ಆ ಮನುಷ್ಯ ಪ್ರತಾಪ್ ಸಿಂಹ ಪಾಸ್ ಕೊಡೊ ವೇಳೆ ಪೂರ್ವಾಪರ ಯೋಚನೆ ಮಾಡಿ ಕೊಡಬೇಕಿತ್ತು ಘಟನೆ ಮಾಡಿರೋರು ಯಾರು ಗೊತ್ತಾ ಹತಾಶೆಯಾಗಿರೋರು ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಜಿ ಸಚಿವ ಎಚ್ ಆಂಜನೇಯ ಕಿಡಿಕಾರಿದರು.
ರಾಯಚೂರು (ಡಿ.17): ಆ ಮನುಷ್ಯ ಪ್ರತಾಪ್ ಸಿಂಹ ಪಾಸ್ ಕೊಡೊ ವೇಳೆ ಪೂರ್ವಾಪರ ಯೋಚನೆ ಮಾಡಿ ಕೊಡಬೇಕಿತ್ತು ಘಟನೆ ಮಾಡಿರೋರು ಯಾರು ಗೊತ್ತಾ ಹತಾಶೆಯಾಗಿರೋರು ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಜಿ ಸಚಿವ ಎಚ್ ಆಂಜನೇಯ ಕಿಡಿಕಾರಿದರು.
ಇಂದು ರಾಯಚೂರು ನಗರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಸತ್ತಿನೊಳಗೆ ಹೊಗೆ ಬಾಂಬ್ ಸ್ಫೋಟಿಸಿದ ವಿಚಾರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನಿರುದ್ಯೋಗ ಸಮಸ್ಯೆ,ಬಡತನ,ಅಸ್ಪೃಷ್ಯತೆ, ಮಹಿಳೆಯರ ಮೇಲೆ ಅತ್ಯಾಚಾರ ಇಂಥ ಅನೇಕ ಸಮಸ್ಯೆಗಳಿಗೆ ಕಡಿವಾಣ ಹಾಕುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ನಿರುದ್ಯೋಗ, ಯುವಕರ ಬಗ್ಗೆ ಚಿಂತನೆ ಮಾಡ್ತಿಲ್ಲ ಅಂತ ಯುವಕರು ಆಕ್ರೋಶಗೊಂಡು ಆ ರೀತಿ ಪ್ರತಿಭಟಿಸಿದ್ದಾರೆ. ಅವರು ಗಮನ ಸೆಳೆಯಲಿಕ್ಕೆ ಹಾಗೆ ಮಾಡಿದ್ದಾರೆ. ಜೀವ ತೆಗೆಯೋದಕ್ಕೆ ಯತ್ನಿಸಿದ್ದಲ್ಲ ಅಂತ ಅನ್ನಿಸುತ್ತೆ ಎಂದರು.
undefined
ಪಾರ್ಲಿಮೆಂಟ್ ಭದ್ರತಾ ಲೋಪಕ್ಕೆ ರಾಜ್ಯದ ನಂಟು: ಪ್ರತಾಪ್ ಸಿಂಹ ಕಚೇರಿಯಿಂದ ಮನೋರಂಜನ್‌ಗೆ ಸಿಕ್ಕಿತಾ ಪಾಸ್ ?
ಒಂದು ವೇಳೆ ಕಾಂಗ್ರೆಸ್ನವ್ರು ಪಾಸ್ ಕೊಟ್ಟಿದ್ರೆ ಏನಾಗ್ತಿತ್ತು ಗೊತ್ತಾ? ನಮ್ಮ ಮುಸ್ಲಿಂ ಬಾಂಧವರು ಅದರಲ್ಲಿದ್ರೆ ಎಲ್ಲೆಲ್ಲಿ ಹೋಲಿಸ್ತಿದ್ರಿ. ದಿನವೆಲ್ಲ ಭಜನೆ ಮಾಡ್ತಿದ್ರಿ. ಕಾಂಗ್ರೆಸ್ ನವ್ರು ಪಾಸ್ ಕೊಟ್ಟಿದ್ರೆ ಆವತ್ತೆ ವಜಾ ಇಲ್ಲ ಸಸ್ಪೆಂಡ್ ಮಾಡ್ತಿದ್ರು. ಪ್ರತಾಪ್ ಸಿಂಹ ಮೇಲೆ ಕ್ರಮಕೈಗೊಳ್ಳಿ ಯಾಕಂದ್ರೆ ಎಚ್ಚರಿಕೆ ಬೇಡ್ವಾ? ಎಂದು ಪ್ರಶ್ನಿಸಿದರು.
ಇನ್ನು ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ನಾಯಕರ ಸರಣಿ ವಾಗ್ದಾಳಿ ವಿಚಾರ ಪ್ರಸ್ತಾಪಿಸಿದ ಮಾಜಿ ಸಚಿವರು, ಯತ್ನಾಳ್, ವಿಜಯೇಂದ್ರ, ಅಶೋಕ್ ಇರೋದು ಕಾಂಗ್ರೆಸ್ ನಾಯಕರನ್ನ ವೈಭವೀಕರಿಸಿ, ಅಲಂಕರಿಸಿ ಅನಾವರಣ ಮಾಡೋದಕ್ಕಲ್ಲ. ಟೀಕೆ ಮಾಡ್ಬೇಕು ಮಾಡ್ಲಿಬಿಡಿ. ಆದರೆ ಮಾತಾಡಿದ್ರೆ ಅದಕ್ಕೊಂದು ತೂಕ ಇರಬೇಕು. ಆಡಳಿತ ಪಕ್ಷಕ್ಕೆ ಅಂಕುಶ ಹಾಕೋ ಶಕ್ತಿ ಇರಬೇಕು. ವೈಯಕ್ತಿಕ ಟೀಕೆ ಮಾಡೋದು. ಬಹಳ ಹಗುರವಾಗಿ ಮಾತನಾಡೋದು ಮಾಡ್ತಿದ್ದಾರೆ. ಅಸಂಸದೀಯ ಪದ ಬಳಕೆ ಮಾಡ್ತಿದ್ದಾರೆ ಎಂದು ಟೀಕಿಸಿದರು.
ಸಂಸತ್‌ನಲ್ಲಿ ಭದ್ರತಾ ಲೋಪ: 8 ಲೋಕಸಭೆ ಸಿಬ್ಬಂದಿ ಅಮಾನತು, ಆರೋಪಿಗಳ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿನ ಬಗ್ಗೆ ನಾನು ಏನು ಹೇಳಲಿಕ್ಕೆ ಬರೊಲ್ಲ. ಹೆಸರಿಡೋ ಬಗ್ಗೆ ಸರ್ಕಾರ, ಸಿಎಂ, ಜನಾಭಿಪ್ರಾಯದ ಮೇಲೆ ಇದ್ದಾರೆ. ನನ್ನ ಅಭಿಪ್ರಾಯ ಇಲ್ಲಿ ಮುಖ್ಯವಾಗಲ್ಲ. ಸಿಎಂ ಏನು ತೀರ್ಮಾನ ತಗೋತಾರೋ ಅದನ್ನು ಸ್ವಾಗತ ಮಾಡ್ತೇವೆ ಎಂದರು.