಣಪ್ರಕಾಶ ಪಾಟೀಲ, ತಿಪ್ಪಣಪ್ಪ ಕಮಕನೂರ, ಮಲ್ಲಿಕಾರ್ಜುನ ಹುಳಗೇರಾ, ಬಾಬುರಾವ ಪಾಟೀಲ, ಬಸಯ್ಯ ಗುತ್ತೆದಾರ ಮಾತನಾಡಿದರು.

ಕರ್ನಾಟಕ ವಿಧಾನಸಭೆ ಚುನಾವಣೆ 2023: ಅಫಜಲ್ಪುರ ಅಸೆಂಬ್ಲಿಯಲ್ಲಿ ಕದನ ಕುತೂಹಲ

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಳ್ಳಿ ಖಡ್ಗ ಮತ್ತು ಕುರಿ ಮತ್ತು ಕಂಬಳಿಯನ್ನು ಉಡುಗೊರೆಯಾಗಿ ನೀಡಿದರು. ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರವರ ಸಮಾ​ಧಿಗೆ ಸಿದ್ದರಾಮಯ್ಯನವರು ಪುಷ್ಪಾರ್ಚನೆ ಮಾಡಿ ನಮಸ್ಕರಿಸಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಕಾಂಗ್ರೆಸ ಪಕ್ಷದ ಸುಭಾಷ ರಾಠೋಡ, ಪ್ರಕಾಶ ರಾಠೋಡ, ಬಾಬುರಾವ ಚವ್ಹಾಣ, ದೀಪಕನಾಗ ಪುಣ್ಯಶೆಟ್ಟಿ, ಶರಣು ಮೋತಕಪಳ್ಳಿ, ಬಾಸೀತ, ಗೋಪಾಲ ಜಾಧವ್‌, ಗೋಪಾಲರಾವ ಕಟ್ಟಿಮನಿ, ಜಗನ್ನಾಥ ಕಟ್ಟಿ, ಉಮೇಶ ಗುತ್ತೆದಾರ, ಟಿಟಿ.ಭೀಮರಾವ, ದೇವಜಿ ರಾಠೋಡ, ಅಜೀತ ಪಾಟೀಲ, ಶಬ್ಬೀರ ಕೋಡ್ಲಿ, ಮಲ್ಲಿಕಾರ್ಜುನ ಕೋಲಕುಂದಿ, ಮಲ್ಲಿಕಾರ್ಜುನ ಕೋಟಪಳ್ಳಿ ಅನೇಕರು ಭಾಗವಹಿಸಿದ್ದರು.ಬ್ಲಾಕ ಕಾಂಗ್ರೆಸ ಕಮಿಟಿ ಅಧ್ಯಕ್ಷ ಬಸವರಾಜ ಮಲಿ ಸ್ವಾಗತಿಸಿದರು. ಸುರೇಶ ಬಂಟಾ, ಮಲ್ಲಿಕಾರ್ಜುನ ಪಾಟೀಲ ನಿರೂಪಿಸಿದರು. ಕೃಷ್ಣ ಬೀರಾಪೂರ ವಂದಿಸಿದರು.

click me!