ಸಂಸತ್ ಭದ್ರತಾ ಲೋಪ ಪ್ರಕರಣ: ಪ್ರತಾಪ ಸಿಂಹ ವಿರುದ್ಧ ನಡೆದಿದೆ ಭಾರೀ ಸಂಚು, ಯತ್ನಾಳ್ ಹೇಳಿದ್ದೇನು?

By Kannadaprabha News  |  First Published Dec 17, 2023, 5:23 AM IST

ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮನೋರಂಜನ್ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್ ಪಡೆದದ್ದು, ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.


ಬೆಂಗಳೂರು (ಡಿ.17): ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮನೋರಂಜನ್ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ ಪಾಸ್ ಪಡೆದದ್ದು, ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಈ ಘಟನೆಗೆ ಸಂಸದ ಪ್ರತಾಪ್ ಸಿಂಹ ಅವರೇ ಕಾರಣ. ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಇದು ಪ್ರತಾಪ್ ಸಿಂಹ ವಿರುದ್ಧ ಮಾಡಿರುವ ಸಂಚು ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ..

Tap to resize

Latest Videos

ಪಾರ್ಲಿಮೆಂಟ್ ಭದ್ರತಾ ಲೋಪ‌ ; ಸಂಸದ ಪ್ರತಾಪ ಸಿಂಹ ವಿರುದ್ಧ ಎಚ್‌ ವಿಶ್ವನಾಥ ವಾಗ್ದಾಳಿ!

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹರನ್ನು ಎದುರಿಸಲಾಗದೆ ರಣಹೇಡಿಗಳು ರೂಪಿಸಿರುವ ಸಂಚಿನ ಜಾಲವಿದು. ಸಂಸತ್ ಪ್ರವೇಶಕ್ಕೆ ಅವರದೇ ಕ್ಷೇತ್ರದ ಮನುಷ್ಯ ಪಾಸ್ ಕೇಳಿದ್ದಕ್ಕೆ ಸಹಜವಾಗಿ ಶಿಫಾರಸ್ಸು ಮಾಡಿದ್ದಾರೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ಸಂಪೂರ್ಣ ತನಿಖೆಯಾಗಲಿ, ಜೊತೆಯಲ್ಲಿ ಈ ToolKit ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಮೈಸೂರು ಸಂಸದ ಪ್ರತಾಪ್ ಸಿಂಹ ಕಚೇರಿಗೆ ನುಗ್ಗಲು ಕಾಂಗ್ರೆಸ್ ಕಾರ್ಯಕರ್ತರು ಯತ್ನ!

ಇದಕ್ಕೂ ಮುನ್ನಾ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯಸಭಾ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಈ ಪ್ರಕರಣದಲ್ಲಿ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನಾಯಕರು ಬೇಕೆಂದೇ ಷಡ್ಯಂತ್ರ ನಡೆಸಿದ್ದಾರೆ.ಮೈಸೂರು ಲೋಕಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರನ್ನು ಕಣಕ್ಕಿಳಿಸುವ ಮಾತುಗಳು ಕೇಳಿಬರುತ್ತಿವೆ. ಇದನ್ನೇ ಮುಂದಿಟ್ಟುಕೊಂಡು ಸಂಸತ್ ಮೇಲೆ ಸ್ಮೋಕ್ ಬಾಂಬ್ ದಾಳಿ ಮಾಡಿಸಿ ಮಗನನ್ನು ಗೆಲ್ಲಿಸಲು ಸಂಸದ ಪ್ರತಾಪ್ ಸಿಂಹ ವಿರುದ್ಧ ಸಿದ್ದರಾಮಯ್ಯ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಾಪ್ ಸಿಂಹರನ್ನು ಎದುರಿಸಲಾಗದೆ ರಣಹೇಡಿಗಳು ರೂಪಿಸಿರುವ ಸಂಚಿನ ಜಾಲವಿದು.

ಸಂಸತ್ ಪ್ರವೇಶಕ್ಕೆ ಅವರದೇ ಕ್ಷೇತ್ರದ ಮನುಷ್ಯ ಪಾಸ್ ಕೇಳಿದ್ದಕ್ಕೆ ಸಹಜವಾಗಿ ಶಿಫಾರಸ್ಸು ಮಾಡಿದ್ದಾರೆ.

ಪ್ರಕರಣದ ಬಗ್ಗೆ ಉನ್ನತ ಮಟ್ಟದ ಸಂಪೂರ್ಣ ತನಿಖೆಯಾಗಲಿ, ಜೊತೆಯಲ್ಲಿ ಈ ToolKit ಬಗ್ಗೆಯೂ ತನಿಖೆಯಾಗಬೇಕು.

— Basanagouda R Patil (Yatnal) (@BasanagoudaBJP)
click me!