ರಾಜ್ಯದ ಜನತೆ ಕುಡಿವ ನೀರಿನ ಗ್ಯಾರಂಟಿ ಕೇಳುತ್ತಿದ್ದಾರೆ: ಮಾಜಿ ಸಿಎಂ ಬೊಮ್ಮಾಯಿ

By Kannadaprabha NewsFirst Published Mar 18, 2024, 11:21 AM IST
Highlights

ರಾಜ್ಯದ ಜನತೆ ನಮಗೆ ಯಾವ ಗ್ಯಾರಂಟಿಗಳು ಬೇಡ, ಸದ್ಯ ಕುಡಿಯುವ ನೀರಿನ ಗ್ಯಾರಂಟಿ ಕೊಡಿ ಅಂತ ಕೇಳುತ್ತಿದ್ದಾರೆ. ನೀರು ನೀಡದ ಸರಕಾರದ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಜನ ಉತ್ತರ ನೀಡುತ್ತಾರೆ ಹಾವೇರಿ-ಗದಗ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. 

ಹಿರೇಕೆರೂರ (ಮಾ.18): ರಾಜ್ಯದ ಜನತೆ ನಮಗೆ ಯಾವ ಗ್ಯಾರಂಟಿಗಳು ಬೇಡ, ಸದ್ಯ ಕುಡಿಯುವ ನೀರಿನ ಗ್ಯಾರಂಟಿ ಕೊಡಿ ಅಂತ ಕೇಳುತ್ತಿದ್ದಾರೆ. ನೀರು ನೀಡದ ಸರಕಾರದ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಜನ ಉತ್ತರ ನೀಡುತ್ತಾರೆ ಹಾವೇರಿ-ಗದಗ ಲೋಕಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಮಾಜಿ ಸಚಿವ ಬಿ.ಸಿ. ಪಾಟೀಲ ಗೃಹ ಕಚೇರಿಯಲ್ಲಿ ಹಿರೇಕೆರೂರ-ರಟ್ಟಿಹಳ್ಳಿ ತಾಲೂಕು ಬಿಜೆಪಿ ಕಾರ್ಯಕರ್ತರೊಂದಿಗೆ ನಡೆದ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ನಾಯಕರು, ಶಾಸಕರು ಜನರಿಗೆ ಮುಖಾ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. ಬರಗಾಲ ಬಂದಿದೆ. ಕುಡಿಯುವ ನೀರಿಗೆ ಯಾವುದೇ ಯೋಜನೆ ರೂಪಿಸಿಲ್ಲ, ರಾಜ್ಯದಲ್ಲಿ ೮೦೦ ಜನರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅವರ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಬರಿ ಸುಳ್ಳು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸುವಂತ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಒಂದು ಬಾರಿ ಮೋಸ ಮಾಡಬಹುದು. ಪದೆ ಪದೆ ಮತದಾತರಿಗೆ ಮೋಸ ಮಾಡಲು ಸಾಧ್ಯವಿಲ್ಲ. ಈ ಚುನಾವಣೆಯಲ್ಲಿ ಗ್ಯಾರಂಟಿಗಳ ಕೆಲಸ ನಡೆಯಲ್ಲ.

ಒಬಿಸಿ ವೋಟ್‌ಬ್ಯಾಂಕ್ ಮಾಡಿಕೊಳ್ಳುವ ಕಾಂಗ್ರೆಸ್‌ ಹುನ್ನಾರ ಫಲಿಸುವುದಿಲ್ಲ: ಮಾಜಿ ಸಿಎಂ ಬೊಮ್ಮಾಯಿ

ರಾಜ್ಯದ ಜನತೆ ಇನ್ನೊಂದು ಬಾರಿ ಮೋದಿಯವರು ದೇಶದ ಪ್ರಧಾನಿಯಾಗಬೇಕು ಎಂದು ತೀರ್ಮಾನಿಸಿದ್ದಾರೆ ಎಂದರು. ಮೋದಿಜಿಯವರು ದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ದೇಶದ ಜನರ ಸುಭದ್ರ ಶಾಶ್ವತ ಬದಕುನ್ನು ಕಲ್ಪಿಸುವ ಗ್ಯಾರಂಟಿ ನೀಡುತ್ತಿದ್ದಾರೆ. ಕೇಂದ್ರ ಸರಕಾರ ನಾಲ್ಕು ವರ್ಷದಲ್ಲಿ ಜನರಿಗೆ ವಿವಿಧ ಯೋಜನೆ ನೀಡಿದೆ. ಮೋದಿಯವರನ್ನು ದೇಶದ ಜನತೆ ಮತ್ತೆ ಪ್ರಧಾನಿಯಾಗಿ ಮಾಡುತ್ತಾರೆ ಎಂದು ಹೇಳಿದರು. ಮಾಜಿ ಶಾಸಕ ಬಿ.ಸಿ. ಪಾಟೀಲ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರಿಗೆ ಲೋಕಸಭಾ ಚುನಾವಣೆ ಟಿಕೆಟ್ ದೊರಕಿರುವದು ಸಂತಸದ ಸುದ್ದಿ, ಅದರಲ್ಲಿ ಅಪಸ್ವರ ಇಲ್ಲ. 

