Gadag: ಕೇಂದ್ರ ಸರ್ಕಾರದ ಕುಟಿಲ ನೀತಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

By Kannadaprabha News  |  First Published Feb 7, 2023, 12:22 PM IST

ದೇಶದ ಬಡ ಜನರು ತಮ್ಮ ನಿತ್ಯದ ಉಳಿತಾಯವನ್ನು ಹೂಡಿಕೆ ಮಾಡಿರುವ ಎಲ್‌ಐಸಿಯ ಹಣವನ್ನು ಸರ್ಕಾರ ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡಿದೆ ಹಾಗೂ ಸರ್ಕಾರಿ ಸ್ವಾಮ್ಯದ ಎಸ್‌ಬಿಐನಿಂದ ಸಾಲ ವಿತರಿಸಿದ್ದು, ಅದಾನಿ ಕಂಪನಿ ಕುಸಿಯುತ್ತಿದ್ದು, ಈ ಎರಡೂ ಸಂಸ್ಥೆಗಳು ಸಹ ಆತಂಕದಲ್ಲಿವೆ. ಕೇಂದ್ರ ಸರ್ಕಾರದ ಈ ಕುಟಿಲ ನೀತಿಯನ್ನು ಜನತೆ ಗಮನಿಸುತ್ತಿದ್ದು, ಇದಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದು ಶಾಸಕ ಎಚ್‌.ಕೆ. ಪಾಟೀಲ ಆರೋಪಿಸಿದರು.


ಗದಗ (ಫೆ.7) : ದೇಶದ ಬಡ ಜನರು ತಮ್ಮ ನಿತ್ಯದ ಉಳಿತಾಯವನ್ನು ಹೂಡಿಕೆ ಮಾಡಿರುವ ಎಲ್‌ಐಸಿಯ ಹಣವನ್ನು ಸರ್ಕಾರ ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡಿದೆ ಹಾಗೂ ಸರ್ಕಾರಿ ಸ್ವಾಮ್ಯದ ಎಸ್‌ಬಿಐನಿಂದ ಸಾಲ ವಿತರಿಸಿದ್ದು, ಅದಾನಿ ಕಂಪನಿ ಕುಸಿಯುತ್ತಿದ್ದು, ಈ ಎರಡೂ ಸಂಸ್ಥೆಗಳು ಸಹ ಆತಂಕದಲ್ಲಿವೆ. ಕೇಂದ್ರ ಸರ್ಕಾರದ ಈ ಕುಟಿಲ ನೀತಿಯನ್ನು ಜನತೆ ಗಮನಿಸುತ್ತಿದ್ದು, ಇದಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದು ಶಾಸಕ ಎಚ್‌.ಕೆ. ಪಾಟೀಲ ಆರೋಪಿಸಿದರು.

ಅವರು ಸೋಮವಾರ ಬೆಟಗೇರಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಎಸ್‌ಬಿಐ ಮತ್ತು ಕೆನರಾ ಬ್ಯಾಂಕ್‌ಗಳ ಮುಂದೆ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Tap to resize

Latest Videos

undefined

ಹೆಚ್.ಕೆ. ಪಾಟೀಲರಿಗೆ ಮನೆ ಇಲ್ವಾ- ಕೃಷಿ ವಿಜ್ಞಾನ ಕೇಂದ್ರದಲ್ಯಾಕೆ ಮಲ್ಕೊತಾರೆ : ಅನಿಲ್ ಮೆಣಸಿನಕಾಯಿ ಪ್ರಶ್ನೆ

ತಮ್ಮ ಆಪ್ತರಿಗೆ ಮತ್ತು ಕೆಲವೇ ಕೆಲವು ಕೋಟ್ಯಾಧಿಪತಿಗಳಿಗೆ ಲಾಭ ಮಾಡುವ ಉದ್ದೇಶದಿಂದ ಎಲ್‌ಐಸಿ ಮತ್ತು ಎಸ್‌ಬಿಐ ನಂತಹ ಸರ್ಕಾರಿ ಸಂಸ್ಥೆಗಳಲ್ಲಿ ದೇಶದ ಜನರ ಉಳಿತಾಯದ ಹಣವನ್ನು ಅದಾನಿ ಸಮೂಹದಂತಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಇದು ದೇಶದ ಹಾಗೂ ಜನಸಾಮಾನ್ಯರಿಗೆ ಮಾಡಿರುವ ದ್ರೋಹವಾಗಿದೆ ಎಂದ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಮಾಜಿ ಶಾಸಕ ಜಿ.ಎಸ್‌. ಪಾಟೀಲ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಬಡವರನ್ನು ಒಂದಿಲ್ಲೊಂದು ರೀತಿಯಲ್ಲಿ ತುಳಿತಕ್ಕೆ ಒಳಪಡಿಸುತ್ತಿದೆ. ಇದರಿಂದಾಗಿ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರು ರೋಸಿ ಹೋಗಿದ್ದಾರೆ. ಇದೊಂದು ಉಳ್ಳವರ ಪರವಾದ ಸರ್ಕಾರ, ಬಡವರ ಬಗ್ಗೆ ಇವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದ ಅವರು, ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

Assembly election:ಬಿಜೆಪಿಯ ಕುತಂತ್ರ ಬಯಲಿಗೆಳೆಯುತ್ತೇನೆ: ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಬಾಂಬ್‌ ಹಾಕಿದ ರೆಡ್ಡಿ

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಎಸ್‌. ಗಡ್ಡದೇವರಮಠ, ಡಿ.ಆರ್‌. ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ವಾಸಣ್ಣ ಕುರುಡಗಿ, ವೀರಯ್ಯ ಸೋಮನಕಟ್ಟಿಮಠ, ಉಮರ್‌ಫಾರೂಕ್‌ ಹುಬ್ಬಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

click me!