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ೧೦ ತಿಂಗಳಾದರೂ ನಮ್ಮ ತಾಲೂಕಿನ ಅಭಿವೃದ್ಧಿಗೆ ಹಣ ಬಂದಿಲ್ಲ. ಬರೀ ಗ್ಯಾರಂಟಿಗಳ ಹೆಸರಲ್ಲಿ ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ರಾಜ್ಯದ ಜನರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಭೀಕರ ಬರಗಾಲದಲ್ಲಿ ಬೆಲೆ ಏರಿಕೆಯ ಮೂಲಕ ಗಂಡಸರ ಜೇಬಿನಿಂದ ಹಣ ವಸೂಲಿ ಮಾಡಿ ಹೆಂಗಸರಿಗೆ ಕೊಡುತಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿ ಇಲ್ಲ, ಕೇವಲ ಜನರ ಸುಲಿಗೆ ಮಾತ್ರ ನಡೆಯುತ್ತಿದೆ. ಹಿರೇಕೆರೂರು ತಾಲೂಕಿನ ಅಭಿವೃದ್ಧಿಗೆ ವಿವಿಧ ಯೋಜನೆಗಳಿಗೆ ೧೩೦೦ ಕೋಟಿ ರು.ಗಳ ಅನುದಾನ ತಂದಿದ್ದೆ, ಆದರೆ ೧೦ ತಿಂಗಾಳಾದರೂ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಿಲ್ಲ, 

ರೈತರಿಗೆ ನೀರು ಒದಗಿಸಿಲ್ಲ.ನಮ್ಮ ಸರಕಾರದ ಅಧಿಕಾರದ ಅವಧಿಯಲ್ಲಿ ತಾಲೂಕಿಗೆ ಎರಡು ನೀರಾವರಿ ಯೋಜನೆಗಳನ್ನು ತಂದಿದ್ದೆ, ಅವು ಕೂಡ ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ಬರಿ ನುಡಿದಂತೆ ನಡೆದಿದ್ದೇವೆ ಎಂದು ಭಾಷಣ ಮಾಡುತ್ತಾ ಸಾಗಿದ್ದಾರೆ. ರಾಜ್ಯದ ಜನತೆ ಇವರ ಆಡಳಿತದ ವೈಖರಿಯನ್ನು ಗಮನಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವ ಮೂಲಕ ತಕ್ಕ ಪಾಠ ಕಳಿಸಲು ಸಿದ್ಧರಾಗಿದ್ದಾರೆ. ನಮ್ಮ ಕಾರ್ಯಕರ್ತರು ತಾಲೂಕಿನ ಗ್ರಾಮಗಳ ಪ್ರತಿಯೊಂದು ಮನೆಗೆ ತೆರಳಿ ಮೋದಿಜಿಯವರು ದೇಶಕ್ಕೆ ನೀಡಿರುವ ಯೋಜನೆಗಳ ಬಗ್ಗೆ ಮನವರಿಕೆ ಮಾಡಬೇಕು ಹಾಗೂ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆ ಆಗುವಂತೆ ಶ್ರಮ ವಹಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಇನ್ಸ್ಟಾಗ್ರಾಂ ಮೂಲಕ ಲವ್: ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯ್ತೀನಿ ಎಂದ ಮಹಿಳೆ!

ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಹಿರೇಕೆರೂರ ತಾಲೂಕಿನ ಜನತೆ ಬಿಜೆಪಿಗೆ ಮತ ಹಾಕುವ ಮೂಲಕ ಮತ್ತೊಮ್ಮೆ ಮೋದಿಜಿಯವರನ್ನು ಪ್ರಧಾನಿ ಮಾಡಬೇಕು ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರು ಲೋಕಸಭೆಗೆ ಆಯ್ಕೆಯಾಗಿ ಕೆಂದ್ರ ಸಚಿವರಾಗುವ ಹಾಗೇ ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸೃಷ್ಟಿ ಪಾಟೀಲ. ಡಿ.ಎಮ್. ಸಾಲಿ, ಎನ್.ಎಮ್. ಈಟೇರ, ಲಿಂಗರಾಜ ಚಪ್ಪರದಹಳ್ಳಿ, ಆರ್.ಎನ್. ಗಂಗೋಳ, ಶಿವಕುಮಾರ ತಿಪ್ಪಶೇಟ್ಟಿ, ದೇವರಾಜ ನಾಗಣ್ಣನವರ, ದುರಗೇಶ ತಿರಕಪ್ಪನವರ, ಬಸವರಾಜ ಕೇಲಗಾರ, ಆನಂದಪ್ಪ ಹಾದಿಮನಿ, ಬಸಮ್ಮ ಅಬಲೂರ, ಶೋಭಾ ನಿಸ್ಸಿಮಗೌಡ್ರ, ಭಾರತಿ ಅಳಬಂಡಿ, ಡಿ.ಸಿ. ಪಾಟೀಲ, ರವಿಶಂಕರ ಬಾಳಿಕಾಯಿ, ಬಿ.ಎನ್. ಬಣಕಾರ ಹಾಗೂ ಬಿಜೆಪಿ ವಿವಿಧ ಮಂಡಳಗಳ ಸದಸ್ಯರು, ಕಾರ್ಯಕರ್ತರು ಇದ್ದರು.

click me!